ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟದ ಮೇಲೆ 18% GST? ಸಾಮಾನ್ಯ ಜನರಿಗೆ ಈ ಜಿಎಸ್‌ಟಿ ತೆರಿಗೆ ಅನ್ವಯಿಸುವುದಿಲ್ಲ. ಯಾರಿಗೆ ಅನ್ವಯಿಸುತ್ತದೆ ಈ ತೆರಿಗೆ?
ಜಿಎಸ್‌ಟಿ (GST) ಕಮಿಟಿ ಮಾಹತ್ವದ ಸಭೆಯಲ್ಲಿ ಬಳಸಿದ ಕಾರು ಮಾರಾಟದ ಮೇಲೆ 18% ಜಿಎಸ್‌ಟಿ ವಿದಿಸಿದೆ. ಪೆಟ್ರೋಲ್ ಕಾರು 1200 CC ಮೇಲಿದ್ದರೆ ಹಾಗು ಡೀಸೆಲ್ ಕಾರು 1500CC ಮೇಲಿದ್ದರೆ ಹಾಗೆನೆ ಎಲ್ಲಾ ತರಹದ ಎಲೆಕ್ಟ್ರಿಕ್ ಕಾರುಗಳಿಗೆ ಈ ತೆರಿಗೆ ಅನ್ವಯಿಸುತ್ತದೆ. ಇದು ಸಾಮಾನ್ಯ ಜನರಿಗೂ ಅನ್ವಯವಾಗುತ್ತದೆಯೋ? ಇಲ್ಲವೋ ಎನ್ನುವ ಗೊಂದಲ ಬಹಳ ಜನರ ಬಳಿ ಇದೆ. ಆ ಗೊಂದಲಕ್ಕೆ ನಾವಿಂದು ತೆರೆ ಎಳೆಯುತ್ತಿದ್ದೇವೆ.
ಈ ಸೆಕೆಂಡ್ ಹ್ಯಾಂಡ್ (Used Cars) ಕಾರಿನ ಮೇಲೆ ತೆರಿಗೆ ಇದು ಮೊದಲ ಬಾರಿಗೆ ಸರಕಾರ ಹಾಕಿದ್ದಲ್ಲ. ಇದಕ್ಕಿಂತ ಮೊದಲು ತೆರಿಗೆ ದರ 12% ಇದ್ದಿದ್ದು ಇದೀಗ 18% ಪ್ರತಿಶತ ಕ್ಕೆ ಏರಿಕೆ ಮಾಡಲಾಗಿದೆ. ಹಾಗಾದರೆ ಸಾಮಾನ್ಯ ಜನರು ತೆರಿಗೆ ಕಟ್ಟಬೇಕೆ? ಉತ್ತರ ಇಲ್ಲ. ತೆರಿಗೆ (Tax) ಕಟ್ಟಬೇಕಾದವರು ಜಿಎಸ್‌ಟಿ ನೋಂದಣಿ (GST registered) ಆಗಿದ್ದವರು ಮಾತ್ರ ಅಂದರೆ ವ್ಯವಹಾರ (Business) ಮಾಡುವವರಿಗೆ ಮಾತ್ರ ಈ ತೆರಿಗೆ ನೀತಿ ಅನ್ವಯವಾಗುತ್ತದೆ.
ಕಾರಿನ ಮಾರಾಟ ಬೆಲೆ ಅದರ ಸವಕಳಿ ಬೆಲೆ ಅಥವಾ Depreciation ಬೆಲೆ ಕಳೆದ ನಂತರ ಲಾಭದಲ್ಲಿ ಮಾರಾಟ ಮಾಡಿದರೆ ಆ ಲಾಭದ ಮೇಲೆ ಜಿಎಸ್‌ಟಿ 18% (GST 18%) ಬಿಸಿನೆಸ್ ಮಾಡುವವರು ಅಥವಾ ಜಿಎಸ್‌ಟಿ ರಿಜಿಸ್ಟ್ರೇಶನ್ ಮಾಡಿಕೊಂಡವರು ಸರಕಾರಕ್ಕೆ ಕಟ್ಟಬೇಕಾಗುತ್ತದೆ.
