ಬ್ಯಾಂಕ್ ಲಾಕರ್ (Bank locker) ಹೊಂದಿರುವವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮಗಳನ್ನು ಬ್ಯಾಂಕ್ ಲಾಕರ್ ಗೆ ಸಂಬಂಧ ಪಟ್ಟ ಹಾಗೆ ಜಾರಿ ಮಾಡಿದೆ. ಬ್ಯಾಂಕ್ ನಲ್ಲಿ ಇಟ್ಟ ಲಾಕರ್ ಸುರಕ್ಷತೆ ಬಗ್ಗೆ RBI ನ ಹೊಸ ನಿಯಮ ಇದಾಗಿದೆ. ಬ್ಯಾಂಕನಲ್ಲಿ ಲಾಕರ್ ಸೇವೆ ಪಡೆಯುವುದಕ್ಕೂ ಮೊದಲು ಅದಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಲಾಕರ್ ಸೇವೆ ಆ ಸಮಯದಲ್ಲಿ ಲಭ್ಯವಿಲ್ಲದೆ ಹೋದರೆ ನಿಮ್ಮ ಅರ್ಜಿಯನ್ನು ವೈಟಿಂಗ್ ಲಿಸ್ಟ್ ಅಲ್ಲಿ ಇಡಲಾಗುತ್ತದೆ. ಒಂದು ವೇಳೆ ಲಾಕರ್ ಬೇರೆಯವರಿಟ್ಟಿದ್ದು ಖಾಲಿ ಆದರೆ ನಿಮಗೆ ಈ ಲಾಕರ್ ಸೇವೆ ನೀಡಲಾಗುತ್ತದೆ.
ಲಾಕರ್ ತೆರೆಯಲು ಬೇಕಾಗುವ ಡಾಕ್ಯುಮೆಂಟ್ ಗಳು ಯಾವುದು?
ಆಧಾರ್ ಕಾರ್ಡ್ / ಪಾನ್ ಕಾರ್ಡ್
ವಿಳಾಸ ದ ಸಾಕ್ಷಿ
ಪಾಸ್ಪೋರ್ಟ್ ಸೈಜ್ ಫೋಟೋ
ನಿಮ್ಮ ಅಕೌಂಟ್ ಅಲ್ಲಿ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್.
ನಿಮ್ಮ ಲಾಕರ್ ನಿಂದ ಏನಾದರು ಕಳ್ಳತನವಾದರೆ ಏನು ಮಾಡುವುದು?
RBI ನಿಯಮದ ಪ್ರಕಾರ, ನಿಮ್ಮ ಸ್ವತ್ತು ಲಾಕರ್ (Bank locker) ನಿಂದ ಕಳೆದು ಹೋದರೆ ಅಥವಾ ನಿಮಗೆ ಮೋಸ ಆದರೆ, ಆ ವಸ್ತುವಿನ ಲಾಕರ್ ವಾರ್ಷಿಕ ಬಾಡಿಗೆಯ 100 ಪಟ್ಟು ಮಾತ್ರ ಬ್ಯಾಂಕ್ ಹೊಣೆಗಾರಿಕೆಯನ್ನು ಹೊಂದಿರುತ್ತದೆ. ಉದಾಹರಣೆಗೆ ನಿಮ್ಮ ಲಾಕರ್ ಬಾಡಿಗೆ 2000 ಆಗಿದ್ದರೆ, ಬ್ಯಾಂಕ್ ಗರಿಷ್ಟ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡಬಹುದಷ್ಟೆ. ಅದು ಕೂಡ ಒತ್ತಾಯದ ಮೇರೆಗೆ ಸಿಗಬಹುದು. ಒಂದು ವೇಳೆ ನೈಸರ್ಗಿಕ ವಿಕೋಪಗಳಿಂದ ಈ ವಸ್ತುಗಳು ಕಳೆದು ಹೋದರೆ ಬ್ಯಾಂಕ್ ಗಳು ನಿಮ್ಮ ವಸ್ತುವಿಗೆ ಜವಾಬ್ದಾರರಲ್ಲ.

ವಿವಿಧ ಬ್ಯಾಂಕ್ ಗಳಲ್ಲಿ ಲಾಕರ್ ಬಾಡಿಗೆ ಎಷ್ಟಿದೆ? (Bank locker rent)
ಎಸ್ ಬಿ ಐ ರೂಪಾಯಿ 2000 ರಿಂದ 12000
HDFC ಬ್ಯಾಂಕ್ 3000 ರಿಂದ 20000
PNB ರೂಪಾಯಿ 1250 ರಿಂದ 10000
ICICI ರೂಪಾಯಿ 1200 ರಿಂದ 10000
ಕೆನರಾ ಬ್ಯಾಂಕ್ ರೂಪಾಯಿ 2000 ರಿಂದ 10000.
Read This : Rapido: ನಾಳೆಯಿಂದ (ಜೂನ್ 16) ರಾಜ್ಯದಲ್ಲಿ ಓಲಾ, ಉಬೆರ್ ಹಾಗು ರಾಪಿಡೊ ಸೇವೆ ಇರಲ್ಲ. ರಾಜ್ಯ ಸರಕಾರದ ನಿರ್ಧಾರಕ್ಕೆ ಹೈ ಕೋರ್ಟ್ ಸಾಥ್.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಬ್ಯಾಂಕ್ ಲಾಕರ್ (Bank Locker) ಗಳ ಭದ್ರತೆ ನಿಯಮವನ್ನು ನಿಗದಿ ಪಡಿಸಲಾಗಿದೆ. ಆದರೆ ನಿಮ್ಮ ವಸ್ತುಗಳು ಬೆಲೆ ಬಾಳುವಂತಿದ್ದರೆ ಹಾಗು ವಾರ್ಷಿಕ ಬಾಡಿಗೆ ಗಿಂತ ನಿಮ್ಮ ವಸ್ತುವಿನ ಬೆಲೆ ಹೆಚ್ಚಿದ್ದರೆ ಇಡುವುದು ಸೂಕ್ತವಲ್ಲ. ಲಾಕರ್ ಕೀ ಗಳನ್ನೂ ನಿಮ್ಮ ಬಳಿ ಸುರಕ್ಷಿತವಾಗಿರಿಸಿಕೊಳ್ಳುವುದು ಉತ್ತಮ. ಬ್ಯಾಂಕ್ ನೊಂದಿಗೆ ನೀವು ಮಾಡಿಕೊಂಡ ಒಪ್ಪಂದ ಕೂಡ ಜಾಗ್ರತೆಯಾಗಿಟ್ಟುಕೊಳ್ಳಿ. ಕಾಲಕಾಲಕ್ಕೆ ಲಾಕರ್ ಅನ್ನು ಪರಿಶೀಲನೆ ಮಾಡಿ. ಲಾಕರ್ ನಲ್ಲಿ ಹಣವನ್ನು ಇಡಲು ಅವಕಾಶವಿಲ್ಲ. ಈ ಲಾಕರ್ ಗೆ ಯಾವುದೇ ವಿಮೆ ಇರುವುದಿಲ್ಲ. ನೀವು ಬಯಸಿದರೆ ವಯಕ್ತಿವಾಗಿ ನಿಮ್ಮ ಮಟ್ಟದಲ್ಲಿ ವಿಮೆ ಮಾಡಿಸಬಹುದಾಗಿದೆ.