ಭಾರತದಲ್ಲಿ ಸ್ಟಾರ್ ಲಿಂಕ್ (Starlink) ಇಂಟರ್ನೆಟ್ ಸೇವೆ ಒದಗಿಸಲು ದಾರಿ ಇದೀಗ ಸುಗಮವಾಗಿದೆ. ಎಲಾನ್ ಮುಸ್ಕ್ ಕಂಪನಿ ಯು ಭಾರತದ ಕೇಂದ್ರ ಸರಕಾರದಿಂದ ಅಧಿಕೃತ ಪರವಾನಿಗೆಯನ್ನು ಪಡೆದುಕೊಂಡಿದೆ. ಜಿಯೋ ಹಾಗು ಭಾರ್ತಿ ಏರ್ಟೆಲ್ ಬೆಂಬಲಿತ ಒನ್ ವೆಬ್ ಈಗಾಗಲೇ ಈ GMPCS ಪರವಾನಿಗೆಯನ್ನು ಪಡೆದುಕೊಂಡಿದೆ. ಈ ಸ್ಪೆಕ್ಟ್ರಮ್ ಹಂಚಿಕೆಯಿಂದ ಭಾರತದಲ್ಲ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ದಾರಿ ಸುಗಮವಾಗಿದೆ. ಈ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ನಿಮಗೂ ಬೇಕು ಅಂತಾದರೆ ಸ್ಟಾರ್ ಲಿಂಕ್ ನ ಈ 810 ರೂಪಾಯಿ ಯೋಜನೆಯಲ್ಲಿ ಏನೆಲ್ಲಾ ಬರುತ್ತದೆ ಎನ್ನುವುದನ್ನು ನೀವು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಈ ಕಿಟ್ ಗು ಮೊದಲು ನೀವು ಎಷ್ಟು ಹಣ ಪಾವತಿ ಮಾಡಬೇಕಾಗುತ್ತದೆ?
ಸ್ಟಾರ್ ಲಿಂಕ್ ಕಿಟ್: ವರದಿಗಳ ಪ್ರಕಾರ ಸ್ಟಾರ್ ಲಿಂಕ್ ಕಿಟ್ (Starlink Kit) ನಲ್ಲೂ 4 ಪ್ರಮುಖ ಅಂಶಗಳಿವೆ. ಈ ಕಿಟ್ ಅಲ್ಲಿ ಸ್ಟಾರ್ ಲಿಂಕ್ ಡಿಶ್, ವೈ-ಫೈ, ರೂಟರ್, ಹಾಗು ವಿದ್ಯುತ್ ಸರಬರಾಜಾಗಳು ಒಂದು ಕೇಬಲ್ ಮತ್ತು ಮೌಂಟಿಂಗ್ ಟ್ರೈಪಾಡ್ ಇರುತ್ತದೆ. ಡಿಟಿಎಚ್ ನಂತೆಯೇ ಈ ಸ್ಟಾರ್ ಲಿಂಕ್ ಇಂಟರ್ನೆಟ್ ಡಿಶ್ ಮೂಲಕ ರೂಟರ್ ಗೆ ತಲುಪಿ ನಿಮ್ಮ ಮೊಬೈಲ್ ಹಾಗು ಲ್ಯಾಪ್ಟಾಪ್ ಟಿವಿ ಗಳಿಗೆ ಇಂಟರ್ನೆಟ್ ತಲುಪುತ್ತದೆ.

810 ರೂಪಾಯಿಗಳ ರಿಚಾರ್ಜ್ ಯೋಜನೆ ಯಲ್ಲಿ ಏನೇನಿದೆ?
ಸ್ಟಾರ್ ಲಿಂಕ್ (Starlink) ನ ಮಾಸಿಕ ಯೋಜನೆಯ ಬೆಲೆ ಎಷ್ಟು ಎಂದು ಇನ್ನು ಅಧಿಕೃತವಾಗಿ ಹೇಳಿಲ್ಲ. ಎಕನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ ಮಾಸಿಕ ಬೆಲೆ 810 ರೂಪಾಯಿಗಳಷ್ಟು ಇರಲಿದೆ. ಆದರೆ ಇನ್ಸ್ಟಾಲೇಷನ್ ವೆಚ್ಚ ಕೂಡ ಇಲ್ಲಿ ಹೆಚ್ಚಿನದಾಗಿ ಇರಲಿದೆ. ಇದು ಸಾಮಾನ್ಯ ಜನರಿಗೆ ಬೆಲೆ ಹೆಚ್ಚಳದಂತೆ ಕಾಣಬಹುದು. ಇದು ಕಿಟ್ ನ ವೆಚ್ಚ ಕೂಡ ಒಳಗೊಂಡಿರುತ್ತದೆ. ಸಾಮಾನ್ಯ ಜನರ ಕೈಗೆಟುಕುವುದ್ ಕಷ್ಟ ಎಂದು ಹೇಳಿದರೆ ತಪ್ಪಾಗಲಾರದು.
ಸ್ಟಾರ್ ಲಿಂಕ್ ಕಿಟ್ ಬೆಲೆ ಎಷ್ಟು?
ವಿವಿಧ ವೆಬ್ಸೈಟ್ ಗಳನ್ನೂ ಪರಿಶೀಲಿಸಿದ ನಂತರ US ಹಾಗು ಕೀನ್ಯಾದ (starlink) ಬೆಲೆಯಲ್ಲಿ ವ್ಯತ್ಯಾಸವಿದೆ. ಭಾರತದ ರುಪಾಯಿಗೆ ಈ ಬೆಳೆಯನ್ನು ಹೋಲಿಸಿದರೆ ಕಿಟ್ ಬೆಲೆ ಸುಮಾರು 30 ರಿಂದ 36 ಸಾವಿರಗಳಷ್ಟಿರಲಿದೆ. ಇದರರ್ಥ ನೀವು ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆ ಪಡೆಯುವ ಮೊದಲು ಈ ಕಿಟ್ ಗೆ ಸುಮಾರು 30-36 ಸಾವಿರ ರೂಪಾಯಿಗಳಷ್ಟು ಪಾವತಿ ಮಾಡಬೇಕಾಗುತ್ತದೆ. ಇನ್ನು ಇನ್ಸ್ಟಾಲೇಷನ್ ಬೆಲೆ ಇದರ ಹೊರತಾಗಿ ಇರುವುದರಿಂದ ಈ ಸೇವೆ ಸಾಮಾನ್ಯ ಜನರ ಕೈ ಸುಡಬಹುದು. ಸಬ್ಸಿಡಿ ಯೋಜನೆ ಇದಕ್ಕೆ ಸಿಗಬಹುದೋ ಇಲ್ಲವೋ ಇನ್ನಷ್ಟೇ ಗೊತ್ತಾಗಬೇಕಿದೆ. ಅಂತಿಮ ಬೆಲೆ ಎಷ್ಟಿರಬಹುದು ಎನ್ನುವುದು ನಾವು ಅಧಿಕೃತ ಮಾಹಿತಿಗೆ ಕಾದು ನೋಡಬೇಕಷ್ಟೆ.