ಐಪಿಎಲ್ (IPL) ಆರಂಭಕ್ಕೂ ಮುನ್ನ ವಿಶ್ರಾಂತಿ ಪಡೆಯುತ್ತಿದ್ದ ಕೊಹ್ಲಿ (Virat Kohli) ಹೊಸ ರೂಪದಲ್ಲಿ ಕಾಣಿಸಿಕೊಂಡದ್ದು ನಾವೆಲ್ಲ ನೋಡಿದ್ದೇವೆ. ಅವರ ಹೊಸ ಕೇಶ ವಿನ್ಯಾಸದ ಚಿತ್ರಗಳು ವೈರಲ್ ಆಗಿದ್ದು ಎಲ್ಲಾ ಅಭಿಮಾನಿಗಳು ಕೊಹ್ಲಿ ಅವರ ಹೊಸ ಅವತಾರ ಕಂಡು ಖುಷಿ ಆಗಿದ್ದರು. ಆದರೆ ಅವರ ಈ ಕೇಶ ವಿನ್ಯಾಸಕ್ಕೆ ತಗುಲಿದ ಖರ್ಚು ಎಷ್ಟು ಎಂದು ಕೇಳಿದರೆ ನೀವು ಒಂದು ಸಲಕ್ಕೆ ನಿಮ್ಮ ಉಸಿರು ಬಿಗಿದಿಟ್ಟು ಕೊಳ್ಳುವುದು ಗ್ಯಾರಂಟಿ.
ತನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ಮಾಡಿಕೊಂಡ ಈ ಹೇರ್ ಸ್ಟೈಲ್ ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಖತ್ ವೈರಲ್ ಆಗಿದೆ. ಆಲಿಮ್ ಹಕೀಮ್ (Aleem Hakim) ಎಂಬ ಹೆಸರಾಂತ ಹೇರ್ ಸ್ಟೈಲ್ ಸ್ಪೆಷಲಿಸ್ಟ್ ಮಾಡಿರುವ ಈ ಹೇರ್ ಸ್ಟೈಲ್ ಫೋಟೋ ಅನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಾಲಿವುಡ್ ಸೆಲೆಬ್ರಿಟಿ ಗಳ ಹೇರ್ ಸ್ಟೈಲ್ ಮಾಡುವ ಇವರು ಹೇಳುವ ಪ್ರಕಾರ ಇವರ ಹೇರ್ ಸ್ಟೈಲ್ ಆರಂಭಿಕ ಬೆಲೆಯೇ 1 ಲಕ್ಷ ರುಪಾಯಿ. ಹೌದು ಅಚ್ಚರಿ ಅನಿಸಿದರೂ ಅದು ಸತ್ಯ. ಸಿನಿಮಾಗಳಲ್ಲಿ ಹಲವಾರು ಸ್ಟೈಲ್ ನಲ್ಲಿ ಹೇರ್ ಸ್ಟೈಲ್ ಸ್ಪೆಷಲಿಸ್ಟ್ ಆಗಿ ಕಾರ್ಯ ನಿರ್ವಹಿಸಿದ ಇವರು. ಮಾಹಿತಿ ಪ್ರಕಾರ ಕೊಹ್ಲಿ ಅವರ ಹೇರ್ ಸ್ಟೈಲ್ ಗೆ 1.5 ಲಕ್ಷ ಪಡೆದಿದ್ದಾರೆ.
ಖ್ಯಾತ ಕ್ರಿಕೆಟ್ ಪಟು ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಕೂಡ ಹಕೀಮ್ ಅವರ ಬಳಿಯೇ ತಮ್ಮ ಹೇರ್ ಸ್ಟೈಲ್ ಮಾಡಿಸಿಕೊಳ್ಳುತ್ತಾರೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಇವರನ್ನೇ ಹೇರ್ ಸ್ಟೈಲ್ ಸ್ಪೆಷಲಿಸ್ಟ್ ಆಗಿ ಇಟ್ಟುಕೊಳ್ಳುತ್ತಾರೆ. ಇಂಟರ್ವ್ಯೂ ಒಂದರಲ್ಲಿ ಮಾತಾಡಿದ್ದ ಹಕೀಮ್ ಅವರು ತಮ್ಮ ಹೇರ್ ಸ್ಟೈಲ್ ಆರಂಭಿಕ ಬೆಲೆಯೇ 1 ಲಕ್ಷ ಎಂದು ಹೇಳಿದ್ದಾರೆ.