Pathan: ಮೊದಲ ದಿನವೇ 55 ಕೋಟಿ ಗಳಿಕೆ ಮಾಡಿದ ಶಾರುಖ್ ಖಾನ್ ರ ಪಠಾಣ್ ಸಿನೆಮಾ. ಅಸಲಿಗೆ ಇದು ಸತ್ಯನೋ ಸುಳ್ಳೋ?

ಶಾರುಖ್ ಖಾನ್ ಭಾರತೀಯ ಸಿನೆಮಾ ರಂಗದಲ್ಲಿ ಒಂದು ಕಾಲದಲ್ಲಿ ಮಿಂಚಿದ ನಟ. ಅದಾದ ನಂತರ ೨೦೧೪ ರ ನಂತರ ಏನೇನೋ ಕಾಂಟ್ರೊವರ್ಸಿ ಗೆ ಸುದ್ದಿಯಾಗಿ ಮಾಡಿದ ಸಿನೆಮಾಗಳೆಲ್ಲ ಮಕಾಡೆ ಮಲಗಿದವು. ಹಾಗೇನೇ ಬರೋಬ್ಬರಿ ನಾಲ್ಕು ವರ್ಷದ ನಂತರ ಇದೀಗ ಪಠಾಣ್ ಎನ್ನುವ ಸಿನೆಮಾ ಮೂಲಕ ಮತ್ತೊಮ್ಮೆ ಬೆಳ್ಳಿ ಪರದೆಗೆ ಬಂದಿದ್ದಾರೆ. ಆದರೆ ಈ ಸಿನೆಮಾ ಬಿಡುಗಡೆಗೂ ಬಹಿಷ್ಕಾರ ಕೇಳಿ ಬಂದಿದ್ದವು.

ಬಹಿಷ್ಕಾರ ಕೇಳಿದ ಬೆನ್ನಲ್ಲೇ ಸಿನೆಮಾಗೆ ಒಂದು ಪ್ರಮೋಷನ್ ಸಿಕ್ಕಿತು ಎಂದು ಹೇಳುತ್ತಾ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಎಂದು ಖಾನ್ ಹೇಳಿಕೊಂಡಿದ್ದಾರೆ. ನಿನ್ನೆ ಅಂದರೆ ಜನವರಿ ೨೫, ೨೦೨೩ ಕ್ಕೆ ಬಿಡುಗಡೆ ಹೊಂದಿದೆ ಪಠಾಣ್. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಶುರುವಾಗಿದೆ. ಹಾಗೇನೇ ಅನೇಕರು ಸಿನೆಮಾ ಒಳ್ಳೆದಿದೆ ಎಂದರೆ ಇನ್ನು ಕೆಲವರು ಚೆನ್ನಾಗಿಲ್ಲ ಎನ್ನುವ ವಿಮರ್ಶೆ ನೀಡಿದ್ದಾರೆ. ಹಾಗೇನೇ ಇನ್ನು ಮಾಧ್ಯಮ ಸುದ್ದಿ ನೋಡುವುದಾದರೆ ಪಠಾಣ್ ಮೊದಲ ದಿನವೇ ಬೊಂಬಾಟ್ ಕಲೆಕ್ಷನ್ ಮಾಡಿದೆ.

ಇಂಡಿಯಾ ಟುಡೇ ವರದಿ ಪ್ರಕಾರ ಪಠಾಣ್ ಮೊದಲ ದಿನ ಬರೋಬ್ಬರಿ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗೇನೇ ಡಬ್ ಆದ ಭಾಷೆಯಲ್ಲಿ ಸುಮಾರು 2 ಕೋಟಿ ಗಳಿಸಿ ಒಟ್ಟಾರೆ ಮೊದಲ ದಿನ 57 ಕೋಟಿ ಗಳಿಕೆ ಮಾಡಿದೆ. ಇದು ಇಲ್ಲಿವರೆಗಿನ ಉತ್ತಮ ಹಾಗು ರೆಕಾರ್ಡ್ ಓಪನಿಂಗ್ ಎಂದು ವರದಿ ಮಾಡಿದೆ. ಅಲ್ಲದೆ ಯಶ್ ರಾಜ್ ಬ್ಯಾನರ್ ನಲ್ಲಿ ಬಂದಿರುವ ಸಿನೆಮಾ ಮೊದಲ ದಿನವೇ ಯಶಸ್ಸು ಕಂಡಿದೆ ಎಂದು ಅಧಿಕೃತವಾಗಿ ಹೇಳಿಕೊಂಡಿದೆ. ಮುಂದೆ ಇನ್ನು ಉತ್ತಮ ಗಳಿಕೆ ನಿರೀಕ್ಷೆ ಮಾಡಲಾಗಿದೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.

ಇನ್ನು ಈ ಮೊದಲ ದಿನದ ಕಲೆಕ್ಷನ್ ಎಷ್ಟು ನಿಜ ಎಂದು ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅನೇಕರು ಬುಕ್ ಮೈ ಶೋ ಅಲ್ಲಿ, ಸೀಟ್ ಗಳು ಖಾಲಿ ಇದೆ ಎಂದು ಹೇಳಿಕೊಂಡಿದ್ದಾರೆ. ಹಾಗೇನೇ ಸಿನೆಮಾ ವೀಕ್ಷಿಸಲು ಹೋದ ಜನ ಕೂಡ ವಿಡಿಯೋ ಮಾಡಿ ಸಿನೆಮಾ ಹಾಲ್ ಖಾಲಿ ಇರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಅನೇಕರು ಸಿನೆಮಾ ತಂಡವೇ ಹಣ ಕೊಟ್ಟು ಟಿಕೆಟ್ ಖರೀದಿ ಮಾಡಿದೆ ಅಂತಾನೂ ಹೇಳಿಕೊಂಡಿದೆ. ಇನ್ನು ಮೊದಲ ದಿನವೇ ಸಿನೆಮಾ ಲೀಕ್ ಆಗಿದ್ದು, ಅನೇಕರು ಮೊಬೈಲ್ ಅಲ್ಲೇ ನೋಡಿದ್ದರೆ ಎಂದು ಹೇಳಿಕೊಂಡಿದ್ದಾರೆ.

deepika padukonepathanshah rukh khan
Comments (0)
Add Comment