Cricket News: ಈ ಮೂರೂ ಆಟಗಾರರನ್ನು ಟಿ-20 ತಂಡಕ್ಕೆ ಸೇರಿಸದೆ ಕೇವಲ ಏಕದಿನ ತಂಡಕ್ಕೆ ಮಾತ್ರ ಸೀಮಿತ ಇಟ್ಟರೆ ಉತ್ತಮ.

ಸೀಮಿತ ಓವರ್ ಪಂದ್ಯಗಳಾದ ಏಕದಿನ ಹಾಗು ಟಿ-೨೦ ತಂಡಕ್ಕೆ ಭಾರತದ ತಂಡದಲ್ಲಿ ಆಟಗಾರರನ್ನು ಎರಡಕ್ಕೂ ಮಿಕ್ಸ್ ಮಾಡುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಟಿ-೨೦ ಹಾಗು ಏಕದಿನಕ್ಕೆ ಎರಡರಲ್ಲಿಯೂ ಮುಖಗಳು ಸೇಮ್ ಇರುತ್ತದೆ. ಇದರಿಂದ ಆಟಗಾರರು ಏಕದಿನ ಹಾಗು ಟಿ-೨೦ ಎರಡಕ್ಕೂ ಒಗ್ಗಿಕೊಳ್ಳಲು ಸಮಯ ಬೇಕಾಗುತ್ತದೆ. ಇದರಿಂದ ತಂಡದ ಆಟದಲ್ಲಿ ಪರಿಣಾಮ ಬೀಳುತ್ತದೆ. ಮುಂದಿನ ವರ್ಷ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿರುವುದರಿಂದ ಈಗಿಂದಲೇ ತಯಾರಿ ನಡೆಸಿದರೆ ಉತ್ತಮ ಎನ್ನುವುದು ನಮ್ಮ ಅಭಿಪ್ರಾಯ.

೧. ಶ್ರೇಯಸ್ ಅಯ್ಯರ್ (Shreyas Iyer): ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಕೇವಲ ಏಕದಿನಕ್ಕೆ ಮಾತ್ರ ಸೀಮಿತಗೊಳಿಸಬೇಕು ಎನ್ನುವ ಆಟಗಾರರಲ್ಲಿ ಮೊದಲಿಗೆ ಬರುವ ಹೆಸರು ಶ್ರೇಯಸ್ ಅಯ್ಯರ್. ಇವರು ಟಿ-೨೦ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಹೊಂದಿದ್ದರು ಕೂಡ ಇವರ ಕುಶಲತೆಗೆ ಏಕದಿನ ಪಂದ್ಯಗಳು ಸರಿ ಹೊಂದುತ್ತದೆ. ಸ್ಪಿನ್ ಬೌಲರ್ ಎದುರು ಇವರು ಉತ್ತಮವಾಗಿ ಆಡುತ್ತಾರೆ. ಇದರಿಂದ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಗೆ ಇವರು ಹೆಚ್ಚು ಸಹಾಯವಾಗಬಲ್ಲರು. ಇವರು 3 ನೇ ಸ್ಥಾನದಲ್ಲಿ ಉತ್ತಮ ಆಡುವದರಿಂದ ಟಿ-೨೦ ಅಲ್ಲಿ ಈಗಾಗಲೇ ಸೂರ್ಯ ಕುಮಾರ್ ಯಾದವ್ (SuryaKumar Yadav) ಸ್ಥಾನ ಭದ್ರ ಪಡಿಸಿಕೊಂಡಿದ್ದಾರೆ.

೨. ಮೊಹಮ್ಮದ್ ಶಮ್ಮಿ (Mohammed Shammi): 2022 ರ ಟಿ-೨೦ ವಿಶ್ವಕಪ್ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಅವರು ಗಾಯ ಗೊಳ್ಳದೆ ಇರುತ್ತಿದ್ದರೆ ಶಮ್ಮಿ ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಿರಲಿಲ್ಲ. ಇವರು ಹೆಚ್ಚು ಟಿ-೨೦ ಪಂದ್ಯಗಳನ್ನು ಆಡದಿದ್ದರು ಕೂಡ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಅಲ್ಲಿ ಉತ್ತಮವಾಗಿ ಆಡಿದ್ದಾರೆ. ಇನ್ನು ಹೇಳಬೇಕೆಂದರೆ ಶಮ್ಮಿ ಏಕದಿನ ಪಂದ್ಯದಲ್ಲಿ ಸಾಕಷ್ಟು ಪಂದ್ಯ ಆಡಿದ್ದಾರೆ. ಹಾಗೇನೇ ಇವರು ಈ ಫಾರ್ಮ್ಯಾಟ್ ಅಲ್ಲಿ ಹೊಂದಿಕೊಂಡಿದ್ದಾರೆ. ಹಾಗಾಗಿ ಇವರನ್ನು ಏಕದಿನ ತಂಡದಲ್ಲಿ ಮಾತ್ರ ಆಡಿಸಬೇಕು.

೩. ಶುಭಮನ್ ಗಿಲ್ (Shubman Gill): ಶುಭಮನ್ ಗಿಲ್ ಐಪಿಎಲ್ ಅಲ್ಲಿ ಉತ್ತಮ ಆಡಿದ್ದರು ಕೂಡ ಇವರು ಆರಂಭಿಕರಾದ ಪ್ರಿತ್ವಿ ಶಾಹ್ ರಂತಹ ಆಟಗಾರರಷ್ಟು ಉತ್ತಮವಾಗಿ ಇಲ್ಲ. ಹಾಗಾಗಿ ಇವರು ಏಕದಿನ ಪಂದ್ಯಗಳಿಗೆ ಹೇಳಿ ಮಾಡಿಸಿದ ಆಟಗಾರ. ಇದಕ್ಕೆ ಪೂರಕ ಎನ್ನುವಂತೆ ನ್ಯೂಜಿಲ್ಯಾಂಡ್ ಪಂದ್ಯದಲ್ಲಿ ಉತ್ತಮ ಆರಂಭಿಕ ಆಟ ಆಡಿದ್ದಾರೆ. ಇವರು ಸದ್ಯಕ್ಕೆ ಆರಂಭಿಕ ಆಟಗಾರರ ಸ್ಥಾನಕ್ಕೆ ಉತ್ತಮ ಬ್ಯಾಕ್ ಅಪ್ ಆಟಗಾರನ್ನಾಗಿ ಬಿಸಿಸಿಐ ನೇಮಕ ಮಾಡಿದರೆ ಉತ್ತಮ.

mohammed shammishreyas iyershubman gillsuryakunar yadav
Comments (0)
Add Comment