Ration Card: ಇನ್ನು ಮುಂದೆ ರೇಷನ್ ಕಾರ್ಡ್ ಅಗತ್ಯವಿಲ್ಲ. ಮೇರಾ ರೇಷನ್ 2.0 ಮೂಲಕ ಸುಲಭವಾಗಿ ಪಡಿತರ ಪಡೆಯಬಹುದು.
ಪಡಿತರ ಪಡೆಯುವ ನಿಯಮಗಳಲ್ಲಿ ಭಾರತ ಸರಕಾರ ಮಹತ್ತರ ಬದಲಾವಣೆ ಮಾಡಿದೆ. ಈಗ ಪಡಿತರ ಚೀಟಿಯನ್ನು ಪಡಿತರ ಡಿಪೋದಲ್ಲಿ ತೋರಿಸುವ ಅಗತ್ಯವಿಲ್ಲ. ಬದಲಾಗಿ ಜನರು ಮೇರಾ ರೇಷನ್ 2.0 ಮೊಬೈಲ್ ಅಪ್ಲಿಕೇಶನ್ ಬಳಸಿ ಪಡಿತರ ಸುಲಭವಾಗಿ ಪಡೆಯಬಹುದು. ಈ ಬದಲಾವಣೆಯಿಂದ ಪಡಿತರ ಅಗತ್ಯ ಇರುವ ಅನೇಕರಿಗೆ ಇನ್ನಷ್ಟು ಅನುಕೂಲವಾಗಲಿದೆ.
ಏನಿದು ಮೇರಾ ರೇಷನ್ 2.0 APP?
ಭಾರತ ಸರಕಾರವು ಮೇರಾ ರೇಷನ್ 2.0 ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇದು ಪಡಿತರ ಚೀಟಿದಾರರಿಗೆ ರೇಷನ್ ಕಾರ್ಡ್ ಇಲ್ಲದೆಯೂ ಪಡಿತರ ಪಡೆಯಲು ಸಹಾಯವಾಗುತ್ತದೆ. ಈ ಹಿಂದೆ ಜನರು ತಮ್ಮ ರೇಷನ್ ಪಡೆಯಲು ರೇಷನ್ ಕಾರ್ಡ್ ಹಿಡಿದುಕೊಂಡು ಪಡಿತರ ಡಿಪ್ಪೋ ಹೋಗಬೇಕಾಗಿತ್ತು. ಈಗ ಈ ಮೇರಾ ರೇಷನ್ 2.0 ಅಪ್ಲಿಕೇಶನ್ ನಲ್ಲಿ ತಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸುವ ಮೂಲಕ ಆನ್ಲೈನ್ ನಲ್ಲಿ ಪಡಿತರ ಪಡೆಯಬಹುದಾಗಿದೆ.
ಈ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ (Google Play store) ಮೂಲಕ ಡೌನ್ಲೋಡ್ ಮಾಡಬಹುದು. ನಂತರ ತಮ್ಮ ಆಧಾರ್ ಕಾರ್ಡ್ (Adhar Card) ನಂಬರ್ ನಮೂದಿಸುವ ಮೂಲಕ ಒಟಿಪಿ ಹಾಕುವ ಮೂಲಕ ಲಾಗಿನ್ ಆಗಬೇಕು. ಒಮ್ಮೆ ಲಾಗಿನ್ ಆದ ನಂತರ ಮೇರಾ ರೇಷನ್ app ನಲ್ಲಿ ಯಾವ ಜನರು ಪಡಿತರ ತೆಗೆದುಕೊಳ್ಳಬಹುದು ಎನ್ನುವುದನ್ನು ತೋರಿಸುತ್ತದೆ.
ಕೇಂದ್ರ ಸರಕಾರದ ಆಹಾರ ಭದ್ರತಾ ಕಾಯಿದೆಯಡಿ (National Food Security Act) ಕಡಿಮೆ ಬೆಲೆಗೆ ಪಡಿತರ ನೀಡುವ ಯೋಜನೆ ಈ ಹಿಂದೆ ಕಾರ್ಡ್ ಹೊಂದಿರುವವರಿಗೆ ಮಾತ್ರ ನೀಡಿತ್ತು. ಈಗ ಸರಕಾರದ ಮೇರಾ ರೇಷನ್ 2.0 ಅಪ್ಲಿಕೇಶನ್ ಮೂಲಕ ಕಾರ್ಡ್ ಪ್ರಕ್ರಿಯೆ ಸುಲಭಗೊಳಿಸಿದೆ. ಪಡಿತರ ಚೀಟಿ ಅವಶ್ಯಕತೆ ಕೊನೆಗೊಂಡಿರುವುದರಿಂದ ಈಗ ರೇಷನ್ ಅವಶ್ಯಕತೆ ಇರುವ ಪ್ರತಿ ಭಾರತೀಯ ನಾಗರಿಕರಿಗೂ ಪಡಿತರ ಪಡೆಯುವುದರಲ್ಲಿ ಯಾವುದೇ ತೊಂದರೆ ಆಗುವುದಿಲ್ಲ.
ಈ ಹೊಸ ಮೇರಾ ರೇಷನ್ 2.0 (Mera ration 2.0) ಅಪ್ಲಿಕೇಶನ್ ನೀವು ಮನೆಯಲ್ಲಿ ಅಥವಾ ಎಲ್ಲಿ ಬೇಕಾದರೂ ಬಳಸಬಹುದು. ಈ ಯೋಜನೆ ಇಂದ ಮನೆಯಲ್ಲೇ ರೇಷನ್ ಕಾರ್ಡ್ ಮರೆತು ಬರುವವರಿಗೆ ಬಹಳಷ್ಟು ಸಹಾಯವಾಗಲಿದೆ. ಅಲ್ಲದೆ ಕಾರ್ಡ್ ಹರಿಯುವ ಹಾಗು ಅದನ್ನು ಹೊಸತು ಮಾಡಿಸುವ ಪ್ರಮೇಯವೇ ಬರುವುದಿಲ್ಲ.