Chandana News

Kannada Trending News

Chandana News

Kannada Trending News

BusinessTrending

Bank Collapse: ಬ್ಯಾಂಕ್ ಗಳು ದಿವಾಳಿ ಆದರೆ ಅಥವಾ ಮುಚ್ಚಿದರೆ ನಿಮಗೆ ಎಷ್ಟು ಹಣ ಸಿಗುತ್ತದೆ? ಬ್ಯಾಂಕ್ ನಿಯಮಗಳು ಏನು ಹೇಳುತ್ತದೆ?

ದೇಶದಲ್ಲಿ ಸರಿಸುಮಾರು 97619 ಬ್ಯಾಂಕ್ ಗಳಿವೆ. ಅವುಗಳಲ್ಲಿ ಹೆಚ್ಚಿನ ಅಂದರೆ 96000 ದಷ್ಟು ಗ್ರಾಮೀಣ ಸಹಕಾರಿ ಬ್ಯಾಂಕ್ ಗಳು ಉಳಿದವು 1485 ನಗರ ಸರಕಾರಿ ಬ್ಯಾಂಕ್ ಗಳು. ಇದಲ್ಲದೆ ದೇಶದಲ್ಲಿ 12 ಸಾರ್ವಜನಿಕ ವಲಯದ ಬ್ಯಾಂಕ್ ಗಳು, 22 ಖಾಸಗಿ ವಲಯ, 44 ವಿದೇಶ ಬ್ಯಾಂಕುಗಳು, 56 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿವೆ. ಆದರೆ ಹೆಚ್ಚಿನವರು ತಮ್ಮ ಠೇವಣಿ ದೊಡ್ಡ ದೊಡ್ಡ ಬ್ಯಾಂಕ್ ಗಳಲ್ಲಿ ಇಡುತ್ತಾರೆ. ವಿಶೇಷವಾಗಿ ಸರಕಾರಿ ಬ್ಯಾಂಕ್ ಗಳಲ್ಲಿ ಇಡುತ್ತಾರೆ. ಅಂದಹಾಗೆ ದೇಶದ ದೊಡ್ಡ ಬ್ಯಾಂಕ್ ಗಳ ಬಗ್ಗೆ ಮಾತಾಡುವುದಾದರೆ HDFC ಬ್ಯಾಂಕ್, ICICI ಹಾಗು ಮೂರನೇ ಸ್ಥಾನದಲ್ಲಿ SBI ಬ್ಯಾಂಕ್ ಬರುತ್ತದೆ.

ಹೆಚ್ಚಿನ ಜನರು ದೊಡ್ಡ ದೊಡ್ಡ ಬ್ಯಾಂಕ್ ಗಳಲ್ಲಿ ಹಣ ಠೇವಣಿ ಇಡುತ್ತಾರೆ ಹಾಗೇನೇ ಅಲ್ಲಿ ಹೆಚ್ಚಿನವು ಫಿಕ್ಸೆಡ್ ಡೆಪಾಸಿಟ್ (Fixed Deposite) ಅಲ್ಲಿ ಹೂಡಿಕೆ ಆಗಿರುತ್ತದೆ. ಈ ಅಂಕಿ ಅಂಶಗಳು ಬಹುಷ್ಯ ಎಲ್ಲರಿಗೆ ತಿಳಿದೇ ಇರುತ್ತದೆ. ನಾವು ದೊಡ್ಡ ಬ್ಯಾಂಕ್ ಲೆಕ್ಕಹಾಕಿದರೆ ದೇಶದಲ್ಲಿ ಸುಮಾರು 80 ಬ್ಯಾಂಕುಗಳಿವೆ. ದೇಶದಲ್ಲಿ ಒಟ್ಟಾರೆ ಬ್ಯಾಂಕುಗಳ ಸಂಖ್ಯೆ 96000 ಕ್ಕೂ ಅಧಿಕ ಇರುವಾಗ ಈ ಬ್ಯಾಂಕ್ ಗಳಲ್ಲಿ ಹಣ ಠೇವಣಿ ಮಾಡುವುದು ಸುರಕ್ಷಿತ ಅಲ್ಲವೇ ಎನ್ನುವ ಅನುಮಾನ ಬರುತ್ತವೆ.

