ನೀವು ಪದವೀಧರರಾಗಿದ್ದು ಹಾಗು ಸರಕಾರಿ ಕೆಲಸವನ್ನು ಹುಡುಕುತ್ತಿದ್ದರೆ ಈ NICL ನೇಮಕಾತಿ ಸುದ್ದಿ ನಿಮಗೆ ಒಂದು ಸುವರ್ಣಾವಕಾಶ ನೀಡುತ್ತಿದೆ. NICL (ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್) ಜೆನೆರಾಲಿಸ್ಟ್ ಮತ್ತು ಸ್ಪೆಷಲಿಸ್ಟ್ (ಕೇಡರ್ -1) ಹುದ್ದೆಗಳಿಗಾಗಿ ನೇಮಕಾತಿ ಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನೇಮಕಾತಿ ಮೂಲಕ ದೇಶದಾದ್ಯಂತ ಅರ್ಹ ಯುವಕರಿಗೆ ಸರಕಾರಿ ಉದ್ಯೋಗ ನೀಡುತ್ತಿದೆ.
ಈ ನೇಮಕಾತಿಗೆ ಆನ್ಲೈನ್ ಅರ್ಜಿ ಅಹ್ವಾನ ಪ್ರಕ್ರಿಯೆ 12 ಜೂನ್ 2025 ರಿಂದ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು https://nationalinsurance.nic.co.in/ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಅರ್ಜಿ ಅಹ್ವಾನ ಕೊನೆಯ ದಿನಾಂಕ ಜೂಲೈ 3, 2025 ರವರೆಗೆ ಇರಲಿದೆ. ನೆನಪಿಡಬೇಕಾದ ಸಂಗತಿ ಎಂದರೆ ಅರ್ಜಿಯನ್ನು ಆನ್ಲೈನ್ ಮೂಲಕವಷ್ಟೇ ಸಲ್ಲಿಸಬೇಕಾಗುತ್ತದೆ. ಬೇರೆ ವಿಧಾನದ ಅರ್ಜಿಗಳು ಮಾನ್ಯವಾಗಿರುವುದಿಲ್ಲ.
ಅರ್ಜಿಸಲ್ಲಿಸಲು ಯಾರೆಲ್ಲ ಅರ್ಹರು?
ಈ ನೇಮಕಾತಿಗೆ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಸ್ನಾತಕೋತ್ತರ ಪದವಿ, ಬಿಇ, ಬಿಟೆಕ್, ಎಂಟೆಕ್, ಬಿಕಾಂ, ಎಂಕಾಂ, ಸಿಏ, ಕಾನೂನು, ಎಂಬಿಬಿಎಸ್, ಎಂಎಸ್, ಅಥವಾ ಸಂಬಂದಿತ ವಿಷಯಗಳಲ್ಲಿ ಪಿಜಿ ಪದವಿಯನ್ನು ಹೊಂದಿರಬೇಕು.

ಇನ್ನು ವಯಸ್ಸಿನ ವಿಷಯಕ್ಕೆ ಬರುವುದಾದರೆ, ಅರ್ಜಿದಾರರ ಕನಿಷ್ಠ ವಯಸ್ಸು 21 ವರ್ಷಗಳಿಗಿಂತ ಕಡಿಮೆ ಇರಬಾರದು ಹಾಗು 30 ವರ್ಷಗಳಿಗಿಂತ ಹೆಚ್ಚಿರಬಾರದು. ಆದರೂ ನಿಯಮಗಳ ಪ್ರಕಾರ ಮೀಸಲು ವರ್ಗಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. ವಯಸ್ಸನ್ನು ಮೇ 1, 2025 ರವರೆಗಿನ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಜೂನ್ 12, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂಲೈ 3, 2025
ಫಾರಂ ಮುದ್ರಿಸಲು (print) ಕೊನೆಯ ದಿನಾಂಕ : ಜೂಲೈ 18, 2025
ಮೊದಲ ಹಂತದ ಪರೀಕ್ಷೆ ದಿನಾಂಕ : ಜೂಲೈ 20, 2025
ಎರಡನೇ ಹಂತದ ಪರೀಕ್ಷೆ ದಿನಾಂಕ : ಆಗಸ್ಟ್ 31, 2025
ಅರ್ಜಿ ಶುಲ್ಕ: ಸಾಮಾನ್ಯ್, ಒಬಿಸಿ ಹಾಗು ಈಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ತಲಾ 1000 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. SC/ST/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ 250 ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
- ಮೊದಲಿಗೆ NICL ವೆಬ್ಸೈಟ್ https://nationalinsurance.nic.co.in/ ಗೆ ಭೇಟಿ ನೀಡಿ.
- ಮುಖಪುಟದಲ್ಲಿ “ನೇಮಕಾತಿ” ವಿಭಾಗಕ್ಕೆ ಹೋಗಿ.
- ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಹೊಸ ನೋಂದಣಿ ಗೆ ಹೋಗಿ ನಿಮ್ಮನ್ನು ನೀವು ನೋಂದಣಿ ಮಾಡಿಸಿಕೊಳ್ಳಿ.
- ಅಗತ್ಯ ಮಾಹಿತಿಯನ್ನು ಭಾರ್ತಿ ಮಾಡಿ ನಿಮ್ಮ ಫೋಟ್ ಹಾಗು ಸಹಿ ಯನ್ನ ಅಪ್ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಭಾರ್ತಿ ಮಾಡಿ.
- ಕೊನೆಗೆ ಫಾರಂ ಪ್ರಿಂಟೌಟ್ ತೆಗೆದು ಭದ್ರವಾಗಿ ಇಟ್ಟುಕೊಳ್ಳಿ. ಇದು ನಿಮಗೆ ಪರೀಕ್ಷೆ ಸಮಯದಲ್ಲಿ ಬೇಕಾಗುತ್ತದೆ.