File Your Income tax return Now!

Connect with us for filing your income tax and GST filing and all sorts of statutory requirement.

Your Attractive Heading

Call To Action

Connect with us for your income tax return and GST filing. The price starting from Just Rs. 500/

Bullet Train: ಮುಂಬೈ-ಅಹಮದಾಬಾದ್ ಹಳಿಯಲ್ಲಿ ಓಡಲ್ಲ ಭಾರತದ ಮೊದಲ ಬುಲೆಟ್ ಟ್ರೈನ್. ಇದರ ಕಾರಣ ತಿಳಿಸಿದ ರೈಲ್ವೆ ಇಲಾಖೆ.

ಭಾರತದ ಮೊಟ್ಟ ಮೊದಲ ಹೈ ಸ್ಪೀಡ್ ರೈಲು ಮಾರ್ಗ, ಅಹಮದಾಬಾದ್-ಮುಂಬೈ ಹೈ ಸ್ಪೀಡ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ, ಈಗ ಬಹುಪಾಲು ಬದಲಾವಣೆಗಳು ನಡೆಯುತ್ತಿವೆ. ಮೂಲತಃ, ಈ ಮಾರ್ಗದಲ್ಲಿ ಜಪಾನ್ ತಂತ್ರಜ್ಞಾನದಿಂದ ತಯಾರಾದ ಶಿಂಕಾನ್‌ಸೆನ್ ಬುಲೆಟ್ ರೈಲು (Bullet Train) ಓಡಿಸಲು ಯೋಜನೆ ಇದ್ದರೂ, ಈಗ ಅದನ್ನು ಭಾರತೀಯ ತಂತ್ರಜ್ಞಾನದಲ್ಲಿ ತಯಾರಾದ ವಂದೇ ಭಾರತ್ ರೈಲು ಬಳಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ವಂದೇ ಭಾರತ್ ರೈಲು ಇದುವರೆಗೆ ದೇಶದ ವಿವಿಧ ಭಾಗಗಳಲ್ಲಿ 160 ರಿಂದ 180 ಕಿಮೀ ವೇಗದಲ್ಲಿ ಓಡುತ್ತಿದ್ದರೆ, ಈ ಹೊಸ ಮಾರ್ಗದಲ್ಲಿ ಇದರ ಗರಿಷ್ಠ ವೇಗವನ್ನು 280 ಕಿಮೀ ಎಂದು ನಿಗದಿಪಡಿಸಲಾಗಿದೆ. ಆದರೆ ಪ್ರಾಕ್ಟಿಕಲ್ ಗತಿಯಲ್ಲಿ ಇದು 250 ಕಿಮೀ/ಗಂಟೆ ವೇಗದಲ್ಲಿ ಓಡುವ ಸಾಧ್ಯತೆ ಇದೆ. ಹೀಗೆ ಆಗುವುದರಿಂದ ಜಪಾನ್ ಶಿಂಕಾನ್‌ಸೆನ್‌ನ 320 ಕಿಮೀ/ಗಂಟೆ ಗರಿಷ್ಠ ವೇಗಕ್ಕಿಂತ ಇದು ಸ್ವಲ್ಪ ಕಡಿಮೆ ಆಗಲಿದೆ.

ನಮ್ಮ ವಾಟ್ಸಪ್ಪ್ ಚಾನೆಲ್ ಗೆ ಇಂದೇ ಸಬ್ಸ್ಕ್ರೈಬ್ ಆಗಿರಿ- Click Hear to join

ಭಾರತೀಯ ರೈಲ್ವೆ ಇಲಾಖೆ ಮೂಲಗಳ ಪ್ರಕಾರ, ಮುಂಬೈ-ಅಹಮದಾಬಾದ್ ಕಾರಿಡಾರ್‌ನ ಸುರತ್-ಬಿಲಿಮೋರಾ (ಸುಮಾರು 50 ಕಿಲೋಮೀಟರ್) ಸೆಕ್ಷನ್‌ನಲ್ಲಿ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಈ ಮಾರ್ಗದಲ್ಲಿ ಮೊದಲ ಪ್ರಯೋಗಾತ್ಮಕ ಪ್ರಯಾಣ (ಟ್ರಯಲ್ ರನ್) ಈ ವರ್ಷದ ಅಂತ್ಯದೊಳಗೆ ನಡೆಯಲಿದ್ದು, ಸಾರ್ವಜನಿಕರಿಗೆ 2027 ರೊಳಗೆ ಈ ಮಾರ್ಗದಲ್ಲಿ ಪ್ರಯಾಣಿಸಲು ಅವಕಾಶ ಲಭಿಸಲಿದೆ.

