Chandana News

Kannada Trending News

Chandana News

Kannada Trending News

Trending

25 ಲಕ್ಷ ರೂಪಾಯಿಗಳವರೆಗಿನ ಗೃಹ ಸಾಲದ ಬಡ್ಡಿ ಮೇಲೆ ಮೋದಿ ಸರಕಾರದಿಂದ ಸಿಗಲಿದೆ ಸಬ್ಸಿಡಿ. ಮಾಧ್ಯಮ ವರ್ಗ ಕುಟುಂಬಗಳಿಗೆ ಆಗಲಿದೆ ಇದರಿಂದ ಲಾಭ.

ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಮೊದಲ ಅವಧಿಯಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana) ಜಾರಿ ಗೊಳಿಸಿದರು ಕೂಡ ಎರಡನೇ ಹಂತವನ್ನು ಆಗಸ್ಟ್ 2024 ರಲ್ಲಿ ಚಾಲನೆ ನೀಡಿದ್ದಾರೆ. ಈ ಯೋಜನೆ ಅಡಿಯಲ್ಲಿ ನಗರದ ಬಡ ಮತ್ತು ಮಾಧ್ಯಮ ವರ್ಗದ ಕುಟುಂಬಗಳ ಮನೆ ಕಟ್ಟುವ ಕನಸಿಗೆ ಸಹಾಯ ಮಾಡಲಿದೆ. PMAY-U ಅಡಿಯಲ್ಲಿ 1.18 ಕೋಟಿ ಮನೆಗಳಿಗೆ ಅನುಮೋದನೆ ನೀಡಲಾಗಿದೆ. ಹಾಗೇನೇ ಇದರಲ್ಲಿ 85.5 ಲಕ್ಷ ಕ್ಕೂ ಹೆಚ್ಚು ಮನೆಗಳನ್ನು ಫಲಾನುಭವಿ ಗಳಿಗೆ ಹಸ್ತಾಂತರಿಸಲಾಗಿದೆ. ಇನ್ನು ಉಳಿದ ಮನೆಗಳು ನಿರ್ಮಾಣ ಹಂತದಲ್ಲಿವೆ. ಇನ್ನು ಎರಡನೇ ಹಂತದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2.30 ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

ಯಾರೆಲ್ಲ ಅರ್ಹರು?

PMAY-U 2.0 ಯೋಜನೆಯ ಪ್ರಯೋಜನ ಆರ್ಥಿಕವಾಗಿ ದುರ್ಬಲರು (EWS), ಕಡಿಮೆ ಅಧಯದ ವರ್ಗ (LIG), ಮಧ್ಯಾ ಆಧಾಯ ವರ್ಗ (MIG) ಜನರಿಗೆ ಮಾತ್ರ ಲಭ್ಯವಾಗಲಿದೆ. ಇದರೊಂದಿಗೆ ಫಲಾನುಭವಿಗಳು ದೇಶದ ಎಲ್ಲಿಯೂ ಕೂಡ ಸ್ವಂತ ಅಥವಾ ಶಾಶ್ವತ ಮನೆ ಹೊಂದಿರ ಬಾರದು. ಇಂತಹ ಜನರು ಪ್ರಧಾನ್ ಮಂತ್ರಿ ಆವಾಸ್ ಯೋಜಯೇ ಅಡಿಯಲ್ಲಿ ಗೃಹ ಸಾಲ ಸಬ್ಸಿಡಿ ಪಡೆಯಲು ಅರ್ಹರಾಗಿರುತ್ತಾರೆ.

EWS ಅಂದರೆ ಯಾವ ವರ್ಗ?

ವಾರ್ಷಿಕವಾಗಿ ಕುಟುಂಬದ ಆಧಾಯ 3 ಲಕ್ಷದವರೆಗೆ ಇದ್ದರೆ ಆ ಕುಟುಂಬಗಳು EWS ಎಕನಾಮಿಕ್ ವೀಕೇರ್ ಸೆಕ್ಷನ್ ಅಲ್ಲಿ ಬರುತ್ತದೆ. ಹಾಗೇನೇ ವಾರ್ಷಿಕವಾಗಿ ಆಧಾಯ 3 ಲಕ್ಷದಿಂದ 6 ಲಕ್ಷದವರೆಗೆ ಇದ್ದರೆ ಅಂತಹ ಕುಟುಬಗಳು LIG ವರ್ಗದಲ್ಲಿಯೂ, ಇನ್ನು 6 ಲಕ್ಷದಿಂದ 9 ಲಕ್ಷದವರೆಗಿನ ಕೌಟುಬಿಕ ಆಧಾಯ ಇದ್ದಾರೆ ಅಂತವರನ್ನು ಮಾಧ್ಯಮ ವರ್ಗ ಎಂದು ಕರೆಯಲಾಗುತ್ತದೆ.

