Trending

App Banned : 180 ಕ್ಕೂ ಹೆಚ್ಚಿನ ಅಪ್ಲಿಕೇಶನ್ ಬ್ಯಾನ್ ಮಾಡಿದ ಗೂಗಲ್. ನಿಮ್ಮ ಮೊಬೈಲ್ ಅಲ್ಲೂ ಈ ಅಪ್ಲಿಕೇಶನ್ ಗಳು ಇದ್ದಾರೆ ಕೂಡಲೇ ಡಿಲೀಟ್ ಮಾಡಿ.

ಗೂಗೆಲ್ (Google) ಟೆಕ್ ಕಂಪನಿ ತನ್ನ ಪ್ಲೇ ಸ್ಟೋರ್ ಇಂದ ಹಲವಾರು ಅಪ್ಲಿಕೇಶನ್ ಗಳನ್ನೂ ತೆಗೆದು ಹಾಕಿದೆ (App Banned). ಜಾಹಿರಾತು ವಂಚನೆ ನಡೆಸುವ ಈ ಅಪ್ಲಿಕೇಶನ್ ಗಳನ್ನೂ ಹುಡುಕಿ ತೆಗೆದಿದೆ. ಇಂತಹ ಅಪ್ಲಿಕೇಶನ್ ಗಳು ಸುಮಾರು 56 ಮಿಲಿಯಾನ್ ಗಿಂತಲೂ ಹೆಚ್ಚು ಡೌನ್ಲೋಡ್ ಆಗಿದೆ. ಇದು ಬಳಕೆದಾರರು ಹಾಗು ಜಾಹೀರಾತುದಾರರಿಗೆ ಹಾಗು ಡೆವಲಪರ್ಸ್ ಗೆ ನಷ್ಟ ಉಂಟು ಮಾಡುತಿತ್ತು. ಗೂಗಲ್ ಈ ಸೆಕ್ಯೂರಿಟಿ ಪ್ಯಾಚ್ ಇವುಗಳನ್ನು ಕಂಡು ಹುಡುಕಿದೆ.

app banned
App Banned

ಈ ವಂಚನೆ ಮಾಡುವ ಅಪ್ಲಿಕೇಶನ್ ಗಳು ಮಾಲ್ವೇರ್ ಗಳಿಗಿಂತ ಕೊಂಚ ಭಿನ್ನವಾಗಿದೆ. ಈ ಅಪ್ಲಿಕೇಶನ್ ಗಳಿಂದ ಡೇಟಾ ವನ್ನು ಕಡಿಯುವ ಬದಲು ವಂಚಕರು ನಕಲಿ ಬಳಕೆದಾರರನ್ನು ತೋರಿಸುವ ಮೂಲಕ ಜಾಹಿರಾತುದಾರರಿಂದ ಪಾವತಿ ಹಣವನ್ನು ಪಡೆದುಕೊಳ್ಳುತ್ತಿದ್ದರು. ಇದು ನಿಜವಾದ ಗ್ರಾಹಕರಿಗೆ ಜಾಹಿರಾತು ತಲುಪುತ್ತಿಲ್ಲವಾದರೂ ಕೂಡ ತಲುಪುತ್ತಿದೆ ಎಂದು ಬಿಂಬಿಸಿ ಹಣ ಪಡೆದುಕೊಳ್ಳುತ್ತಿದ್ದವು. ಇನ್ನು ಕೆಲವೊಮ್ಮೆ ಕೇವಲ ಜಾಹಿರಾತು ಗಳನ್ನೂ ಮಾತ್ರ ತೋರಿಸುವ ಮೂಲಕ ಅಪ್ಲಿಕೇಶನ್ ಗಳ ಮೇಲಿನ ಜನರ ಅನುಭವ ಹಾಳಾಗುತ್ತದೆ. ಇದರ ಮೂಲಕ ಜನರು ಪ್ಲೇ ಸ್ಟೋರ್ ಅಲ್ಲಿ ಇವುಗಳಿಗೆ ಕಡಿಮೆ ರೇಟಿಂಗ್ ನೀಡುತ್ತಾರೆ.

Read this also : 5 ವರ್ಷಗಳ ನಂತರ ಮತ್ತೆ 36 ಚೀನೀ ಮೊಬೈಲ್ ಅಪ್ಲಿಕೇಷನ್ ಭಾರತದಲ್ಲಿ ಲಭ್ಯವಾಗುತ್ತಿದೆ. ಟಿಕ್‌ಟಾಕ್(Tiktok) ಕೂಡಾ ಮರಳಲಿದೆಯಾ?

ಗೂಗಲ್ ಅನೇಕ ಅಪ್ಲಿಕೇಶನ್ ಗಳನ್ನೂ ಸೆಕ್ಯೂರಿಟಿ ಕಾರಣ ಹೇಳಿ ಬ್ಯಾನ್ (App Banned) ಮಾಡುತ್ತಲೇ ಇದೆ. ಆದರೆ ಈ ಅಪ್ಲಿಕೇಶನ್ ಗಳು ಗೂಗಲ್ ಪ್ಲೇ ಸ್ಟೋರ್ (google Play Store) ಅಲ್ಲದೆ ಬೇರೆ ವೆಬ್ಸೈಟ್ ಗಳಿಂದಲೂ ಲಭ್ಯವಾಗುತ್ತದೆ. ಆದ್ದರಿಂದ ಇಂತಹ ಅಪ್ಲಿಕೇಶನ್ ಗಳನ್ನೂ ಡೌನ್ಲೋಡ್ ಮಾಡಿ ಮೊಬೈಲ್ ಅಲ್ಲಿ ಬಳಸುವುದನ್ನು ನಿಲ್ಲಿಸುವುದು ಉತ್ತಮ. ಇಲ್ಲವಾದರೆ ಇವುಗಳು ನಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ದಿನಗಳು ದೂರವಿಲ್ಲ.

Leave a Reply

Your email address will not be published. Required fields are marked *