ನೀವು ಹಲವು ಬಾರಿ ಏಟಿಎಂ (ATM withdrawal) ಇಂದ ಹಣ ಪಡೆದಿದ್ದೀರಿ. ಕಾರ್ಡ್ ಮೂಲಕ ಅಥವಾ ಮೊಬೈಲ್ ಬ್ಯಾಂಕ್ ಮೂಲಕ. ಆದರೆ ಬ್ಯಾಂಕ್ ಅಕೌಂಟ್ ಅಲ್ಲಿ ಹಣ ಇಲ್ಲದೆ ಹೋದರೆ ಹಣ ತೆಗೆಯುವುದು ಅಸಾಧ್ಯ. ಇದು ಎಲ್ಲರಿಗು ಗೊತ್ತೇ ಇರುವ ಮಾಹಿತಿ. ಆದರೆ ಇವಾಗ ಏಟಿಎಂ ಮಷೀನ್ ಮೂಲಕವೇ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಿ ಹಣ ಪಡೆಯಬಹುದಾಗಿದೆ. ಇದು HDFC ಬ್ಯಾಂಕ್ ಏಟಿಎಂ ಅಲ್ಲಿ ಈ ಸೌಲಭ್ಯ ಇದೀಗ ಲಭ್ಯವಿದೆ. ಅತಿ ಅವಶ್ಯಕ ಸಂಧರ್ಭದಲ್ಲಿ ಈ ಸೇವೆ ನಮಗೆ ಅನುಕೂಲವಾಗಿರುತ್ತದೆ.
ಪೂರ್ವ ಅನುಮೋದಿತ ಸಾಲ.
ಮೊದಲನೆಯದಾಗಿ ನಿಮ್ಮ ಖಾತೆಗೆ ಪ್ರೀ ಅಪ್ರೂವ್ಡ್ ಅಂದರೆ ಪೂರ್ವ ಅನುಮೋದಿತ ಸಾಲದ ಕೊಡುಗೆ ಇದೆಯೇ ಎಂದು ಪರೀಕ್ಷಿಸಬೇಕಾಗುತ್ತದೆ. ಈ ಆಫರ್ ನಿಮ್ಮ ಖಾತೆಗೆ ಇದ್ದರೆ ನಿಮಗೆ ಈ ಸೌಲಭ್ಯ ಲಭ್ಯವಾಗುತ್ತದೆ. ಈ ಮಾಹಿತಿ ನಿಮಗೆ ಮೊಬೈಲ್ ನಲ್ಲಿ ಬ್ಯಾಂಕ್ ಮೆಸೇಜ್ ಅಥವಾ ಮೊಬೈಲ್ ಬ್ಯಾಂಕ್ ಅಥವಾ ಕಸ್ಟಮರ್ ಕೇರ್ ಗೆ ಕರೆ ಮಾಡುವ ಮೂಲಕ ಈ ಮಾಹಿತಿ ಪಡೆದುಕೊಳ್ಳಬಹುದು. (ATM withdrawal)
ಏಟಿಎಂ ಅಲ್ಲಿ ಹಣ ಪಡೆಯುವುದು ಹೇಗೆ?
ನಿಮ್ಮ ಖಾತೆಗೆ ಪೂರ್ವ ಅನುಮೋದಿತ ಸಾಲ ಇದ್ದರೆ HDFC ಬ್ಯಾಂಕ್ ಏಟಿಎಂ ನಲ್ಲಿ ನೀವು ಸಾಲದ ಆಯ್ಕೆ ಹುಡುಕಬೇಕು. ನಂತರ ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. (ATM withdrawal)

ಇದಾದ ನಂತರ ಒಂದು ಪರದೆ ತೆರೆಯುತ್ತದೆ. ಅದರಲ್ಲಿ ನಿಮ್ಮ ಸಾಲದ ಮೊತ್ತ, ಬಡ್ಡಿದರ ಹಾಗು ತಿಂಗಳಿಗೆ ಹಿಂತಿರುಗಿಸಬೇಕಾದ ಸಾಲದ ಮೊತ್ತ ಹಾಗು ಸಾಲದ ಒಟ್ಟು ಅವಧಿ ಎಲ್ಲ ಮಾಹಿತಿ ಬರೆದಿರುತ್ತದೆ. ಇದನ್ನು ಎಚ್ಚರಿಕೆಯಿಂದ ಓದಿದ ನಂತರ ನೀವು ಪ್ರೋಸಿಡ್ ಮೇಲೆ ಕ್ಲಿಕ್ ಮಾಡಿ. (ATM withdrawal)
ಮುಂದಿನ ಪೇಜ್ ಅಲ್ಲಿ ನಿಮ್ಮ ವಯಕ್ತಿಕ ಮಾಹಿತಿ ಕಾಣಿಸುತ್ತದೆ. ನಿಮ್ಮ ಹೆಸರು, ಇಮೇಲ್, ವಿಳಾಸ ಖಾತೆ ಸಂಖ್ಯೆ ಹಾಗು ಇತರ ಮಾಹಿತಿ. ಇದನ್ನೆಲ್ಲಾ ಪರಿಶೀಲಿಸಿದ ನಂತರ ದೃಡೀಕರಿಸಿ ನಂತರ ಮುಂದುವರೆಯಿರಿ. ನಂತರ ನಿಮ್ಮ ಏಟಿಎಂ ಪಿನ್ ಅನ್ನು ನಮೂದಿಸಿ. ಇದಾದ ನಂತರ ಈ ಸಾಲದ ಹಣವನ್ನು ಕ್ಷಣಾರ್ಧದಲ್ಲಿ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ. ಈ ಸಾಲದ ಮೊತ್ತ ನಿಮ್ಮ ಏಟಿಎಂ ಪರದೆಯ ಮೇಲೆ ಸಂದೇಶವಾಗಿ ಬರುತ್ತದೆ. (ATM withdrawal)

ಇನ್ನೊಂದು ವಿಧಾನ ನಿಮ್ಮ ಕ್ರೆಡಿಟ್ ಕಾರ್ಡ್ (Credit Card) ಬಳಸಿ ಹಣ ಪಡೆಯಬಹುದು. ಇದು ಕೊನೆಯ ದಾಗಿ ಬಳಸಿ ಏಕೆಂದರೆ ಕ್ರೆಡಿಟ್ ಕಾರ್ಡ್ ಮೂಲಕ ಏಟಿಎಂ ನಿಂದ ಹಣ ಪಡೆದರೆ (ATM withdrawal), ಮೊದಲ ದಿನದಿಂದಲೇ 36-48 ಶೇಕಡಾ ದಷ್ಟು ಬಡ್ಡಿ ವರ್ಷಕ್ಕೆ ಕಟ್ಟಬೇಕಾಗುತ್ತದೆ.