ಇನ್ನು ಈ ಯೋಜನೆ ಅಫೊರ್ಡಬಲ್ ಹೌಸಿಂಗ್ ಪಾರ್ಟ್ನರ್ಶಿಪ್ (AHP), ಅಫೊರ್ಡಬಲ್ ರೆಂಟಲ್ ಹೌಸಿಂಗ್ (ARH) & ಇಂಟರೆಸ್ಟ್ ಸಬ್ಸಿಡಿ ಸ್ಕೀಮ್ ಎನ್ನುವ ಮೂರೂ ಭಾಗಗಳಲ್ಲಿ ಸಿಗಲಿದೆ.

pmay-u 2.0

ಏನಿದು BLC ಹಾಗು AHP ಎಂದರೇನು?

BLC ಯೋಜನೆಯಡಿಯಲ್ಲಿ EWS ನ ಅರ್ಹ ಕುಟುಂಬಗಳಿಗೆ ತಮ್ಮ ಸ್ವಂತ ಜಾಮೀನು ಹೊಂದಿದ್ದರೆ ಹೊಸ ಮನೆ ನಿರ್ಮಿಸಲು ಕೇಂದ್ರ ಸರಕಾರ ಸಹಾಯ ನೀಡುತ್ತದೆ. ಇನ್ನು AHP ಅಡಿಯಲ್ಲಿ ಖಾಸಗಿ ಹಾಗು ಸರಕಾರಿ ಸಂಸ್ಥೆಗಳಿಂದ ಕೈಗೆಟಕುವ ದರದಲ್ಲಿ ಮನೆ ನಿರ್ಮಾಣ ಮಾಡಿ ಹಣಕಾಸು ನೆರವು ನೀಡಿ EWS ನ ಅರ್ಹ ಕುಟುಂಬಗಳಿಗೆ ಈ ಮನೆಗಳನ್ನು ಹಸ್ತಾಂತರಿಸಲಾಗುವುದು. ಇನ್ನು ARH ಯೋಜನೆ ಅಡಿಯಲ್ಲಿ ನಗರದಲ್ಲಿ ಬರುವ ವಲಸಿಗರು, ಕೆಲಸ ಮಾಡುವ ಮಹಿಳೆಯರು, ಕೈಗಾರಿಕಾ ಕೆಲಸಗಾರರು, ನಗರ ವಲಸಿಗರು, ನಿರಾಶ್ರಿತರು, ನಿರ್ಗತಿಕರು ಮತ್ತು ವಿದ್ಯಾರ್ಥಿಗಳಿಗೆ ಹಾಗು ಇತರ ಸಮಾನ ಪಾಲುದಾರರ ಫಲಾನುಭವಿಗಳಿಗೆ ಸಾಕಷ್ಟು ಬಾಡಿಗೆ ಮನೆಗಳನ್ನು ನಿರ್ಮಾಣ ಮಾಡಲಾಗುವುದು.

ಏನಿದು ಸಾಲದ ಮೇಲಿನ ಬಡ್ಡಿಯ ಸಬ್ಸಿಡಿ ಯೋಜನೆ?

ಇನ್ನು ಬಡ್ಡಿ ಮೇಲೆ ಸಿಗುವ ಸಬ್ಸಿಡಿ ಯೋಜನೆ ಬಗ್ಗೆ ಹೇಳುವುದಾದರೆ, ಇದು EWS\LIG ಹಾಗು MIG ಕುಟುಂಬಗಳಿಗೆ ಗೃಹ ಸಾಲಗಳ ಮೇಲೆ ಸಬ್ಸಿಡಿಯನ್ನು ಒದಗಿಸುತ್ತದೆ. 35 ಲಕ್ಷದವರೆಗಿನ ಮನೆಗೆ 25 ಲಕ್ಷದವರೆಗೆ ಗೃಹ ಸಾಲ ಪಡೆಯುವ ಫಲಾನುಭವಿಗಳಿಗೆ ವಿಶೇಷ ಸೌಲಭ್ಯ ಸಿಗುತ್ತದೆ. ಇಂತಹ ಫಲಾನುಭವಿಗಳು 12 ವರ್ಷಗಳ ಅವಧಿಗೆ 8 ಲಕ್ಷದ ಮೊದಲ ಸಾಲದ ಮೇಲೆ ಶೇಕಡಾ 4 ರಷ್ಟು ಬಡ್ಡಿ ಯ ಸಬ್ಸಿಡಿ ಗೆ ಅರ್ಹರಾಗಿರುತ್ತಾರೆ. ಹಾಗೇನೇ ಅರ್ಹ ಫಲಾನುಭವಿಗಳಿಗೆ 5 ವಾರ್ಷಿಕ ಕಂತುಗಳಲ್ಲಿ ಪುಶ್ ಬಟನ್ ಮೂಲಕ 1.80 ಲಕ್ಷ ಸಹಾಯಧನ ಕೂಡ ನೀಡಲಾಗುತ್ತದೆ. ಇನ್ನು ನಿಮಗೆ ಈ ನಾಲ್ಕರಲ್ಲಿ ಯಾವ ಯೋಜನೆ ಸೂಕ್ತ ಎಂದು ತಿಳಿದು ಅದರ ಲಾಭವನ್ನು ಪಡೆಯಬಹುದು.

Leave a Reply

Your email address will not be published. Required fields are marked *