SBI ಏಟಿಎಂ ಕಾರ್ಡ್ ಅಲ್ಲಿ ಇಷ್ಟೊಂದು ಚಾರ್ಜಸ್ ಇದೆಯಾ? ನಿಮ್ಮ ಅಕೌಂಟ್ ಇಂದ ಹಣ ಮಾಯವಾಗೋದು ಗೊತ್ತೇ ಆಗಲ್ಲ.
ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾ ಏಟಿಎಂ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅಂತ ಏನು ಹೇಳುತ್ತೇವೆ ಅತ್ಯಧಿಕ ಭಾರತೀಯರು ಬಳಸುತ್ತಾರೆ. ಸರಕಾರದ ಒಡೆತನದಲ್ಲಿರುವ ಬ್ಯಾಂಕ್ ಗಳಲ್ಲಿ ಅತಿ ದೊಡ್ಡ ಬ್ಯಾಂಕ್ ಅಂತ ಹೇಳುವುದು ಇದೆ ಕಾರಣಕ್ಕೆ. ಆದರೆ ಈ ಡೆಬಿಟ್ ಕಾರ್ಡ್ ಮೇಲೆ ಬ್ಯಾಂಕ್ ಹಾಕುವ ಶುಲ್ಕ ಅಥವಾ charges ಬಗ್ಗೆ ಅನೇಕರಿಗೆ ಗೊತ್ತೇ ಇರಲ್ಲ. ಬ್ಯಾಂಕ್ ಅಕೌಂಟ್ ತೆರೆಯುವಾಗ ಈ ಏಟಿಎಂ ಕಾರ್ಡ್ ಕೂಡ ಉಚಿತವಾಗಿ ಸಿಗುತ್ತದೆ ಎಂದು ಅನೇಕರು ಭಾವಿಸಿರುತ್ತಾರೆ. ಆದರೆ ಇದು ನಿಜವಲ್ಲ, SBI ATM ಕಾರ್ಡ್ ಗಳಲ್ಲಿ ವಿಧಿಸಲಾಗುವ ಶುಲ್ಕಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ.
1. ಡೆಬಿಟ್ ಕಾರ್ಡ್ ಕೊಡುವುದಕ್ಕೆ ಹಾಕುವ ಶುಲ್ಕ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್ಸೈಟ್ ಪ್ರಕಾರ ಏಟಿಎಂ ಕಾರ್ಡ್ ನೀಡಲು ಮೂರೂ ತರಹದ ಶುಲ್ಕಗಳನ್ನ ಬ್ಯಾಂಕ್ ವಿಧಿಸುತ್ತದೆ. classic/silver/global ಹಾಗೇನೇ ಕಾಂಟಾಕ್ಟ್ ಲೆಸ್ ಡೆಬಿಟ್ ಕಾರ್ಡ್. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಇನ್ನು ಗೋಲ್ಡ್ ಡೆಬಿಟ್ ಕಾರ್ಡ್ ಗೆ 100 ರೂಪಾಯಿ ಶುಲ್ಕ ಹಾಗು ಅದರ ಮೇಲೆ ಜಿಎಸಟಿ ತೆರಿಗೆ. ಇನ್ನು ಪ್ಲಾಟಿನಂ ಏಟಿಎಂ ಕಾರ್ಡ್ ಮೇಲೆ 300 ರೂಪಾಯಿ ಶುಲ್ಕ ಹಾಗು ಅದರ ಮೇಲೆ ಜಿಎಸ್ ಟಿ ತೆರಿಗೆ ಹಾಕಲಾಗುತ್ತದೆ.
2. ಏಟಿಎಂ ಕಾರ್ಡ್ ಮೇಲೆ ವಾರ್ಷಿಕ ಶುಲ್ಕ.
ಎಲ್ಲ ಏಟಿಎಂ ಕಾರ್ಡ್ ಮೇಲು ವಾರ್ಷಿಕ ಶುಲ್ಕ ಇದ್ದೆ ಇರುತ್ತದೆ. ಇದನ್ನು ಬ್ಯಾಂಕ್ ಗಳು ಅನುಯಲ್ ಮೈಂಟೆನನ್ಸ್ ಚಾರ್ಜಸ್ ಅಥವಾ ವಾರ್ಷಿಕ ನಿರ್ವಹಣೆ ಶುಲ್ಕ ಎಂದು ಕರೆಯುತ್ತಾರೆ. ಖಾತೆ ತೆರೆದ ಎರಡನೇ ವರ್ಷದಿಂದ ಪ್ರತಿಯೊಬ್ಬರಿಗೂ ಈ ಚಾರ್ಜಸ್ ಬೀಳಲು ಶುರುವಾಗುತ್ತದೆ. ಕಾರ್ಡ್ ಗಳಲ್ಲಿ ಮೇಲೆ ಹೇಳಿದ ಹಾಗೆ ವಿವಿಧ ಬಗೆ ಇದೆ. ಈ ವಿವಿಧ ಬಗೆಯ ಕಾರ್ಡ್ ಗಳಿಗೆ ವಿವಿಧ ರೀತಿಯ ಚಾರ್ಜಸ್ ಗಳು ಅನ್ವಯವಾಗುತ್ತದೆ.
