Loksabha Election 2024: ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆ ತಡೆ. ಕಾಂಗ್ರೆಸ್ ಮಿತ್ರ ಪಕ್ಷ DMK ತನ್ನ ಪ್ರಣಾಳಿಕೆಯಲ್ಲಿ ಘೋಷಣೆ.

ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಸರಕಾರ ಇದೆ ಹಾಗೇನೇ ತಮಿಳುನಾಡಿನಲ್ಲಿ ಕಾಂಗ್ರೆಸ್ ಮಿತ್ರ ಪಕ್ಷ ಡಿಎಂಕೆ (DMK) ಇದೆ. ಈಗಾಗಲೇ ಇವರುಗಳು ಅಧಿಕಾರ ನಡೆಸುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ (Loksabha Election 2024) ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಕರ್ನಾಟಕ ವಿರುದ್ಧ ದ್ರೋಹ ಮಾಡಲು ಹೊರಟಿದೆ ಕಾಂಗ್ರೆಸ್ ಮಿತ್ರ ಪಕ್ಷ ಡಿಎಂಕೆ.

ಮೇಕೆದಾಟು ಯಾವುದೇ ಕಾರಣಕ್ಕೂ ಜಾರಿ ಮಾಡಲು ಬಿಡುವುದಿಲ್ಲ ಎಂದು ಇಂಡಿ ಮಿತ್ರ ಪಕ್ಷದ ಸ್ಟಾಲಿನ್ (Stalin) ಘೋಷಣೆ ಮಾಡಿದ್ದಾರೆ. ಕರ್ನಾಟಕದಲ್ಲಿ ವಿರೋಧ ಪಕ್ಷದಲ್ಲಿ ಇರುವಾಗ ನನ್ನ ನೀರು ನನ್ನ ಹಕ್ಕು ಎಂದು ಬಿಜೆಪಿ (BJP) ಸರಕಾರ ದ ವಿರುದ್ಧ ಪ್ರತಿಭಟನೆ ನಡೆಸಿದ್ದ ಡಿ ಕೆ ಶಿವಕುಮಾರ್ (D.K. Shivakumar) ಇಂದು ತಮ್ಮ ಮಿತ್ರ ಪಕ್ಷದ ನಾಯಕರು ನೀರಿನ ಯೋಜನೆ ನಿಲ್ಲಿಸುವುದಾಗಿ ತಮ್ಮ ಪ್ರಣಾಳಿಕೆ ಯಲ್ಲಿ (DMK Manifesto) ಘೋಷಿಸುವುದನ್ನು ವಿರೋಧ ಕೂಡ ಮಾಡಲಿಲ್ಲ.

ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ವಿಪಕ್ಷ ನಾಯಕ ಆರ್ ಅಶೋಕ (R. Ashok), ಶಿವಕುಮಾರ್ ಅವರು ತಮ್ಮ ಎಲ್ಲ ಶಾಸಕರನ್ನು ಚೆನ್ನೈ ಗೆ (Chennai) ಕರೆದುಕೊಂಡು ಹೋಗಿ ಪ್ರತಿಭಟನೆ ನಡೆಸುತ್ತಾರೆ ಅಥವಾ ರಾಹುಲ್ ಗಾಂಧಿ (Rahul Gandhi)ಯನ್ನು ಮೆಚ್ಚಿಸಲು ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ರಾಜಿ ಮಾಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿಗೆ ನೀರು ತರುತ್ತೇನೆ ಎಂದು ಮೇಕೆದಾಟು (Mekedatu) ಪಾದಯಾತ್ರೆ ಮಾಡಿ ಕನ್ನಡಿಗರ ಮೂಗಿಗೆ ತುಪ್ಪ ಸುರಿದು ಅಧಿಕಾರಕ್ಕೆ ಏರಿದ ನಾಡದ್ರೋಹಿ ಕರ್ನಾಟಕ ಕಾಂಗ್ರೆಸ್ ಸರಕಾರ ಈಗ ಕನ್ನಡಿಗರ ಬೆನ್ನಿಗೆ ಚೂರಿ ಹಾಕುತ್ತಿದೆ ಎಂದು ಆರ್ ಅಶೋಕ್ ಕಿಡಿ ಕಾರಿದ್ದಾರೆ. ಇದೀಗ ಕರ್ನಾಟಕದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಈಗ ಯಾವುದೇ ಕನ್ನಡ ಪರ ಸಂಘಟನೆಗಳು ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ ಮಾಡದೇ ಇರುವುದು ಆಶ್ಚರ್ಯ ತಂದಿದೆ.

congressd k shivakumardmkmanifesto
Comments (0)
Add Comment