ಡಿಕ್ಸನ್ ಟೆಕ್ನಾಲಜೀಸ್ ಲಿಮಿಟೆಡ್ (Dixon Technologies) 1993 ರಲ್ಲಿ ಸ್ಥಾಪನೆಯಾದ ಭಾರತದ ಅಗ್ರಗಣ್ಯ ಕಂಪನಿ ಗಳಲ್ಲಿ ಒಂದಾಗಿದೆ. ಎಲೆಕ್ಟ್ರಾನಿಕ್ಸ್ ಗಳನ್ನೂ ಉತ್ಪಾದನೆ ಮಾಡುವ ಕಂಪನಿ ಇದಾಗಿದೆ. ಇದರ ಮುಖ್ಯ ಕಚೇರಿ ಉತ್ತರ ಪ್ರದೇಶದ ನೊಯಿಡಾ ದಲ್ಲಿದೆ. ಇದರ ಸಂಸ್ಥಾಪಕರು ಸುನಿಲ ವಚಾನಿ. LED ಟಿವಿ, ಸೆಟಾಪ್ ಬಾಕ್ಸ್, ವಾಷಿಂಗ್ ಮಷೀನ್ ಶಿಯೋಮಿ, ನೋಕಿಯಾ, ಸಮಸಂಗ್ ನಂತಹ ಮೊಬೈಲ್ ಗಳನ್ನೂ ಅಸೇಂಬಲ್ ಮಾಡುವುದು ಇದರ ಮುಖ್ಯ ಕೆಲಸವಾಗಿದೆ.
2025 ಮೇ 21 ರಂದು ಡಿಕ್ಸನ್ ಟೆಕ್ನಾಲಜೀಸ್ (Dixon Technologies) ಶೇರ್ ಬೆಲೆಯಲ್ಲಿ 7.81% ರಷ್ಟು ಇಳಿಕೆ ಕಂಡು ಬಂದಿದೆ. ಅಂದರೆ ಸುಮಾರು 1000 ರೂಪಾಯಿಗಳಷ್ಟು ಇಳಿಕೆ ಕಂಡಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತಮ ಗಳಿಕೆ ಕಂಡರೂ ಶೇರ್ ಬೆಲೆ ಕಡಿಮೆ ಆಗಿದೆ. ಹೂಡಿಕೆದಾರರು ಲಾಭ ಗಳಿಸಲು ಈ ಕಂಪನಿ ಶೇರ್ ಮಾರಾಟ ಮಾಡಿದ್ದಾರೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಿದ್ದಾರೆ.
ಇನ್ನು ಈ ಕಂಪನಿ ಹಣಕಾಸು ಬಗ್ಗೆ ನೋಡುವುದಾದರೆ:
ಆಧಾಯ : 10,293 ಕೋಟಿ (121% ಕಳೆದ ವರ್ಷಕ್ಕಿಂತ ಏರಿಕೆ ಆಗಿದೆ). ಲಾಭದ ನಂತರ ತೆರಿಗೆ (PAT) 401 ಕೋಟಿ ಕಳೆದ ವರ್ಷಕ್ಕೆ ಹೋಲಿಸಿದರೆ 322% ಜಿಗಿತ ಕಂಡಿದೆ. EBITDA – 443 ಕೋಟಿ ವರ್ಷಾನುವರ್ಷ 143% ರಷ್ಟು ಹೆಚ್ಚಿದೆ. ಅಂತಿಮ ಲಾಭಂಶ ಪ್ರತಿ ಶೇರ್ ಗೆ 8 ರೂಪಾಯಿನಷ್ಟಿದೆ. ಈ ಫಲಿತಾಂಶ ಕಂಪನಿ ಯ ಬಲಿಷ್ಠ ಆರ್ಥಿಕ ಸ್ಥಿತಿ ಬಗ್ಗೆ ಹೂಡಿಕೆದಾರರಿಗೆ ಹೇಳುತ್ತದೆ.

ಇನ್ನು ಶೇರ್ ಬೆಲೆ ಇಳಿಕೆ ಪ್ರಮುಖ ಕಾರಣಗಳು ಈ ಕೆಳಗಿನಂತಿವೆ.
ಈ ಶೇರ್ ಬೆಲೆ ಇಳಿಕೆಗೆ ಪ್ರಮುಖ ಕಾರಣ ಹೆಚ್ಚಿನ ಮೌಲ್ಯದಲ್ಲಿ ಟ್ರೇಡ್ ಆಗುತ್ತಿದೆ. 97 ಪಟ್ಟು ಹೆಚ್ಚಿನ ಮೌಲ್ಯದಲ್ಲಿ ಈ ಫೈನಾನ್ಸಿಯಲ್ ಇಯರ್ 26 ರಲ್ಲಿ ಆಗುತ್ತಿದೆ.
PLI ಯೋಜನೆಯ ಅವಧಿ ಮುಕ್ತಾಯ: 2027 ಕ್ಕೆ ಸರಕಾರದ PLI ಯೋಜನೆಯ ಲಾಭ ಡಿಕ್ಸನ್ ಟೆಕ್ನಾಲಿಜಿಸ್ (Dixon Technologies) ನಲ್ಲಿ ಕೊನೆಗೊಳ್ಳಲಿದೆ. ಈ ಕಾರಣದಿಂದ ಕಂಪನಿ ಲಾಭ ಕಡಿಮೆಯಾಗುವ ಸಾಧ್ಯತೆ ಇದೆ.
ಉತ್ಪಾದನಾ ವಿಳಂಬ: ಇನ್ನು ವಿವೊ ಹಾಗು HKC ಜೊತೆಗಿನ ಯೋಜನೆಗಳಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ವೃದ್ಧಿ ಕಾಣಸಿಗುತ್ತಿಲ್ಲ.
ಇನ್ನು JM ಫೈನಾನ್ಸಿಯಲ್ಸ್ ಖರೀದಿ ಮಾಡುವ ರೇಟಿಂಗ್ ಇಂದ ಹೋಲ್ಡ್ ಮಾಡಿ ಎನ್ನುವ ರೇಟಿಂಗ್ ಕೊಟ್ಟಿದ್ದಾರೆ. ಹಾಗೇನೇ ಇದರ ಶೇರ್ ಬೆಲೆ 15,650 ಗೆ ಇಟ್ಟಿದ್ದಾರೆ. ಇನ್ನು ಯಸ್ ಸೆಕ್ಯುರಿಟೀಸ್ ಕೂಡ ಇದರ ಶೇರ್ ಬೆಲೆ ಟಾರ್ಗೆಟ್ 15,741 ಗೆ ಇಳಿಸಿದ್ದಾರೆ.
ಈ ಎಲ್ಲ ಮಾಹಿತಿ ನಮಗೆ ಗೂಗಲ್ ನಲ್ಲಿ ಸಿಕ್ಕ ಆರ್ಟಿಕಲ್ ನ ವರದಿ ಮೇಲೆ ಹಾಕಿದ್ದೇವೆ. ಹೂಡಿಕೆದಾರರು ಈ ಶೇರ್ ಮೇಲೆ ಹೂಡಿಕೆ ಮಾಡುವ ಮುನ್ನ ತಜ್ಞರ ಮಾಹಿತಿ ಪಡೆದು ಹೂಡಿಕೆ ಮಾಡುವುದು ಉತ್ತಮ. ಇದು ಕೇವಲ ಎಜುಕೇಶನ್ ಗಾಗಿ ಮಾತ್ರ.