ಕ್ಲಾಸಿಕ್/ಸಿಲ್ವರ್/ಗ್ಲೋಬಲ್ ಕಾಂಟ್ಯಾಕ್ಟ್‌ಲೆಸ್ ಡೆಬಿಟ್ ಕಾರ್ಡ್- ರೂ 200+GST
ಯುವ/ಗೋಲ್ಡ್/ಕಾಂಬೋ/ಮೈ ಕಾರ್ಡ್ ಡೆಬಿಟ್ ಕಾರ್ಡ್ ಮೇಲೆ – ರೂ 250 + GST
ಪ್ಲಾಟಿನಂ ಡೆಬಿಟ್ ಕಾರ್ಡ್ ಮೇಲೆ – ರೂ 325 + GST
ಪ್ಲಾಟಿನಂ ಬಿಸಿನೆಸ್ ರುಪೇ ಕಾರ್ಡ್ ಮೇಲೆ – ರೂ 350 + GST
ಪ್ರೈಡ್/ಪ್ರೀಮಿಯಂ ಬಿಸಿನೆಸ್ ಡೆಬಿಟ್ ಕಾರ್ಡ್ ಮೇಲೆ – ರೂ 425 + GST ಹಾಕಲಾಗುತ್ತದೆ.
3. ಡೆಬಿಟ್ ಕಾರ್ಡ್ ಬದಲಾತಿ ಶುಲ್ಕ. ಒಂದು ವೇಳೆ ನಿಮ್ಮ ಏಟಿಎಂ ಕಾರ್ಡ್ ಕಳೆದು ಹೋದರೆ ಅಥವಾ ಕಳ್ಳತನವಾದರೆ ಹೊಸ ಡೆಬಿಟ್ ಕಾರ್ಡ್ ನೀಡಲು ಶುಲ್ಕ ಹಾಕಲಾಗುತ್ತದೆ. ಈ ಶುಲ್ಕ 300 ರೂಪಾಯಿ + GST ಬ್ಯಾಂಕ್ ಗೆ ನೀವು ನೀಡಬೇಕಾಗುತ್ತದೆ.
4. ಅಂತಾರಾಷ್ಟ್ರೀಯ ವಹಿವಾಟು ಶುಲ್ಕ.
SBI ಬ್ಯಾಂಕ್ ವಿವಿಧ ಏಟಿಎಂ ಬಳಕೆ ಮೇಲೆ ಶುಲ್ಕಗಳನ್ನೂ ಹಾಕುತ್ತದೆ. ಉದಾಹರಣೆಗೆ ಏಟಿಎಂ ನಲ್ಲಿ ನಿಮ್ಮ ಖಾತೆಯಲ್ಲಿ ಹಣ ಎಷ್ಟಿದೆ ಅಂತ ತಿಳಿದುಕೊಳ್ಳಲು 25+ GST ನೀಡಬೇಕಾಗುತ್ತದೆ. ಅದೇ ರೀತಿ ನಗದು ಹಣ ಏಟಿಎಂ ಇಂದ ತೆಗೆಯಲು ಕನಿಷ್ಠ 100 ರೂಪಾಯಿ + GST ಶುಲ್ಕ ಇದರ ಜೊತೆಗೆ ಏಟಿಎಂ ಬಳಸಿದಕ್ಕಾಗಿ ವಹಿವಾಟಿನ ಮೇಲೆ 3.5% ಹೆಚ್ಚುವರಿ ಶುಲ್ಕ ಹಾಗು GST. ಇನ್ನು POS ಯಂತ್ರ ಬಳಕೆ ಮಾಡಿಕೊಂಡು ಅಂತಾರಾಷ್ಟ್ರೀಯ ವಹಿವಾಟು ಮಾಡಿಕೊಂಡರೆ ಅಥವಾ E – Commerce ಖರೀದಿ ಗೆ ಖರೀದಿ ಮೊತ್ತದ ಮೇಲೆ 3% ಶುಲ್ಕ ಹಾಗು GST.