Cricket News: ನ್ಯೂಜಿಲ್ಯಾಂಡ್ ವಿರುದ್ದದ ಮೊದಲ ಟಿ-20 ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್ 11 ರ ಪಟ್ಟಿ ಇಲ್ಲಿದೆ. ಶುಭಮನ್ ಗಿಲ್ ಈ ಬಾರಿ ಪಾದಾರ್ಪಣೆ ಮಾಡುತ್ತಾರಾ?

ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ(Hardik Pandya) ನೇತೃತ್ವದಲ್ಲಿ ಮೂರೂ ಟಿ-೨೦ ಸರಣಿಯ ಮೊದಲ ಟಿ-೨೦ ಪಂದ್ಯ ಇಂದು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ. ನಿರಾಶಾದಾಯಕ T20 WorldCup ಸೋಲಿನ ನಂತರ ಇದೊಂದು ಫ್ರೆಶ್ ಸ್ಟಾರ್ಟ್ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಇದೆ ಕಾರಣಕ್ಕಾಗಿ ಹಿರಿಯ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ(Virat Kohli), ಕೆ ಎಲ್ ರಾಹುಲ್ ಗೆ ವಿಶ್ರಾಂತಿ ನೀಡಿದ್ದಾರೆ. ಹಾಗೇನೇ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಉಮ್ರಾನ್ ಮಲಿಕ್ ರಂತಹ ಯುವ ಪ್ರತಿಭೆಗಳಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ.

ಹಾಗೇನೇ ಶುಭಮನ್ ಗಿಲ್ ಈ ಬಾರಿ ಅಂತಾರಾಷ್ಟ್ರೀಯ ಟಿ-೨೦ ಗೆ ಪಾದಾರ್ಪಣೆ ಮಾಡಲಿದ್ದಾರಾ ಎನ್ನುವುದು ಕಾದು ನೋಡಬೇಕಿದೆ. ಭಾರತದ ಸಂಭಾವ್ಯ ಪ್ಲೇಯಿಂಗ್ 11 ರಲ್ಲಿ ಸ್ಥಾನ ಪಡೆಯಬಹುದಾದ ಆಟಗಾರರು, ಮೊದಲನೇದಾಗಿ ಎಡಗೈ ಬ್ಯಾಟ್ಸಮನ್ ಇಶಾನ್ ಕಿಶನ್. ಇವರು ಆರಂಭಿಕರಾಗಿ ಕಾಣಿಸಿಕೊಳ್ಳಬಹುದು. ಇದೆ ರೀತಿ ಬಲಗೈ ಬ್ಯಾಟ್ಸಮನ್ ಶುಭಮನ್ ಗಿಲ್ ಕೂಡ ಆರಂಭಿಕರಾಗಿ ಕಾಣಿಸಿಕೊಳ್ಳಬಹುದು.

google image

ಶ್ರೇಯಸ್ ಅಯ್ಯರ್(Shreyas Iyer) ತಂಡದಲ್ಲಿ ಕಾಣಿಸಿಕೊಂಡರೆ ಇವರ ನಂತರ ಸೂರ್ಯ ಕುಮಾರ್ ಯಾದವ್ ಕೂಡ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದ್ಬುತ ಫಾರ್ಮ್ ಅಲ್ಲಿರುವ SKY ಭಾರತದ ಯುವ ತಂಡಕ್ಕೆ ಬೆನ್ನೆಲುಬು ಅಂದರೆ ತಪ್ಪಾಗಲಾರದು. ಇವರ ನಂತರ ನಾಯಕ ಹಾರ್ದಿಕ್ ಪಾಂಡ್ಯ ತಂಡದಲ್ಲಿದ್ದಾರೆ, ವಿಕೆಟ್ ಕೀಪರ್ ಹಾಗು ಫಿನಿಶರ್ ಸ್ಥಾನದಲ್ಲಿ ರಿಷಬ್ ಪಂತ್ ಹಾಗು ಸಂಜು ಸ್ಯಾಮ್ಸನ್ ನಡುವೆ ಪೈಪೋಟಿ ಇದೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಅರ್ಶದೀಪ್ ಸಿಂಗ್ ಆಡಲಿದ್ದಾರೆ, ಇವರ ಜೊತೆ ಅನುಭವಿ ಭುವನೇಶ್ವರ್ ಕುಮಾರ್ ಹಾಗು ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಉಳಿದಿರುವ ಸ್ಪಿನ್ನರ್ ವಿಭಾಗದಲ್ಲಿ ಕುಲದೀಪ್ ಯಾದವ್ ಹಾಗು ಯುಜುವೇಂದ್ರ ಚಾಹಲ್ ಕಾಣಿಸಿಕೊಳ್ಳಲಿದ್ದಾರೆ. ಚಾಹಲ್ ವಿಶ್ವಕಪ್ ಅಲ್ಲಿ ಸೆಲೆಕ್ಟ್ ಆಗಿದ್ದರು ಕೂಡ ಒಂದೇ ಒಂದು ಪಂದ್ಯಕ್ಕೆ ಆಯ್ಕೆ ಆಗಿರಲಿಲ್ಲ. ಇದೀಗ ಇವರಿಗೆ ಅವಕಾಶ ಸಿಗಬಹುದು.

ಭಾರತದ ಸಂಭಾವ್ಯ ಪ್ಲೇಯಿಂಗ್ ೧೧ (Team India Playing 11): ಇಶಾನ್ ಕಿಶನ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(Hardik Pandya), ರಿಷಬ್ ಪಂತ್/ಸಂಜು ಸ್ಯಾಮ್ಸನ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

DINESH KARTHIKicc t20 worlcuprohit sharmasuryakunar yadavt-20 worldcupvirat kohli
Comments (0)
Add Comment