File Your Income tax return Now!

Connect with us for filing your income tax and GST filing and all sorts of statutory requirement.

Your Attractive Heading

Call To Action

Connect with us for your income tax return and GST filing. The price starting from Just Rs. 500/

rapido

ಓಲಾ, ಉಬರ್ ಹಾಗು ರಾಪಿಡೊ (Rapido) ನಂತಹ ಮೊಬೈಲ್ ಆಪ್ ಆಧಾರಿತ ಬೈಕ್ ಟ್ಯಾಕ್ಸಿಗಳು ಜೂನ್ 16 ರಿಂದ ಕರ್ನಾಟಕದಲ್ಲಿ ಓಡಾಡಲ್ಲ. 1988 ರ ಮೋಟಾರ್ ವಾಹನ ಕಾಯ್ದೆಯಡಿಯಲ್ಲಿ ಬೈಕ್ ಟ್ಯಾಕ್ಸಿಗಳಿಗೆ ರಾಜ್ಯ ಸರಕಾರ ಸ್ಪಷ್ಟ ನಿಯಮಗಳನ್ನು ರೂಪಿಸುವವರೆಗೂ, ಈ ಸೇವೆಗಳು ರಾಜ್ಯದಲ್ಲಿ ಚಲಾಯಿಸಲು ಅನುಮತಿಯಿಲ್ಲ. ಇದಕ್ಕೆ ನ್ಯಾಯಾಲಯ ಕೂಡ ಸರಕಾರದ ಪರ ಆದೇಶ ನೀಡಿದೆ. ಈ ನಿರ್ಧಾರದಿಂದ ಬೆಂಗಳೂರು ಮತ್ತು ಇತರ ನಗರದ ಲಕ್ಷಾಂತರ ಟ್ಯಾಕ್ಸಿ ಬಳಕೆದಾರರಿಗೆ ನೇರವಾಗಿ ಪರಿಣಾಮ ಬೀರಲಿದೆ. ಅಲ್ಲದೆ ಇದು ಚಾಲಕರಿಗೂ ದೊಡ್ಡ ಹಿನ್ನಡೆಯಾಗಲಿದೆ.

ರಾಪಿಡೊ (Rapido), ಓಲಾ ಹಾಗು ಉಬೆರ್ ನಂತಹ ಕಂಪನಿ ಗಳು ತಮ್ಮ ಟ್ಯಾಕ್ಸಿ ಸೇವೆಗೆ ಕಾನೂನು ಮಾನ್ಯತೆ ನೀಡಬೇಕೆಂದು ಒತ್ತಾಯಿಸುತ್ತಿವೆ. ಇದರೊಂದಿಗೆ ಈ ಟ್ಯಾಕ್ಸಿ ಗಳಿಗೆ ಹಳದಿ ನಂಬರ್ ಹೊಂದಿರುವ ವಾಹನಗಳನ್ನು ಸಾರಿಗೆ ವಾಹನಗಳು ಎಂದು ನೋಂದಾಯಿಸಲು ಅವಕಾಶ ನೀಡಬೇಕು. ಕರ್ನಾಟಕ ಹೈ ಕೋರ್ಟ್ ಈ ಮಧ್ಯಂತರ ಪರಿಹಾರಕ್ಕಾಗಿ ಕಂಪನಿಗಳ ಅರ್ಜಿಯನ್ನು ತಿರಸ್ಕಾರ ಮಾಡಿದೆ. ಸರಿಯಾದ ನಿಯಮ ಹಾಗು ಮಾರ್ಗಸೂಚಿಯಿಲ್ಲದೆ ಈ ಸೇವೆಗಳು ಕಾನೂನು ಬಾಹಿರ ಎಂದು ನ್ಯಾಯಾಲಯ ಹೇಳಿದೆ.

ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಪೀಠ ರಾಜ್ಯ ಸರಕಾರ ಮೋಟಾರ್ ಕಾಯ್ದೆಯಡಿಯಲ್ಲಿ ಸ್ಪಷ್ಟ ಮಾರ್ಗಸೂಚಿ ಜಾರಿ ಮಾಡುವವರೆಗೆ ಈ ಸೇವೆಗಳು ರಾಜ್ಯದಲ್ಲಿ ಸ್ಥಗಿತಗೊಳಿಸಬೇಕು ಎಂದು ತೀರ್ಪು ನೀಡಿದೆ. ಅದೇ ರೀತಿ ಈ ನಿಯಮಗಳನ್ನು 3 ತಿಂಗಳ ಒಳಗೆ ರಚಿಸಲು ರಾಜ್ಯ ಸರಕಾರಕ್ಕೆ ಹೈ ಕೋರ್ಟ್ ಕಾಲಾವಕಾಶ ನೀಡಿದೆ.

Read this : NICL Recruitment 2025: ಸರಕಾರಿ ಕೆಲಸಕ್ಕೆ ಸುವರ್ಣಾವಕಾಶ, ಪದವೀಧರ ಯುವಕರಿಗೆ ಬಂಪರ್ ನೇಮಕಾತಿ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.

ಇದಕ್ಕೂ ಮೊದಲು ಅಂದರೆ ಏಪ್ರಿಲ್ 2025 ರಲ್ಲಿ ಹೈ ಕೋರ್ಟ್ ಈ ಆಪ್ ಆಧಾರಿತ ಕಂಪನಿಗಳಿಗೆ (Rapido) ಜೂನ್ 15 ರವರೆಗೆ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರೆಸಲು ಮಧ್ಯಂತರ ಅನುಮತಿ ನೀಡಿತ್ತು. ಆದರೆ ನ್ಯಾಯಾಲಯ ಈಗ ಈ ಮಧ್ಯಂತರ ಆದೇಶವನ್ನು ಮುಂದುವರೆಸಲು ನಿರಾಕರಿಸಿದೆ. ಕರ್ನಾಟಕ ಸರಕಾರ 2021 ರಲ್ಲಿ ಎಲೆಕ್ರ್ಟಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ಪ್ರಾರಂಭಿಸಿತ್ತು. ಆದರೆ ಸುರಕ್ಷತೆ ಹಾಗು ನಿಯಮ ಕೊರತೆಯಿಂದಾಗಿ ಇದನ್ನು 2024 ರಲ್ಲಿ ವಾಪಸ್ಸು ತೆಗೆದುಕೊಂಡಿತ್ತು.

ಬೆಂಗಳೂರಿನಂತಹ ಜನನಿಬಿಡ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಈ ಟ್ಯಾಕ್ಸಿಗಳು (Rapdio) ಸಾರಿಗೆ ಸಾಧನವಾಗಿತ್ತು. ಸಂಚಾರ ದಟ್ಟಣೆ ತಪ್ಪಿಸಲು ಜನರು ಈ ಸದನಗಳನ್ನು ಬಳಸುತ್ತಿದ್ದರು. ಇದೀಗ ಸರಕಾರಿ ಸಾರಿಗೆ ಸಾಧನಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ನೂಕು ನುಗ್ಗಲಿನ ಪರಿಸ್ಥಿತಿ ಸರಕಾರ ಹೇಗೆ ನಿಯಂತ್ರಣ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

By Admin

News junkie, love to write political, current affairs, financial literate and general knowledge content.

Leave a Reply

Your email address will not be published. Required fields are marked *