Budget 2025: ಮಾಧ್ಯಮ ವರ್ಗದವರಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ನಿರ್ಮಲ ಸೀತಾರಾಮನ್? 12 ಲಕ್ಷದವರೆಗೆ ಇನ್ನು ಮುಂದೆ ಆದಾಯ ತೆರಿಗೆ ಕಟ್ಟಬೇಕೆಂದಿಲ್ಲ.
ಕೇಂದ್ರದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಇಂದು 2025-26 ರ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ಬಜೆಟ್ ಅಲ್ಲಿ ಬಹಳ ಬದಲಾವಣೆ ಮಾಡಿದ್ದೂ ಮಾಧ್ಯಮ ವರ್ಗದ ಜನರ ಬಹು ವರ್ಷಗಳ ಬೇಡಿಕೆಗೆ ಇಂದು ಮನ್ನಣೆ ಸಿಕ್ಕಿದೆ. ಈ ಬಜೆಟ್ ಅಲ್ಲಿ 12 ಲಕ್ಷದವರೆಗಿನ ಆದಾಯವನ್ನು ತೆರಿಗೆ ಮುಕ್ತ ಮಾಡಲಾಗಿದೆ. ಇಂದು ಸಹಜವಾಗಿ ಮಾದ್ಯಮವರ್ಗದವರಿಗೆ ಖುಷಿ ತಂದಿದೆ.
ಈ ಬಜೆಟ್ ಮುಖ್ಯವಾಗಿ ಮಾಧ್ಯಮ ವರ್ಗದವರಿಗೆ ತರಲಾಗಿದೆ ಇದರಿಂದ ಜನರ ಕೈಯಲ್ಲಿ ಹಣ ಉಳಿಯುತ್ತದೆ. ಇದರಿಂದ ಜನರ ಹಣ ಮಾರುಕಟ್ಟೆಯಲ್ಲಿ ಬಳಸುವುದು ಜಾಸ್ತಿಯಾಗುತ್ತದೆ ಅಲ್ಲದೆ ಇದು ಇನ್ವೆಸ್ಟ್ಮೆಂಟ್, ಉಳಿತಾಯಗಳನ್ನೂ ಹೆಚ್ಚಿಸುತ್ತದೆ ಎಂದು ನಿರ್ಮಲ ಸೀತಾರಾಮನ್ ಹೇಳಿದ್ದಾರೆ.
ಇನ್ನು ಈ ಹೊಸ ಸ್ಲಾಬ್ ನೋಡುವುದಾದರೆ 12 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ ಅಂದರೆ 0 ತೆರಿಗೆ ಹಾಗೇನೇ ಸಂಬಳ ಪಡೆಯುವವರಿಗೆ 75 ಸಾವಿರ ಸ್ಟ್ಯಾಂಡರ್ಡ್ ಡಿಡಕ್ಷನ್ ಸಿಗುತ್ತಿದ್ದು 12 ಲಕ್ಷದ 75 ಸಾವಿರದವರೆಗೆ ಯಾವುದೇ ತೆರಿಗೆ ಇಲ್ಲ. ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಇನ್ನು ಇದಕ್ಕಿಂತ ಮೇಲೆ ಆದಾಯ ಇರುವವರಿಗೆ ಸರಕಾರ ಹೊಸ ತೆರಿಗೆ ಸ್ಲಾಬ್ ತಂದಿದೆ. 0-4 ಲಕ್ಷದವರೆಗೆ ತೆರಿಗೆ ಇಲ್ಲ, 4 ರಿಂದ 8 ಲಕ್ಷದವರೆಗೆ 5%, 8 ರಿಂದ 12 ಲಕ್ಷದವರೆಗೆ 10%, 12 ರಿಂದ 16 ಲಕ್ಷದವರೆಗೆ 15%, 16 ರಿಂದ 20 ಲಕ್ಷದವರೆಗೆ 20%, 20 ರಿಂದ 24 ಲಕ್ಷದವರೆಗೆ 25% ಹಾಗು 24 ಲಕ್ಷಗಿಂತಲೂ ಅಧಿಕ ಆದಾಯ ಇರುವವರಿಗೆ 30% ತೆರಿಗೆ ಇರಲಿದೆ. ಈ 12 ಲಕ್ಷದವರೆಗಿನ ಆದಾಯ ಇರುವ ಜನರಿಗೆ ತೆರಿಗೆ ಮೇಲೆ ರಿಬೇಟ್ ನೀಡಲಾಗುತ್ತದೆ.