Jackfruit: ಈ ಬೇಸಿಗೆಗೆ ಹಲಸಿನ ಹಣ್ಣು ನಮಗೆಲ್ಲರಿಗೂ ಬೇಕಾದ ಸೂಪರ್ ಫುಡ್ ಯಾಕೆ ಗೊತ್ತೇ?
ಬೇಸಿಗೆ ಬರುತ್ತಿದೆ ಹಾಗೇನೇ ಹಲಸಿನ ಹಣ್ಣಿನ (Jackfruit) ಸೀಸನ್ ಕೂಡ. ಹೊರಗಡೆ ಮುಳ್ಳಿದ್ದರು ಈ ಹಣ್ಣಿನ ಒಳಗಡೆ ಇರುವ ಆರೋಗ್ಯಯುಕ್ತ ಅಂಶಗಳು ನಿಧಿಗಿಂತ ಕಡಿಮೆ ಇಲ್ಲ. ಕೆಲವರು ಇದನ್ನು ಹಣ್ಣಾದ ನಂತರ ಅಥವಾ ಅದನ್ನು ಪದಾರ್ಥ ಮಾಡಿ ತಿನ್ನುತ್ತಾರೆ. ಆದರೆ ಹಳ್ಳಿಗಳ ಕಡೆ ಇದನ್ನು ಬೇಯಿಸಿಟ್ಟು ಉಪ್ಪು ನೀರಿನಲ್ಲಿ ಹಾಕಿ ವರ್ಷವಿಡೀ ಇದರ ಪದಾರ್ಥ ಮಾಡಿ ಸವಿಯುತ್ತಾರೆ. jackfruit ಅಥವಾ ಹಲಸಿನ ಹಣ್ಣು ಭಾರತದಲ್ಲಿ ವಿಶಾಲ ಮರಗಳಲ್ಲಿ ದೈತ್ಯಾಕಾರದಲ್ಲಿ ಬೆಳೆಯುವ ಹಣ್ಣುಗಳು. ಈ ಹಣ್ಣುಗಳ ತೂಕ 40 ಕೆಜಿ ಯಷ್ಟು ಕೂಡ ಇರುವುದಿದೆ. ಕರ್ನಾಟಕ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಲ ಇಂತಹ ರಾಜ್ಯಗಳಲ್ಲಿ ಅತಿ ಹೆಚ್ಚು ಬೆಳೆಯುತ್ತದೆ. ಬೇರೆ ಬೇರೆ ಕಡೆ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಇದರ ಗಾತ್ರ ಹಾಗು ರುಚಿ ಹೊರತುಪಡಿಸಿದರೆ, ಈ ಹಣ್ಣಿನಲ್ಲಿ ಹೆಚ್ಚಿನ ಫೈಬರ್ ಅಂಶ, ವಿಟಮಿನ್ಸ್ ಹಾಗು ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತದೆ. ವಿಟಮಿನ್ ಸಿ ಮತ್ತು ಪೊಟ್ಯಾಸಿಯಂ ಯುಕ್ತ ಹಣ್ಣುಗಳು ಬೇಸಿಗೆಯಲ್ಲಿ ಉಲ್ಲಾಸಕರ ವಾತಾವರಣ ಉಂಟು ಮಾಡುತ್ತದೆ. ಈ ಹಲಸಿನ ಹಣ್ಣುಗಳು (Jackfruit) ನೀರಿನ ಮಿತ ಬಳಕೆ ಮಾಡಿಕೊಂಡು ಬೆಳೆಯುವ ಮರಗಳಾಗಿವೆ. ನೀರನ್ನೇ ಅತಿ ಹೆಚ್ಚು ಬಳಕೆ ಮಾಡಿಕೊಂಡು ಬೆಳೆಯುವ ಅಕ್ಕಿ, ಗೋಧಿ ಗಿಂತ ಇದು ಒಂದು ಉತ್ತಮ ಪರ್ಯಾಯ ಆಹಾರ ವ್ಯವಸ್ಥೆಯಾಗಿದೆ. ಸ್ವಲ್ಪ ನೀರು, ಸ್ವಲ್ಪ ರಾಸಾಯನಿಕ ಬಳಸಿಕೊಂಡು ಅತಿ ಹೆಚ್ಚು ಉತ್ಪನ್ನ ನೀಡುವ ಹಣ್ಣಾಗಿದೆ ಇದು. ವಿಶ್ವದಲ್ಲೇ ಅತಿ ಹೆಚ್ಚು ಹಲಸಿನ ಹಣ್ಣು ಬೆಳೆಯುವ ಭಾರತದಲ್ಲಿ, ಈ ಹಣ್ಣುಗಳನ್ನು ಸ್ಟೋರ್ ಹಾಗು ಪ್ರೋಸೆಸ್ ಮಾಡದೇ ಇರುವುದರಿಂದ 60% ರಷ್ಟು ಹಣ್ಣುಗಳು ಹಾಳಾಗಿ ಕುಳಿತು ಹೋಗುತ್ತದೆ. ಇವಾಗ ಅನೇಕ ಸ್ಟಾರ್ಟ್ ಅಪ್ ಗಳು ಇವುಗಳನ್ನು ಬಳಕೆ ಮಾಡಿ ಚಿಪ್ಸ್, ಸಂರಕ್ಷಿಸಿದ ಆಹಾರವಾಗಿ ಬಳಕೆ ಮಾಡ ತೊಡಗಿದ್ದಾರೆ. ಅಲ್ಲದೆ ಈ ವಿದೇಶಗಳಲ್ಲೂ ಹಲಸಿನ ಹಣ್ಣು (Jackfruit) ಮಾಂಸಕ್ಕೆ ಪರ್ಯಾಯವಾಗಿ ಸಸ್ಯಾಹಾರವಾಗಿ ಬಳಕೆ ಮಾಡಲಾಗುತ್ತಿದೆ. ಬರ್ಗರ್ ಹಾಗು ಟಾಕೋಸ್,
Read More