ನಮ್ಮ ನಿಮ್ಮಂತವರು ದಿನಗೂಲಿ ನೌಕರರು ಹಾಗು ಸ್ಯಾಲರೀಡ್ (Salaried) ವ್ಯಕ್ತಿಗಳು ಕಾರು ಮಾರಾಟ ಮಾಡುವಾಗ ಲಾಭದಲ್ಲಿ ಮಾರಿದರೆ ಯಾವುದೇ ಟ್ಯಾಕ್ಸ್ ಕಟ್ಟಬೇಕಾಗಿಲ್ಲ. ಒಂದು ವೇಳೆ ನಮ್ಮ ಬಳಿ ಜಿಎಸ್‌ಟಿ ರಿಜಿಸ್ಟರ್ ಆಗಿದ್ದರೆ ಮಾತ್ರ ನಾವು ಕಟ್ಟಬೇಕಾಗುತ್ತದೆ.
ಉದಾಹರಣೆಗೆ ಕಾರನ್ನು 2023 ರಲ್ಲಿ ಖರೀದಿ ಮಾಡಿದ್ದು 10 ಲಕ್ಷಕ್ಕೆ ಹಾಗು ಅದರ ಬೆಲೆ 2024 ಕ್ಕೆ ಬರುವಾಗ 9 ಲಕ್ಷವಾಗಿರುತ್ತದೆ. ಈ ಒಂದು ಲಕ್ಷ ವನ್ನು ಸವಕಳಿ ಅಥವಾ ಡಿಪ್ರಿಶಿಯೇಶನ್ (Depreciation) ಎನ್ನುತ್ತಾರೆ. ಒಂದೊಂದು ಆಸ್ತಿಗೂ ಒಂದು ರೀತಿ ಡಿಪ್ರಿಶಿಯೇಶನ್ ರೇಟ್ ಇರುತ್ತದೆ. ಹಾಗೇನೆ ಒಂದು 10 ಲಕ್ಷದ ಕಾರು ಮಾರಾಟ ಮಾಡುವಾಗ ಡಿಪ್ರಿಶಿಯೇಶನ್ 1 ಲಕ್ಷ ಕಳೆದು ಅದರ ಬೆಲೆ 9 ಲಕ್ಷವಿರತ್ತದೆ. ಆದರೆ ಮಾರಾಟ ಮಾಡುವ ಬೆಲೆ 9 ಲಕ್ಷದ 50 ಸಾವಿರವಾದಾಗ ಈ 50 ಸಾವಿರದ ಮೇಲೆ ಜಿಎಸ್‌ಟಿ ಕಟ್ಟಬೇಕಾಗುತ್ತದೆ. ಒಂದು ವೇಳೆ 10 ಲಕ್ದ ಕಾರು ಡಿಪ್ರಿಶಿಯೇಶನ್ ಕಳೆದು 9 ಲಕ್ಷದ ಬೆಲೆಯಾದಾಗ ಅದನ್ನು 8 ಲಕ್ಷದ 50 ಸಾವಿರಕ್ಕೆ ಮಾರಾಟ ಮಾಡಿದರೆ ಈ 50 ಸಾವಿರ ನಷ್ಟದ ಮೇಲೆ ಯಾವುದೇ ಜಿಎಸ್‌ಟಿ ಕಟ್ಟಬೇಕಾಗಿಲ್ಲ. ಅಥವಾ ಕಾರನ್ನು ಡಿಪ್ರಿಶಿಯೇಶನ್ ಕಳೆದ ನಂತರ ಬರುವ ಬೆಲೆ 9 ಲಕ್ಷಕ್ಕೇ ಮಾರಿದರೆ ಇಂತಹ ಪರಿಸ್ಥಿತಿ ಯಲ್ಲೂ ಯಾವುದೇ ಜಿಎಸ್‌ಟಿ ತೆರಿಗೆ ಕಟ್ಟಬೇಕೆಂದಿಲ್ಲ.
ಕೊನೆಗೆ ಹೇಳಬೇಕೆಂದರೆ ಈ ಜಿಎಸ್‌ಟಿ ತೆರಿಗೆ ವ್ಯವಹಾರಿಕವಾಗಿ ಬಳಸುವ ಕಾರಿನ ಮೇಲೆ ಮಾತ್ರ ಅನ್ಬಯವಾಗುತ್ತದೆ. ನೀವು ನಾವು ಸಾಮಾನ್ಯ ಜನರು ಕಾರಿನ ಬೆಲೆಗಿಂತ ಅಧಿಕ ಲಾಭದಲ್ಲಿ ಮಾರಾಟ ಮಾಡಿದರು ಕೂಡಾ ಯಾವುದೇ ಜಿಎಸ್‌ಟಿ ತೆರಿಗೆ ಬರುವುದಿಲ್ಲ.