Online Games: ರೈತನ ಮಗ ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದು ತಂದೆಯ 95 ಲಕ್ಷವನ್ನೇ ನುಂಗಿ ನೀರು ಕುಡಿದ ಚಿಂತಾಜನಕ ಕಥೆ.

ಒಬ್ಬ ಬಡ ರೈತ ತನ್ನ ಹನ್ನೊಂದು ಎಕರೆ ಖರಾಬ್ ಜಮೀನಿಂದ ಯಾವುದೇ ಲಾಭ ಇಲ್ಲದೇ ಒಂದು ಸಣ್ಣ ಗುಡಿಸಲಲ್ಲಿ ಜೀವನ ನಡೆಸುತ್ತಿದ್ದ. ಹೆಂಡತಿ ಹಾಗು ಒಬ್ಬ ಮಗ. ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಒಂದು‌‌ ದಿನ ಅದೃಷ್ಟ ಎಂಬಂತೆ‌ ಸರಕಾರ ಭೂಸ್ವಾದೀನ ಕಾಯ್ದೆ‌ ಅಡಿಯಲ್ಲಿ ಇವರ ಜಮೀನನ್ನು ರಸ್ತೆ ಅಭಿವೃದ್ಧಿ ಗೆ ಪಡೆದುಕೊಂಡಿತು. ಇದಕ್ಕೆ ಇವರಿಗೆ ಸಿಕ್ಕಿದ್ದು ೯೫ ಲಕ್ಷ ರೂಪಾಯಿಗಳು.

ರೈತ ಮತ್ತು ಆತನ ಹೆಂಡತಿ ಅನಕ್ಷರಸ್ತರಾಗಿರುವುದರಿಂದ ಹೆಂಡತಿ‌ ಬ್ಯಾಂಕ್ ಖಾತೆಯಲ್ಲಿ ಹಣ ಇರುತ್ತದೆ. ಇರುವ ಹಣ ಹೇಗೆ ಬಳಸಿಕೊಳ್ಳಬೇಕೆಂದು ಕೂಡಾ ಗೊತ್ತಿರದ ಮುಗ್ದರು. ಇವರ ಮಗ ಆನ್‌ಲೈನ್ ಗೇಮ್ (Online Game) ಗೆ ದಾಸನಾಗಿದ್ದ. ತನ್ನ ತಂದೆ ತಾಯಿಗೆ ಏನೇನೋ ಹೇಳಿ ಅಮ್ಮನ ಬಳಿ ಇದ್ದ ಹಣವನ್ನು ತನ್ನ ಖಾತೆಗೆ ಹಾಕಿಕೊಂಡ. ಸದಾ ಮೊಬೈಲಲ್ಲಿ ಮುಳುಗಿದ್ದ ಮಗ ಈ ಹಣ ಖಾಲಿ ಮಾಡಲು ತೆಗೆದುಕೊಂಡಿದ್ದು ಬರೀ ೩ ತಿಂಗಳು ಅಷ್ಟೇ.

ಇದಾದ ನಂತರ‌ ಆ ಊರಿನ ಮುಖಂಡರು ಒಬ್ಬರು ರಾಮರೆಡ್ಡಿ ಬಳಿ ಬಂದು ಮಗ ತನ್ನ ಬಳಿ ಹತ್ತು ಲಕ್ಷ ಸಾಲ ಪಡೆದಿರುವ ಬಗ್ಗೆ ಹೇಳಿದರು. ಈಗಾಗಲೇ ೯೫ ಲಕ್ಷ ಇರುವಾಗ ಮತ್ತೆ ಪುನಃ ಯಾಕೆ ೧೦ ಲಕ್ಷ ಸಾಲ ಮಾಡಿದ್ದಾನೆ ಎಂದು ಮನೆಯೊಳಗೆ ಮೊಬೈಲ್ ನಲ್ಲಿ ಬಿದ್ದಿರುವ ಮಗನ ಬಳಿ ವಿಚಾರಣೆ ನಡೆಸಿದ್ದಾರೆ. ಆಗ ಎಲ್ಲಾ ಸತ್ಯ ಕೂಡಾ ಹೊರಬಿದ್ದಿದೆ. ಪ್ರತಿದಿನ ೨-೩ ಲಕದಷ ಹಣ ಆನ್‌ಲೈನ್ ಗೇಮ್ ನಲ್ಲಿ ಸೋತು ಎಲ್ಲಾ ೯೫ ಲಕ್ಷ ನುಂಗಿ‌ನೀರು ಕುಡಿದ್ದಿದ್ದು ಅಲ್ಲದೇ, ಈ ಗೇಮ್ ನ ಹುಚ್ಚಿಂದ ೧೦ ಲಕ್ಷ ಸಾಲ ಮಾಡಿ ಅದು ಕೂಡಾ ಕಳೆದುಕೊಂಡ.

ಇದೀಗ ಈ ಹಿರಿಯ ದಂಪತಿಗಳು ವಯಸ್ಸಾಗಿದ್ದು, ದುಡಿದು ತಿನ್ನಲು ಸಾಧ್ಯವಿಲ್ಲ. ಬಂದ ೮೫ ಲಕ್ಷವನ್ನು ಮಗ ತನ್ನ ಆನ್‌ಲೂನ್ ಗೇಮ್ ಚಟದಿಂದ ಕಳೆದುಕೊಂಡಿದ್ದಾನೆ. ಇದನ್ನು ವಾಪಸ್ಸು ಕೊಡಿಸುವಂತೆ ಈ ರೈತ ಸರಕಾರದ ಬಳಿ ಬೇಡಿಕೆ ಇಟ್ಟಿದ್ದಾನೆ. ಇನ್ನು ಇಂತದ್ದಕ್ಕೆಲ್ಲಾ ಅನುಮತಿ‌ ನೀಡಿದ ಸರಕಾರ, ರಾಜಕಾರಣಿಗಳು ಹಾಗು ಇದನ್ನು ಬೆಂಬಲಿಸಿ ಜಾಹೀರಾತು ನೀಡಿ‌ ಜನರನ್ನು ಈ ಜಾಲಕ್ಕೆ ಬೀಳಿಸುವ ಸಿನೆಮಾ ನಟರು ಇದನ್ನೆಲ್ಲಾ‌ ನೋಡುವುದಿಲ್ಲ. ನಿಮ್ಮ ಕಷ್ಟದ ಹಣ ಇಂತದ್ದಕೆಲ್ಲಾ ಬಳಸದೇ ಸರಿಯಾದ ರೀತಿಯಲ್ಲಿ ಉಪಯೋಗಿಸುವ ಜವಬ್ದಾರಿ ನಿಮ್ಮಲ್ಲಿದೆ.

Comments (0)
Add Comment