RCB ಸ್ಟಾರ್ ಬೌಲರ್ ಹರ್ಷಲ್ ಪಟೇಲ್ ಹಿಂದೆ ತನಗೆ ಫ್ರಾಂಚೈಸಿಗಳು ಮಾಡಿದ ಮೋಸವನ್ನು ಇಂದು ತೆರೆದಿಟ್ಟಿದ್ದಾರೆ. ಮಾತು ನೀಡಿ ಕೈಕೊಟ್ಟ ಫ್ರಾಂಚೈಸ್.

ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ದೇಶದಲ್ಲೇ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಎಂದರೆ ತಪ್ಪಾಗಲಾರದು. ಅದು ಇಲ್ಲಿ ತನಕ ಒಂದೇ ಒಂದು IPL ಕೂಪ್ ಗೆಲ್ಲಲು ಸಾಧ್ಯವಾಗಲಿಲ್ಲ ಆದರೂ ಕೂಡ ಅಭಿಮಾನಿಗಳು ಇಂದಿಗೂ RCB ಕೈ ಬಿಡಲಿಲ್ಲ, ಬೆಂಬಲ ಕೂಡ ಬಿಟ್ಟಿಲ್ಲ. RCB ಬ್ಯಾಟಿಂಗ್ ಅಲ್ಲಿ ಮೊದಲಿಂದಲೂ ಕೂಡ ಬಲಿಷ್ಠ ತಂಡವಾಗಿದೆ ಆದರೆ ಬೌಲಿಂಗ್ ವಿಭಾಗ ತುಂಬಾನೇ ವೀಕ್ ಆಗಿತ್ತು. ಇದೆ ಕಾರಣಕ್ಕೆ ಎಷ್ಟು ದೊಡ್ಡ ರನ್ ಪೇರಿಸಿದರು ಮ್ಯಾಚ್ ಗೆಲ್ಲಲು ಸಾಧ್ಯವಾಗಲಿಲ್ಲ.

ಈ ಬೌಲಿಂಗ್ ಕೊರತೆಯನ್ನು ನೀಗಿಸಿದ್ದು ಹರ್ಷಲ್ ಪಟೇಲ್. ಕಳೆದ ಆವೃತ್ತಿಯಲ್ಲಿ RCB ಗೆ ಬಂದ ಹರ್ಷಲ್ ಪಟೇಲ್ ಉತ್ತಮವಾಗಿ ಬೌಲಿಂಗ್ ಮಾಡಿ ಅನೇಕ RCB ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ ಇವರ ರನ್ ಎಕಾನಮಿ ಕೂಡ ಕಡಿಮೆ, ವಿಕೆಟ್ ಗಳಿಕೆ ಕೂಡ ಹೆಚ್ಚಿತ್ತು. ಪರ್ಪಲ್ ಕ್ಯಾಪ್ ಕೂಡ ಪಡೆದಿದ್ದರು. ಕಳೆದ ಅವರುತ್ತಿಯಲ್ಲಿ ಬರೋಬ್ಬರಿ ೩೧ ವಿಕೆಟ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದರು. ಹಾಗೇನೇ RCB ತಂಡಕ್ಕೆ ಭರವಸೆಯ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ.

ಹರ್ಷಲ್ ಪಟೇಲ್ ಉತ್ತಮವಾಗಿ ಆಡುತ್ತಾರೆ ಎನ್ನುವುದು ನಮಗೆ ಗೊತ್ತಾಗಿದ್ದು RCB ಕಳೆದ ವರ್ಷ ಖರೀದಿ ಮಾಡಿದ ನಂತರ. ಅದಕ್ಕಿಂತ ಮೊದಲು ಹರ್ಷಲ್ ಪಟೇಲ್ ಯಾರೆಂಬುದೇ ಗೊತ್ತಿರಲಿಲ್ಲ. ಒಂದು ಯೌಟ್ಯೂಬ್ ಚಾನೆಲ್ ಅಲ್ಲಿ ಸಂದರ್ಶನದಲ್ಲಿ ಮಾತಾಡುತ್ತ ಹರ್ಷಲ್ ಪಟೇಲ್ ಅವರು ತನಗಾದ ಮೋಸದ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ. ೨೦೧೮ ರಲ್ಲಿ ಅನೇಕ ತಂಡಗಳು ಹರ್ಷಲ್ ಪಟೇಲ್ ಅವರನ್ನು ಖರೀದಿ ಮಾಡುವ ಬಗ್ಗೆ ಭರವಸೆ ನೀಡಿದ್ದರಂತೆ ಆದರೆ ಹರಾಜಿನ ಪ್ರಕ್ರಿಯೆಯಲ್ಲಿ ಯಾವುದೇ ತಂಡವು ಕೂಡ ಇವರನ್ನು ಖರೀದಿ ಮಾಡಲಿಲ್ಲ.

ಕೊನೆಗೆ ತನ್ನ ಮೂಲ ಬೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡ ೨೦ ಲಕ್ಷ ಕೊಟ್ಟು ಖರೀದಿ ಮಾಡಿತ್ತು. ಇದು ಹರ್ಷಲ್ ಪಟೇಲ್ ಮೋಸ ಹೋದೆ ಎನ್ನುವ ಭಾವನೆ ಬರುವಂತೆ ಮಾಡಿದೆ. ಇದರ ಬಗ್ಗೆ ಜಾಸ್ತಿ ಏನು ಹೇಳದಿದ್ದರೂ ಕೂಡ ಪರೋಕ್ಷವಾಗಿ ತಮಗಾದ ಮೋಸವನ್ನು ಹೇಳಿಕೊಂಡಿದ್ದಾರೆ. ಇನ್ನು ಈ ಬಾರಿ ಕೂಡ RCB ಪರ ಆಡುತ್ತಿದ್ದಾರೆ ಹರ್ಷಲ್ ಪಟೇಲ್. ಆದರೆ ಈ ಆವೃತ್ತಿಯ ನಡುವೆ ತನ್ನ ಅಕ್ಕ ತೀರಿಕೊಂಡ ವಿಷಯದಿಂದ ಅರ್ಧಕ್ಕೆ ತಂಡ ಬಿಟ್ಟು ಹೋಗಲೇ ಬೇಕಾಯಿತು. ಆದರೂ ಅಕ್ಕನ ಆಸೆಯಂತೆ ಇನೊಮ್ಮೆ ಕ್ರಿಕೆಟ್ ಆಡಲು ತಂಡಕ್ಕೆ ಸೇರಿಕೊಂಡಿದ್ದಾರೆ.

Comments (0)
Add Comment