RCB ಗೆ 5 ನೇ ಸೋಲು, ನಾಯಕ ಡುಪ್ಲೆಸಿ ಈ ಬಗ್ಗೆ ಹೇಳಿದ್ದೇನು?

RCB ಗೆ 5 ನೇ ಸೋಲು, ನಾಯಕ ಡುಪ್ಲೆಸಿ ಈ ಬಗ್ಗೆ ಹೇಳಿದ್ದೇನು?

RCB ಯಾ ಹೊಸ ನಾಯಕ ಫಾಫ್ ಡುಪ್ಲೆಸಿ ತಮ್ಮ ಏರಿಳಿತದ ಆಟದ ನಡುವೆಯೂ ತಂಡದ ಪೂರ್ವ ನಾಯಕ ವಿರಾಟ್ ಕೊಹ್ಲಿ ತಮ್ಮ ಫಾರಂ ಗೆ ಬರಬಹುದು ಎಂದು ಎಲ್ಲ ಅಭಿಮಾನಿಗಳು ಯೋಚಿಸುತ್ತಿದ್ದರು. ಅವರ ನಿರೀಕ್ಷೆ ನಿನ್ನೆಯ ಪಂದ್ಯದಲ್ಲಿ ಪೂರ್ತಿಗೊಂಡಿದೆ, ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಇಂದ ಆಕರ್ಷಕ ೫೮ ರನ್ ಗಳಿಸುವ ಮೂಲಕ ತಂಡ ೧೭೦ ರನ್ ಗಳಿಸುವಲ್ಲಿ ದೊಡ್ಡ ಸಹಾಯ ಮಾಡಿದ್ದಾರೆ. ಆದರೂ ಕೂಡ ಗುಜರಾತ್ ಟೈಟಾನ್ಸ್ ೬ ವಿಕೆಟ್ ಗೆಲ್ಲುವ ಮೂಲಕ RCB ೫ ನೇ ಸೋಲನ್ನು ಅನುಭವಿಸಿದೆ.

ಈ ಪಂದ್ಯದ ನಂತರ ಡುಪ್ಲೆಸಿ ೧೪ ಪಂದ್ಯದ ನಂತರ ವಿರಾಟ್ ಕೊಹ್ಲಿ ಅರ್ಧ ಶತಕ ದಾಖಲಿಸಿದಕ್ಕೆ ಸಂತಸ ಪಟ್ಟಿದ್ದಾರೆ. ಒತ್ತಡ ಇದ್ದರು ಕೂಡ ಗುಜರಾತ್ ನ ತೆವತಿಯ (೨೫ ಎಸೆತದಲ್ಲಿ ೪೩* ರನ್) ಹಾಗು ಮಿಲ್ಲರ್ (೨೪ ಎಸೆತಗಳಲ್ಲಿ ೩೯ ರನ್) ೫ ನೇ ವಿಕೆಟ್ ಗೆ ೭೯ ರನ್ ಗಳ ಉತ್ತಮ ಜೊತೆಯಾಟ ಮೂಲಕ ತಂಡ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಕೊಹ್ಲಿ ಬಗ್ಗೆ ಮಾತಾಡುತ್ತ ಡುಪ್ಲೆಸಿ ಕೊಹ್ಲಿ ಮುಂದೆ ಉಳಿದಿರುವ ೪ ಪಂದ್ಯಗಳಲ್ಲಿ ೭೦ ಕ್ಕೂ ಅಧಿಕ ರನ್ ಗಳಿಸಲಿ ಎಂದು ಆಶಿಸಿದ್ದಾರೆ. ಈ ಪಂದ್ಯದಲ್ಲಿ ಗಳಿಸಿದ ಅರ್ಧಶತಕ ದಿಂದ ಕೊಹ್ಲಿ ತಮ್ಮ ಸರಿಯಾದ ದಿಕ್ಕಿನಲ್ಲಿ ಕಾಲಿಟ್ಟಿದ್ದಾರೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.

ನಾವು ೧೭೫-೧೮೦ ರನ್ ಗಳಿಸಬೇಕೆಂದು ಯೋಜನೆ ಹಾಕಿದ್ದೆವು. ಅದರಂತೆ ನಾವು ರನ್ ಕಲೆ ಹಾಕಿದೆವು. ನಮ್ಮ ಬೌಲರ್ ಗಳು ಮಾಧ್ಯಮ ಓವರ್ ಗಳಲ್ಲಿ ಉತ್ತಮ ಬೌಲಿಂಗ್ ಮಾಡಿ ಗುಜರಾತ್ ಬ್ಯಾಟ್ಸಮನ್ ಗಳನ್ನೂ ರನ್ ಮಾಡದಂತೆ ತಡೆದರು. ನಾವು ಉತ್ತಮ ಬೌಲಿಂಗ್ ಮಾಡಿದ್ದೇವೆ ಆದರೆ ಗುಜರಾತ್ ಎಂದಿನಂತೆ ಯಾವುದೇ ಒತ್ತಡ ಪರಿಸ್ಥಿತಿ ಇದ್ದರು ಕೂಡ ಆ ಸಮಯಕ್ಕೆ ತಕ್ಕಂತೆ ಆಡಿ ಪಂದ್ಯ ಗೆದ್ದುಕೊಂಡರು ಎಂದಿದ್ದಾರೆ ಡುಪ್ಲೆಸಿ. ಪಂದ್ಯಶ್ರೇಷ್ಠ ರಾದ ತೆವತಿಯ ಈ ಪಿಚ್ ಬ್ಯಾಟಿಂಗ್ ಗೆ ಸೂಕ್ತವಾಗಿರಲಿಲ್ಲ ಅದೇ ಕಾರಣಕ್ಕೆ ನಾನು ಮತ್ತು ಮಿಲ್ಲರ್ ಅಂತಿಮ ಓವರ್ ಗಳ ವರೆಗೆ ಬ್ಯಾಟಿಂಗ್ ಮಾಡಿದೆವು ಎಂದು ಹೇಳಿದ್ದಾರೆ. ಮುಂದಿನ ಪಂದ್ಯದಲ್ಲಿ RCB ಉಳಿದಿರುವ ಎಲ್ಲ ಪಂದ್ಯಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದೆ.

Comments (0)
Add Comment