BCCI News: ಭಾರತ ತಂಡದ ಕ್ರಿಕೆಟ್ ಆಯ್ಕೆಗಾರರ ಸಮಿತಿ ಹುದ್ದೆಗೆ ಮೂವರು ದೊಡ್ಡ ಮಾಜಿ ಆಟಗಾರರು ಅರ್ಜಿ. ಹೆಸರುಗಳನ್ನೂ ನೋಡಿ ಶಾಕ್ ಆದ ಬಿಸಿಸಿಐ.

ಬಿಸಿಸಿಐ ಅತ್ಯಂತ ಶ್ರೀಮಂತ ಸಂಸ್ಥೆ. ಇದರಲ್ಲಿ ಅನೇಕ ದೊಡ್ಡ ದೊಡ್ಡ ಹುದ್ದೆಗಳು ಇರುತ್ತವೆ. ಇವುಗಳಲ್ಲಿ ಅನೇಕರು ಮಾಜಿ ಆಟಗಾರರು, ತರಬೇತುಗಾರರಾಗಿ ಆಯ್ಕೆ ಆದರೆ ಇನ್ನು ಕೆಲವರು ಆಯ್ಕೆ ಸಮಿತಿಯಲ್ಲಿ ಇರುತ್ತಾರೆ. ಕಳೆದ ಟಿ-೨೦ ವಿಶ್ವಕಪ್ ಅಲ್ಲಿ ಭಾರತ ತಂಡದ ಹೀನಾಯ ಪ್ರದರ್ಶನ ನಂತರ ಬಿಸಿಸಿಐ ಈ ಆಯ್ಕೆ ಸಮಿತಿಯನ್ನೇ ವಿಸರ್ಜಿಸಿ ಆಯ್ಕೆ ಗಾರರಿಗೆ ಬಿಸಿ ಮುಟ್ಟಿಸಿದ್ದಾರೆ.

ಇದೀಗ ಆಯ್ಕೆ ಸಮಿತಿ ಹೊಸದಾಗಿ ರಚಿಸಲು ಬಿಸಿಸಿಐ ಮುಂದಾಗಿದೆ. ಇದೆ ಕಾರಣಕ್ಕೆ ಭಾರತ ತಂಡದ ಮಾಜಿ ಆಟಗಾರರು ಹಾಗು ಇದಕ್ಕೆ ಬೇಕಾದ ಅರ್ಹತೆ ಉಳ್ಳವರಿಗೆ ಅರ್ಜಿ ಹಾಕಲು ಅವಕಾಶ ನೀಡಿತ್ತು. ಇದನ್ನ ಪರಿಶೀಲಿಸಲು ಗುರುವಾರ ಬಿಸಿಸಿಐ ಅಂಚೆ ಪೆಟ್ಟಿಗೆ ತೆರೆದಾಗ ಬಿಸಿಸಿಐ ಗೆ ಶಾಕ್ ಕಾದಿತ್ತು. ಯಾಕೆಂದರೆ ಈ ಆಯ್ಕೆ ಸಮಿತಿ ಹುದ್ದೆಗೆ ಭಾರತ ತಂಡದ ಮಾಜಿ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗು ಮಹೇಂದ್ರ ಸಿಂಗ್ ಧೋನಿ ಅವರ ಅರ್ಜಿ ಕೂಡ ಇತ್ತು. ಇದು ಎಲ್ಲರನ್ನು ಅಚ್ಚರಿ ಮೂಡಿಸಿದೆ.

ಇದಲ್ಲದೆ ಪಾಕಿಸ್ತಾನದ ಮಾಜಿ ಆಟಗಾರ ನಾಯಕನಾದ ಇಂಜುಮಂ ಉಲ್ ಹಕ್ ಅವರ ಹೆಸರು ಕೂಡ ಇದ್ದಿದ್ದು ಎಲ್ಲರಿಗು ಅಚ್ಚರಿ ಆಗಿದೆ. ಬಿಸಿಸಿಐ ಸುಮಾರು 600 ಕ್ಕೂ ಅಧಿಕ ಇಮೇಲ್ ಚೆಕ್ ಮಾಡಿದ್ದೂ ಅದರಲ್ಲಿ ಅನೇಕ ಅರ್ಜಿಗಳು ನಕಲಿ ಎಂದು ತಿಳಿದು ಬಂದಿದೆ. ಇದರಲ್ಲಿ ಇನ್ನೊಂದು ಮುಖ್ಯ ವಿಷಯವೇನೆಂದರೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗು ಮಹೇಂದ್ರ ಸಿಂಗ್ ಧೋನಿ ಅವರ ಅರ್ಜಿ ನಕಲಿ ಎಂದು ಗೊತ್ತಾಗಿದೆ. ಇಲ್ಲಿ ಕಿಡಿಗೇಡಿಗಳು ತಮಾಷೆಗಾಗಿ ಇವರುಗಳ ಹೆಸರು ಹಾಕಿರಬಹುದೆಂದು ಅಂದಾಜಿಸಲಾಗಿದೆ.

BCCIDHONISEHWAGTENDULKAR
Comments (0)
Add Comment