Astrology: 17 ಜನವರಿ 2023 ಕ್ಕೆ ಶನಿ ಕುಂಭ ರಾಶಿ ಪ್ರವೇಶ. ಈ ಮೂರೂ ರಾಶಿಯವರಿಗೆ ಸಿಗಲಿದೆ ಅವರ ಕರ್ಮಫಲ.

ಕರ್ಮಫಲ ದಾತ ಶನಿ ಸಾಡೇಸಾತ್ ಮೂಲಕ ಎಲ್ಲ ರಾಶಿಗಳಿಗೂ ಪ್ರವೇಶ ಮಾಡುತ್ತಿರುತ್ತಾನೆ. ಅವರ ಕರ್ಮಗನುಗುಣವಾಗಿ ಎಲ್ಲರಿಗು ಒಳಿತು ಕೆಡಕುಗಳನ್ನು ಮಾಡುತ್ತಿರುತ್ತಾನೆ. ಇದೀಗ 17 ಜನವರಿ 2023 ಕ್ಕೆ ಶನಿ ಕುಂಭ ರಾಶಿ ಪ್ರವೇಶ ಮಾಡುತ್ತಿದ್ದಾನೆ. ಇದರಲ್ಲಿ ಕೆಲವರು ರಾಶಿ ಗಳಿಗೆ ಸ್ವಲ್ಪ ನಿಟ್ಟುಸಿರು ಆದರೆ ಇನ್ನು ಕೆಲವು ರಾಶಿಗಳಿಗೆ ಸಾಡೇಸಾತ್ ಆರಂಭವಾಗುತ್ತದೆ. ಅಂತಹ ರಾಶಿ ಗಳು ಯಾವುದು? ಇಲ್ಲಿದೆ ಅದರ ಮಾಹಿತಿ.

ಕುಂಭ ರಾಶಿ ಪ್ರವೇಶ ಮಾಡುವುದರಿಂದ ಧನು ರಾಶಿಯವರಿಗೆ ಸಾಡೇಸಾತ್ ಇಂದ ಮುಕ್ತಿ ಸಿಗಲಿದೆ. ಹಾಗೇನೇ ಮಕರ ಕುಂಭ ಹಾಗು ಮೀನಾ ರಾಶಿಯವರ ಮೇಲೆ ಸಾಡೇಸಾತ್ ಪರಿಣಾಮ ಬೀರಲಿದೆ. ಇದರಿಂದ ಕಟಕ ಮತ್ತು ವೃಶ್ಚಿಕ ರಾಶಿಯವರಿಗೂ ಇದರ ಪರಿಣಾಮ ಬೀರಲಿದೆ. ಒಟ್ಟು ಮೂರೂ ಹಂತ ಎಂದರೆ ೭.೫ ವರ್ಷ ಒಬ್ಬನಿಗೆ ಸಾಡೇಸಾತ್ ಇರಲಿದೆ.ಎರಡನೇ ಹಂತವು ಅತ್ಯಂತ ನೋವು, ದುರದೃಷ್ಟ ಹಾಗು ವೈಫಲ್ಯ ಮತ್ತು ಅನಾರೋಗ್ಯಗಳಿಂದ ಕೂಡಿರಲಿದೆ.

ಮೊದಲ ಹಂತ ಆರ್ಥಿಕವಾಗಿ ಸಮಸ್ಯೆ ನೀಡಿದರೆ, ಮೂರನೇ ಹಂತ ಆರೋಗ್ಯದ ಸಮಸ್ಯೆ ನೀಡುತ್ತದೆ. ಶನಿ ಸ್ತೋತ್ರ ಪಟನೆ ಮಾಡುವುದು, ಈ ಸಮಯದಲ್ಲಿ ಎಳ್ಳು, ಹಣ ಆಹಾರ ಧನ ಮಾಡುವುದು. ಹಾಗೇನೇ ಶನಿ ದೇವಾಲಯಕ್ಕೆ ಭೇಟಿ ಕೊಡುವುದರಿಂದ ಅಲ್ಪ ಮಟ್ಟದಲ್ಲಿ ಪ್ರಯೋಜನಕಾರಿಯಾಗಬಹುದು. ಹಾಗೇನೇ ಈ ಸಾಡೇಸಾತ್ ಸಮಯದಲ್ಲಿ ಹಿರಿಯರೊಂದಿಗೆ ಜಗಳ ಹಾಗು ಮನಸ್ತಾಪಗಳನ್ನು ಮಾಡಿಕೊಳ್ಳಲು ಹೋಗಬೇಡಿ. ಕಾನೂನು ವಿಷಯಗಳಿಂದ ಆದಷ್ಟು ದೂರವಿರಿ.

sadesathshani
Comments (0)
Add Comment