ಇಂದು ಎಲ್ಲರ ಬಳಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಬ್ಯಾಂಕ್ ಅಕೌಂಟ್ ಇದ್ದೆ ಇದೆ. ಜನರು ಕಷ್ಟಪಟ್ಟು ದುಡಿದ ಹಣವನ್ನ ಬ್ಯಾಂಕ್ ಗಳಲ್ಲಿ ಉಳಿತಾಯ ಮಾಡುತ್ತಾರೆ. ಹಾಗೇನೇ ಬ್ಯಾಂಕ್ ಗಳು ಈ ಹಣಕ್ಕೆ ಇಷ್ಟು ಪ್ರತಿಶತ ಬಡ್ಡಿ ಹಣ ನೀಡುತ್ತದೆ. ಜನರು ಬ್ಯಾಂಕ್ ನಲ್ಲಿ ಹಣ ಇಡುವುದು ಸುರಕ್ಷಿತ ಎಂದು ಭಾವಿಸುತ್ತಾರೆ. ಆದರೆ ಬ್ಯಾಂಕ್ ಗಳು ಒಂದು ವೇಳೆ ದಿವಾಳಿ (Bankrupt) ಆದರೆ ಅಥವಾ ಬ್ಯಾಂಕ್ ಗಳು ಮುಚ್ಚಿದರೆ ನಿಮ್ಮ ಹಣ ಏನಾಗುತ್ತದೆ? ಈ ಸಂಧರ್ಭದಲ್ಲಿ ಬ್ಯಾಂಕ್ ಗಳ ಖಾತೆದಾರರಿಗೆ ಎಷ್ಟು ಹಣ ಸಿಗುತ್ತದೆ. ಕಾನೂನು ಏನು ಹೇಳುತ್ತದೆ ಇದರ ಬಗ್ಗೆ?

bank collapse

ಬ್ಯಾಂಕ್ ಗಳು ಯಾಕೆ ದಿವಾಳಿ ಆಗುತ್ತದೆ?

ಬ್ಯಾಂಕ್ ಗಳು ಯಾವ ಸಮಯದಲ್ಲಿ ದಿವಾಳಿ ಘೋಷಣೆ ಮಾಡುತ್ತದೆ? ಇದಕ್ಕೆ ಅನೇಕ ಕಾರಣಗಳಿರಬಹುದು ಆದರೆ ಮುಖ್ಯ ಕಾರಣ ಬ್ಯಾಂಕುಗಳ ಖರ್ಚು ಅದರ ಆಧಾಯ ಹಾಗು ಆಸ್ತಿಗಳಿಗಿಂತ ಹೆಚ್ಚಾದರೆ ಬ್ಯಾಂಕ್ ಗಳು ಮುಚ್ಚುತ್ತದೆ ಹಾಗೇನೇ ದಿವಾಳಿ ಎಂದು ಘೋಷಣೆ ಮಾಡಿಕೊಳ್ಳುತ್ತದೆ.

ಬ್ಯಾಂಕ್ ದಿವಾಳಿ ಆದರೆ ಖಾತೆ ಹೊಂದಿರುವವರಿಗೆ ಎಷ್ಟು ಹಣ ಬರುತ್ತದೆ?

ನೀವು ಠೇವಣಿ ಇಟ್ಟಿರುವ ಬ್ಯಾಂಕ್ ಒಂದು ವೇಳೆ ದಿವಾಳಿ ಎಂದು ಘೋಷಿಸಿದರೆ ಹಾಗೇನೇ ಮುಚ್ಚಿದರೆ ನಿಮಗೆ 5 ಲಕ್ಷ ತನಕ ಹಣ ಸಿಗುತ್ತದೆ. ನೀವು ಇದಕ್ಕಿಂತ ಎಷ್ಟೇ ಹೆಚ್ಚಿನ ಹಣ ಇಟ್ಟಿದ್ದರು ಕೂಡ ನಿಮಗೆ 5 ಲಕ್ಷ ಮಾತ್ರ ಸಿಗುತ್ತದೆ. ಹಾಗೇನೇ ನೀವು 5 ಲಕ್ಷಕ್ಕಿಂತ ಕಡಿಮೆ ಹಣ ಇಟ್ಟಿದ್ದಾರೆ ನಿಮಗೆ ಎಷ್ಟು ಹಣ ಇಟ್ಟಿದ್ದೀರಾ ಅಷ್ಟು ಹಣ ಸಿಗುತ್ತದೆ. ಈ ನಿಯಮ ಬಹುತೇಕ ಎಲ್ಲ ಸರಕಾರಿ ಹಾಗು ಖಾಸಗಿ ಬ್ಯಾಂಕ್ ಗಳಲ್ಲಿ ಅನ್ವಯವಾಗುತ್ತದೆ ಹಾಗೇನೇ ಒಂದೇ ರೀತಿ ಇರುತ್ತದೆ. 2020 ಫೆಬ್ರವರಿ ಗಿಂತ ಮೊದಲು ಗರಿಷ್ಟ ಹಣ 1 ಲಕ್ಷ ಮಾತ್ರ ಇತ್ತು. ಇದೀಗ 2020 ರಲ್ಲಿ ಬದಲಾಗಿ ಗರಿಷ್ಟ 5 ಲಕ್ಷ ಮಾಡಲಾಗಿದೆ.

