ರಾಷ್ಟೀಯ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಪ್ರಯಾಣ ಸುಲಭವಾಗಿಸಲು ಸಾರಿಗೆ ಇಲಾಖೆ ವಾರ್ಷಿಕ ಫಾಸ್ಟಾಗ್ (Annual Fastag) ಅನ್ನು ಪರಿಚಯಿಸಿದೆ. ಈ ಪಾಸ್ ಕೇವಲ 3000 ರುಪಾಯಿಗೆ 200 ಟ್ರಿಪ್ಗಳನ್ನು ಒದಗಿಸುತ್ತದೆ. ಪ್ರತಿ ಟ್ರಿಪ್ ಗೆ 15 ರೂಪಾಯಿಗಳಂತೆ ಬೀಳುತ್ತದೆ. ಈ ಯೋಜನೆ ಪ್ರಯಾಣಿಕ ವಾಹನಗಳಿಗೆ ಅನ್ವಯವಾಗುತ್ತದೆ. ಅಲ್ಲದೆ ಈ ಯೋಜನೆ ಆಗಸ್ಟ್ 15,2025 ರಿಂದಲೇ ಜಾರಿಗೆ ಬರಲಿದೆ. ಜನರ ಆಧಾಯ ಉಳಿಸುವುದು ಇದರ ಮುಖ್ಯ ಉದ್ದೇಶ. ಹೆಚ್ಚಾಗಿ ರಾಷ್ಟೀಯ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಇದೀಗ ಸದ್ಯಕ್ಕೆ ಇರುವ ರೆಗ್ಯುಲರ್ ಪಾಸ್ ಮುಂದುವರೆಯುತ್ತದೆ. ಆಗಸ್ಟ್ 16 ರಿಂದ ನೀವು ವಾರ್ಷಿಕ ಪಾಸ್ (Annual Fastag) ಪಡೆದರೆ 200 ಉಚಿತ ಪ್ರಯಾಣ 1 ವರ್ಷದ ವರೆಗೆ ಇರಲಿದೆ. ಈ ಸೇವೆ ಆಗಸ್ಟ್ 16 ರ ನಂತರ ಸಿಗಲಿದೆ. ವಾರ್ಷಿಕ ಪಾಸ್ ಅರ್ಹತಾ ಮಾನದಂಡಗಳನ್ನು ಪುರಸಿದರೆ ಮಾತ್ರ ಲಭ್ಯವಾಗುತ್ತದೆ. ಈ ಸೇವೆ ಪಡೆದ ನಂತರ ಫಾಸ್ಟಾಗ್ ಅನ್ನು ನಿಮ್ಮ ವಿಂಡ್ ಶೀಲ್ಡ್ ಗೆ ಅಂಟಿಸಲಾಗುತ್ತದೆ. ಮಾನ್ಯವಾದ ಹಾಗು ನೋಂದಾಯಿತ ಸಂಖ್ಯೆ ಗೆ ಇದನ್ನು ಲಿಂಕ್ ಮಾಡಲಾಗುತ್ತದೆ.
ನೀವು ಈ ವಾರ್ಷಿಕ ಫಾಸ್ಟಾಗ್ ಪಾಸ್ ಅನ್ನು ಯಾತ್ರಾ ಮೊಬೈಲ್ ಅಪ್ಲಿಕೇಶನ್ ನಿಂದ ಪಡೆಯಬಹುದು. ಅಥವಾ NHAI ವೆಬ್ಸೈಟ್ ಮೂಲಕ ಕೂಡ ಪಡೆಯಬಹುದು. ಇದನ್ನು ಖರೀದಿಸಿದ ನಂತರ ಒಂದು ವರ್ಷದವರೆಗೆ ಉಚಿತ ಪ್ರಯಾಣ ರಾಷ್ಟೀಯ ಹೆದ್ದಾರಿಯಲ್ಲಿ ಮಾಡಬಹುದು.

ವಾಹನದ ಅರ್ಹತೆ ಹಾಗು ಅದಕ್ಕೆ ಲಿಂಕ್ ಮಾಡಲಾದ ಫಾಸ್ಟಾಗ್ ಅನ್ನು ಪೂರೈಕೆ ಮಾಡಿದ ನಂತರ ವಾರ್ಷಿಕ ಪಾಸ್ (Annual Fastag) ಅನ್ನು ಸಕ್ರಿಯಗೊಳಿಸಲಾಗುತ್ತದೆ. ಪರಿಶೀಲನೆ ಮಾಡಿದ ನಂತರ ಬಳಕೆದಾರರು NHAI ಅಥವಾ ಯಾತ್ರಾ ಮೊಬೈಲ್ ಅಪ್ಲಿಕೇಶನ್ ಮೂಲಕ 2025-26 ನೇ ವರ್ಷಕ್ಕೆ 3000 ರೂಪಾಯಿಗಳನ್ನು ಪಾವತಿ ಮಾಡಬೇಕು. ನಂತರ ಈ ಪಾಸ್ ಸಕ್ರಿಯವಾಗುತ್ತದೆ. ಈ ಪಾಸ್ ಒಂದು ವರ್ಷದವರೆಗೆ ಮಾನ್ಯ ಇರಲಿದೆ. ಹಾಗೇನೇ 200 ಟ್ರಿಪ್ ಗಳ ವರೆಗೆ ಮಾನ್ಯತೆ ಇರಲಿದೆ. ಒಂದು ವರ್ಷ ಪೂರ್ಣಗೊಳ್ಳುವ ಮೊದಲು 200 ಟ್ರಿಪ್ ಗಳನ್ನೂ ಮುಗಿಸಿದರೆ ನೀವು ಹೊಸ ವರ್ಷ ಬರುವ ತನಕ ಪ್ರತಿ ಟ್ರಿಪ್ ಗು ರೆಗ್ಯುಲರ್ ಟೋಲ್ ಕಟ್ಟಬೇಕಾಗುತ್ತದೆ. ಒಂದು ವರ್ಷದ ನಂತರ ಅದನ್ನು ಮತ್ತೆ ಸಕ್ರಿಯಗೊಳಿಸಬೇಕಾಗುತ್ತದೆ.
ಆಗಲೇ ಹೇಳಿದ ಹಾಗೆ ನಿಮಗೆ ವರ್ಷಕ್ಕೆ 200 ಟ್ರಿಪ್ ಗಳು ಉಚಿತವಾಗಿ ಸಿಗಲಿದೆ. ನೀವು ಪ್ರತಿ ಬಾರಿ ಟೋಲ್ ದಾಟಿದಾಗ ಅದು ಒಂದು ಟ್ರಿಪ್ ಎಂದು ಗಣನೆಗೆ ತೆಗೆದುಕೊಳ್ಳುತ್ತದೆ. ಒಂದು ಸುತ್ತಿನ ಪ್ರವಾಸ ಹೋಗಲು ಬರಲು ಅಂದರೆ ಅದು 2 ಟ್ರಿಪ್ ಎಂದು ಪರಿಗಣಿಸಲಾಗುತ್ತದೆ. ಮುಚ್ಚಿದ ಟೋಲ್ ಪ್ಲಾಜಾ ಗೆ ಒಂದು ಜೋಡಿ ಪ್ರವೇಶ ಹಾಗು ನಿರ್ಗಮನ ವನ್ನು ಒಂದೇ ಟ್ರಿಪ್ ಎಂದು ಪರಿಗಣಿಸಲಾಗುತ್ತದೆ.(Annual Fastag)