ICC World Cup T-20 ಅಂತಿಮ ಹಣಾಹಣಿ ಯಾವ ತಂಡಗಳ ಮಧ್ಯೆ ನಡೆಯಲಿದೆ? ಇಲ್ಲಿ ಓದಿರಿ.

ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕಾತುರದಿಂದ ಕಾಯುತ್ತಿದ್ದ ವರ್ಲ್ಡ್ ಕಪ್ 20-20 ಅಂತಿಮ ಘಟ್ಟ ತಲುಪಿದ್ದು ಇದೀಗ ಪ್ರಶಸ್ತಿಗಾಗಿ ತಂಡಗಳು ಆಡಲಿವೆ. ಹಾಗಾದರೆ ಎರಡು ಗ್ರೂಪ್ ನಲ್ಲಿ ಯಾವ ತಂಡಗಳು ಯಾವ ಸ್ಥಾನ ಪಡೆದುಕೊಂಡಿದೆ. ಮತ್ತು ಸೆಮಿ ಫೈನಲ್ ನಲ್ಲಿ ಯಾವ ತಂಡಗಳು ಮುಖಾಮುಖಿ ಆಗಲಿದೆ ಎಂಬ ಮಾಹಿತಿಗಾಗಿ ಮುಂದಕ್ಕೆ ಓದಿರಿ.

ಈ ಬಾರಿಯ ವರ್ಲ್ಡ್ ಕಪ್ ಹಾಟ್ ಫೇವರೀಟ್ ತಂಡವಾದ ಭಾರತ ಕೋಟ್ಯಂತರ ಭಾರತೀಯರಿಗೆ ನಿರಾಶೆ ಮೂಡಿಸಿದೆ ಲೀಗ್ ಹಂತದಲ್ಲೇ ಹೊರಕ್ಕೆ ಬಿದ್ದಿದೆ. ತನ್ನ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲವಾದ ತಂಡ ನಿನ್ನೆ ಅಫ್ಘಾನಿಸ್ತಾನ ಸೋಲುತ್ತಿದ್ದಂತೆ ಹೊರಕ್ಕೆ ಬಿದ್ದಿದೆ. ಇನ್ನೊಂದು ಔಪಚಾರಿಕ ಪಂದ್ಯ ಉಳಿದಿದ್ದು ಅದನ್ನಾದರೂ ಗೆದ್ದು ಕ್ರೀಡಾಭಿಮಾನಿಗಳು ಸಂತಸ ಪಡುವಂತೆ ಮಾಡುವರು ಎಂದು ನಂಬಿದ್ದೇವೆ.

ಗ್ರೂಪ್ 1 ರಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನ ಪಡೆದು ಕೊಂಡರೆ, ಗ್ರೂಪ್ B ನಲ್ಲಿ ಪಾಕಿಸ್ತಾನ ಮೊದಲ ಸ್ಥಾನ ಪಡೆದುಕೊಂಡಿದೆ. ಇದೀಗ ಗ್ರೂಪ್ A ಮತ್ತು B ನಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ಅಂತಿಮ ಹಣಾಹಣಿಗೆ ಸಜ್ಜಾಗಿದೆ. ಮೊದಲ ಸೆಮಿಫೈನಲ್ ಪಂದ್ಯ ನವೆಂಬರ್ 10 ರಂದು ನಡೆಯಲಿದ್ದು ನ್ಯೂಝಿಲ್ಯಾಂಡ್ ಮತ್ತು ಇಂಗ್ಲೆಂಡ್ ತಂಡಗಳು ಎದುರಾಗಲಿದ್ದು ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದೆ ಎಂದು ಕಾದು ನೋಡಬೇಕಾಗಿದೆ.

ಗ್ರೂಪ್ A ಮತ್ತು B ಯಲ್ಲಿ ಮೊದಲ ಸ್ಥಾನ ಪಡೆದುಕೊಂಡ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಪರಸ್ಪರ ಎರಡನೇ ಸೆಮಿ ಫೈನಲ್ ನಲ್ಲಿ ಆಡಲಿವೆ. ಈ ಪಂದ್ಯ ನವೆಂಬರ್ 11 ರಂದು ನಡೆಯಲಿದೆ. ಫೈನಲ್ ಪ್ರವೇಶಿಸುವ ಹಾಟ್ ಫೇವರಿಟ್ ತಂಡಗಳು ಇಂಗ್ಲೆಂಡ್ ಮತ್ತು ನ್ಯೂಜ್ಲ್ಯಾಂಡ್ ಆಗಿದ್ದು ಈ ಲೆಕ್ಕಾಚಾರ ಹೇಗೆ ಬೇಕಾದರೂ ತಲೆ ಕೆಳಗಾದೀತು. ಈ ಬಾರಿಯ ವಿಶ್ವಕಪ್ ಯಾರ ಮುಡಿಗೇರಲಿದೆ ಎಂದು ಕಾದು ನೋಡೋಣ.

Comments (0)
Add Comment