ಇನ್ಶೂರೆನ್ಸ್ (Insurance) ವ್ಯವಸ್ಥೆಯು ಎಲ್ಲ ಖಾತೆ ಗಳಿಗೆ ಅಂದರೆ ಉಳಿತಾಯ ಖಾತೆ (Saving Account) ಚಾಲ್ತಿ ಖಾತೆ (current Account), ರೆಕರಿಂಗ್ ಖಾತೆ (Recurring deposite) ಸೇರಿದಂತೆ ಒಳಗೊಂಡಿದೆ. ಠೇವಣಿ ಮಡಿದ ಹಣಕ್ಕೆ ವಿಮಾ (Insurance) ಇರುತ್ತದೆ. ಈ ನಿಯಮದ ಪ್ರಕಾರ ಬ್ಯಾಂಕ್ ಮುಳುಗಡೆ ಅಥವಾ ದಿವಾಳಿಯಾದ 90 ದಿನಗಳಲ್ಲಿ ಖಾತೆದಾರರಿಗೆ ವಿಮಾ ಯೋಜನೆ ಅಡಿಯಲ್ಲಿ ಹಣ ಸಿಗುತ್ತದೆ. ನಿಯಮದ ಪ್ರಕಾರ ದಿವಾಳಿಯಾದ ಬ್ಯಾಂಕ್ ಅನ್ನು ವಿಮ ನಿಗಮಕ್ಕೆ 45 ದಿನಗಳ ಒಳಗೆ ಒಪ್ಪಿಸಬೇಕಾಗುತ್ತದೆ. ಬೇರೆ ಯಾವುದೇ ನಿರ್ಣಯಕ್ಕೆ ಕಾಯದೆ 90 ದಿನಗಳಲ್ಲಿ ಠೇವಣಿ ದಾರರಿಗೆ ಹಣ ನೀಡುವ ಪ್ರಕ್ರಿಯೆ ಶುರುವಾಗುತ್ತದೆ.

ಒಂದು ವೇಳೆ ನೀವು ಎರಡು ಬೇರೆ ಬೇರೆ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿದ್ದರೆ, ಇವೆರಡು ಒಮ್ಮೆಲೇ ದಿವಾಳಿ ಆದರೆ ಈ ಪರಿಸ್ಥಿತಿಯಲ್ಲಿ ನೀವು ಎರಡು ಬ್ಯಾಂಕ್ ಗಳಿಂದ 5+5 ಲಕ್ಷದವರೆಗೆ ಹಣವನ್ನು ಇನ್ಸೂರೆನ್ಸ್ ರೂಪದಲ್ಲಿ ಸಿಗುತ್ತದೆ. ಆದರೆ ವಿಮೆಯ ಗರಿಷ್ಟ ಮೊತ್ತ 5 ಲಕ್ಷ ಇದನ್ನು ನೆನಪಿಡಿ. ಠೇವಣಿ ಮೊತ್ತ 5 ಲಕ್ಷಕ್ಕಿಂತ ಕಡಿಮೆ ಇದ್ದರೆ ನೀವು ಠೇವಣಿ ಮಾಡಿದ ಅಂದರೆ ಉಳಿತಾಯ ಮಾಡಿದ ಹಣವಷ್ಟೇ ವಾಪಸು ಸಿಗುತ್ತದೆ.

Leave a Reply

Your email address will not be published. Required fields are marked *