File Your Income tax return Now!

Connect with us for filing your income tax and GST filing and all sorts of statutory requirement.

Your Attractive Heading

Call To Action

Connect with us for your income tax return and GST filing. The price starting from Just Rs. 500/

voter id

ಭಾರತೀಯ ಚುನಾವಣಾ ಆಯೋಗ ಬುಧವಾರ ಹೊಸ ಘೋಷಣೆ ಮಾಡಿದೆ. ಇದು ಮತದಾರರಿಗೆ ಪ್ರಯೋಜನವನ್ನು ನೀಡುತ್ತದೆ. ಮತದಾರರು ತಮ್ಮ ಗುರುತಿನ ಚೀಟಿಗಾಗಿ (Voter ID) ಹೆಚ್ಚಿನ ಸಮಯ ಕಾಯುವ ಅವಶ್ಯಕತೆ ಇಲ್ಲ. ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ಪರಿಚಯಿಸಲಾಗಿದೆ. ಮತದಾರರಿಗೆ EPIC ಅಥವಾ ಮತದಾರರ ಗುರುತಿನ ಚೀಟಿಯನ್ನು ತ್ವರಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಹೊಸ ನಿಯಮದಲ್ಲಿ ಮತದಾರರನ್ನು ಪಟ್ಟಿಯಲ್ಲಿ ನೋಂದಾಯಿಸಿದ ಅಥವಾ ನವೀಕರಿಸಿದ 15 ದಿನಗಳಲ್ಲಿ EPIC ಕಾರ್ಡ್ ಅನ್ನು ತಲುಪಿಸಲಾಗುತ್ತದೆ.

ಕಳೆದ ನಾಲ್ಕು ತಿಂಗಳುಗಳಲ್ಲಿ ಚುನಾವಣಾ ಆಯೋಗ ಹಾಗು ಮತದಾರರು ಪಾಲುದಾರರ ಅನುಕೂಲಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮತದಾರರ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ಈ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಚುನಾವಣಾ ಆಯೋಗ ತೆಗೆದುಕೊಂಡ ಹಲವು ನಿಯಮದಲ್ಲಿ ಒಂದಾಗಿದೆ. ಚುನಾವಣಾ ಸೇವೆಗಳನ್ನು ವೇಗವಾಗಿ ಹಾಗು ಪರಿಣಾಮಕಾರಿಯಾಗಿ ಎಲ್ಲ ಮತದಾರರಿಗೆ ಸಿಗುವಂತೆ ಮಾಡುವುದು. ಅಲ್ಲದೆ ಚುನಾವಣಾ ಪ್ರಕ್ರಿಯೆಯಲ್ಲಿ ಭದ್ರತ್ರೆ ಹಾಗು ಪಾರದರ್ಶಕತೆ ಹೆಚ್ಚಿಸಲು ಆಧಾರ್ ಹಾಗು ವೋಟ್ ಐಡಿ (Voter ID) ಯನ್ನು ಲಿಂಕ್ ಮಾಡುವುದು ಈ ಹಿಂದೆಯೇ ಘೋಷಣೆ ಮಾಡಿದೆ.

ಹೊಸ ವ್ಯವಸ್ಥೆಯಿಂದ ಚುನಾವಣಾ ನೋಂದಣಿ ಅಧಿಕಾರಿಯಿಂದ ಮತದಾರರ ಗುರುತಿನ ಚೀಟಿ (Voter ID)ವಿತರಣೆಯನ್ನು ಅಂಚೆ ಮೂಲಕ ಮತದಾರರಿಗೆ ತಲುಪಿಸುವವರೆಗೂ ಟ್ರ್ಯಾಕ್ ಮಾಡಲಾಗುತ್ತದೆ. ಪ್ರತಿಯೊಂದು ಹಂತವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಎಲ್ಲ ಹಂತಗಳನ್ನು ಮತದಾರರು ಕೇವಲ SMS ಮೂಲಕ ಪಡೆದುಕೊಳ್ಳುತ್ತಾರೆ. ಈ ಮೊಬೈಲ್ ನಂಬರ್ ನೋಂದಾಯಿತವಾಗಿರಬೇಕು.

ESI ಹೊಸ ECINet ವೇದಿಕೆ ಪ್ರಾರಂಭಿಸಿದೆ. ಇದು ಒಂದು ಐಟಿ ಮೊಡ್ಯೂಲ್ ಆಗಿದೆ. ಇದು ಹಳೆಯ ಐಟಿ ಯನ್ನು ವಿನೂತನಗೊಳಿಸಿ ಮರು ಇಂಜಿನಿಯರಿಂಗ್ ಮಾಡುವ ಮೂಲಕ ಈಗಲೇ ಇರುವ ವೆಬ್ಸೈಟ್ ಅನ್ನು ಹಾಗು ಅದರ ಕೆಲಸವನ್ನು ಸುಗಮಗೊಳಿಸುತ್ತದೆ. ಇದರಿಂದಾಗಿ ಯಾವುದೇ ಮಾಹಿತಿ ವಿಳಂಬವಿಲ್ಲದೆ ನಡೆಯುತ್ತದೆ. ಹಾಗೇನೇ ಡೇಟಾ ಸುರಕ್ಷಿತವಾಗಿಯೂ ಕೂಡ ಇರುತ್ತದೆ.

By Admin

News junkie, love to write political, current affairs, financial literate and general knowledge content.

Leave a Reply

Your email address will not be published. Required fields are marked *