Bullet train

ದರಗಳಲ್ಲಿ ಉಂಟಾದ ಭಾರೀ ಏರಿಕೆ

ಇದಕ್ಕೂ ಮುನ್ನ, ಜಪಾನ್‌ನಿಂದ ತಯಾರಾಗುವ ಬುಲೆಟ್ ರೈಲು (Bullet train) ಕೋಚ್‌ಗಳ ಬೆಲೆ ಪ್ರತಿ ಕೋಚ್ಗೆ ₹16 ಕೋಟಿ ಎಂದು ನಿಗದಿಯಾಗಿತ್ತು. ಆದರೆ 2024ರ ವೇಳೆಗೆ ಈ ದರವು ₹50 ಕೋಟಿಗೆ ಏರಿಕೆಯಾಯಿತು. ಒಂದು 16 ಕೋಚ್‌ಗಳ ರೈಲು ಸಂಪೂರ್ಣವಾಗಿ ಖರೀದಿಸಲು ₹800 ಕೋಟಿ ವೆಚ್ಚವಾಗುತ್ತಿತ್ತು. ಈ ಕಾರಣದಿಂದ ಭಾರತೀಯ ರೈಲ್ವೆ ಬೇರೆ ಆಯ್ಕೆಗಳತ್ತ ಮುಖಮಾಡಿದೆ.

ಪ್ರಪಂಚದಲ್ಲಿ ವೇಗದ ರೈಲುಗಳ ಪೈಕಿ ಜಪಾನ್ ಮೊದಲ ಸ್ಥಾನದಲ್ಲಿದೆ. ಇಲ್ಲಿ “ಮಾಗ್‌ಲೆವ್” ರೈಲು 603 ಕಿಮೀ/ಗಂಟೆ ವೇಗವನ್ನು ತಲುಪಿದೆ. ಚೀನಾದಲ್ಲಿ ಈ ವೇಗ 600 ಕಿಮೀ/ಗಂಟೆ, ಮತ್ತು ಫ್ರಾನ್ಸ್‌ನಲ್ಲಿ ಗರಿಷ್ಠ 320 ಕಿಮೀ/ಗಂಟೆ ಇದೆ. ದಕ್ಷಿಣ ಕೊರಿಯಾದಲ್ಲಿಯೂ 305 ಕಿಮೀ/ಗಂಟೆ ವೇಗದ ರೈಲುಗಳು ಓಡುತ್ತವೆ.

Read This also: Bitcoin: ಬಿಟ್‌ಕಾಯಿನ್ ಲಾಭದ ಮೇಲೆ ತೆರಿಗೆ ಹೇಗೆ ಲೆಕ್ಕ ಹಾಕಬೇಕು? ನಿಮಗೆ ತಿಳಿದಿರಬೇಕಾದ ಮಾಹಿತಿ!

ಭಾರತ – ಸ್ವದೇಶಿ ತಂತ್ರಜ್ಞಾನದೆಡೆಗೆ ಹೆಜ್ಜೆ

ಭಾರತವು ಈಗ ವಿದೇಶಿ ಬೃಹತ್ ವೆಚ್ಚದ ಬದಲಿಗೆ ಸ್ವದೇಶಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ವೇಗ, ಸುರಕ್ಷತೆ ಮತ್ತು ವೆಚ್ಚದ ನಡುವೆ ಸಮತೋಲನ ಸಾಧಿಸಲು ಮುಂದಾಗಿದೆ. ವಂದೇ ಭಾರತ್ ಮೂಲಕ ಭಾರತೀಯ ರೈಲ್ವೆ ಒಂದು ಹೊಸ ಹೆಜ್ಜೆಯನ್ನೆತ್ತುತ್ತಿದೆ – ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ!

Leave a Comment

Your email address will not be published. Required fields are marked *

Scroll to Top