ಎರಡು ಕೈ ಇಲ್ಲದ ಭಾರತದ ಈ ಅರ್ಚರ್ ಕಾಲಿನಲ್ಲಿ ಆಡಿ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ? ಯಾರಿವರು?

ದೇವರು ಎಲ್ಲರಿಗೂ ಎಲ್ಲವನ್ನೂ ಕೊಡುವುದಿಲ್ಲ, ಒಂದು ಕೊಟ್ಟರೆ ಒಂದನ್ನು ಕೊಡುವುದಿಲ್ಲ. ಆದರೆ ಇದೆಲ್ಲ ಜಗದ ನಿಯಮ ಮನುಷ್ಯರಾದ ನಾವು ಇರದೇ ಇರುವ ವಿಷಯ ಅಥವಾ ವಸ್ತುಗಳ ಬಗ್ಗೆ ಆಲೋಚನೆ ಮಾಡದೇ ಇರುವುದರಲ್ಲಿ ಏನು ಸಾಧನೆ ಮಾಡಬಹುದು, ಹೇಗೆ ನಮ್ಮ ಹೆಸರನ್ನು ಇತಿಹಾಸ ಪುಟದಲ್ಲಿ ಬರೆಯಬಹುದು ಎಂಬ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಹೌದು ಪ್ರತಿ ದಿನ ಎಲ್ಲಾ ಅಂಗಾಂಗಗಳು ಸರಿ ಇದ್ದರೂ ಒಂದು ಕೆಲಸಕ್ಕೆ ನೆಪ ಹೇಳುತ್ತಾ ಕಾಲ ಹರಣ ಮಾಡುವkela ಜನರ ನಡುವೆ ಶೀತಲ್ ದೇವಿ ಅವರು ವಿಭಿನ್ನ. ಹೌದು ನಮ್ಮ ಇಂದಿನ ಈ ಸುದ್ದಿಯಲ್ಲಿ ಕೈ ಇಲ್ಲದೆ ಕಾಲಿನ ಮೂಲಕ ಆರ್ಚರಿ ಆಡಿ ವಿಶ್ವ ವಿಖ್ಯಾತಿ ಪಡೆದ ಈ 17 ವರ್ಷದ ಪೋರಿಯ ಕಥೆಯನ್ನು ತಿಳಿಯೋಣ.

ಶೀತಲ್ ದೇವಿ ಅವರು 10 ಜನವರಿ 2007 ರಲ್ಲಿ ಕಾಶ್ಮೀರದಲ್ಲಿ ಜನಿಸಿದ್ದರು. ಅವರು ಫೋಕೊಮೆಲಿಯಾ ಎಂಬ ಅಪರೂಪದ ವೈದ್ಯಕೀಯ ಸಂಸ್ಥೆಯೊಂದಿಗೆ ಜನಿಸಿದರು, ಇದರಿಂದಾಗಿ ಅವರು ತೋಳುಗಳಿಲ್ಲದೆಯೇ ಜನಿಸಿದ್ದರು. ಅವರು ಎರಡು ಕೈಗಳು ಇಲ್ಲದೆ ಆರ್ಚರಿ ಮಾಡುವ ಮೊದಲ ಮತ್ತು ಏಕೈಕ ಅಂತರರಾಷ್ಟ್ರೀಯ ಪ್ಯಾರಾ-ಆರ್ಚರಿ ಚಾಂಪಿಯನ್ ಆಗಿದ್ದಾರೆ. ಎಂದಿಗೂ ತಮ್ಮ ನ್ಯೂನತೆ ಅವರ ಸಾಧನೆಗೆ ಅಡ್ಡಿ ಆಗಿಲ್ಲ. ಈಗಾಗಲೇ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಚಿನ್ನ ಬೆಳ್ಳಿಯ ಪದಕ ಪಡೆದ ಇವರು ಮೊದಲ ಬಾರಿಗೆ ಪ್ಯಾರ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ನಿನ್ನೆ ನಡೆದ ರ್ಯಾಂಕಿಂಗ್ ರೌಂಡ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಶೀತಲ್ ತಮ್ಮ ಪರ್ಸನಲ್ ಬೆಸ್ಟ್ ದಾಖಲೆ ಮುರಿದಿದ್ದು ಅಲ್ಲದೆ 703 ಅಂಕಗಳನ್ನು ಪಡೆಯುವ ಮೂಲಕ ವಿಶ್ವ ದಾಖಲೆ ಕೂಡ ನಿರ್ಮಾಣ ಮಾಡಿದ್ದರು. ಆದರೆ ಅದೇ ರೌಂಡ್ ನ ಇನ್ನೊಬ್ಬ ಆರ್ಚರ್ 704 ಅಂಕ ಪಡೆಯುವ ಮೂಲಕ ಆಯಾ ದಾಖಲೆ ಅದೇ ಗೇಮ್ ನಲ್ಲಿ ಸರಿದೂಗಿಸಲಾಯಿತು . ಆದರೂ ಕೈಗಳಿಂದ ಆರ್ಚರಿ ಆಡುವವರ ಮಧ್ಯೆ ಇವರ ಸಾಧನೆ ಖಂಡಿತವಾಗಿಯೂ ವಿಭಿನ್ನ. ಮುಂದಿನ ಸುತ್ತಿನಲ್ಲಿ ಯಶಸ್ಸು ಕಾಣಲಿ ಭಾರತಕ್ಕೆ ಮತ್ತೊಂದು ಪದಕ ತಂದು ಕೊಡಲಿ ಎಂದು ಆಶಿಸೋಣ.

Archer without armsArcheryArmless indian archaerIndian archerParaolyimpicsParis 2024Sheethal devi
Comments (0)
Add Comment