WPL: ಆರ್ ಸಿಬಿ ನಾಯಕಿ ಸ್ಮೃತಿ ಮಂದಾನಾ ಮಾಡಿದ ಒಂದು ತಪ್ಪಿಂದ ದೆಹಲಿ ತಂಡದ ವಿರುದ್ಧ 60 ರನ್ ಗಳಿಂದ ಸೋಲಬೇಕಾಯಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ ವಿರುದ್ದದ ಪಂದ್ಯದಲ್ಲಿ ದೆಹಲಿ ಬೆಂಗಳೂರು ವಿರುದ್ಧ ಭರ್ಜರಿ 60 ರನ್ ಗಳಿಂದ ಗೆದ್ದಿದೆ. ಬೆಂಗಳೂರು ನಾಯಕಿ ಸ್ಮೃತಿ ಮಂದಾನಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ದೆಹಲಿ ಮೊದಲು ಬ್ಯಾಟಿಂಗ್ ಮಾಡಿ ಬರೋಬ್ಬರಿ 223 ರನ್ ಗಳ ಗುರಿ ಬೆಂಗಳೂರಿಗೆ ನೀಡಿತ್ತು, ಇದಕ್ಕೆ ಪ್ರತಿಯಾಗಿ ಬೆಂಗಳೂರು ಕೇವಲ 163 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಒಪ್ಪಿಕೊಂಡಿದೆ.

ಸ್ಮೃತಿ ಮಂದಾನಾ ಅವರು ಟಾಸ್ ಗೆಲ್ಲುತ್ತಲೇ ಬ್ಯಾಟಿಂಗ್ ಬದಲು ಬೌಲಿಂಗ್ ಆಯ್ಕೆ ಮಾಡಿದ್ದೂ ಸ್ಮೃತಿ ಅವರ ಮೊದಲನೇ ತಪ್ಪು. ಅಲ್ಲೇ ತಂಡ ಸೋಲುವುದು ನಿಷ್ಚಿತವಾಗಿತ್ತು. ದೆಹಲಿ ಪರ ಮೆಗ್ ಲ್ಯಾಂನಿಂಗ್ ಹಾಗು ಶೆಫಾಲಿ ಮೊದಲ ವಿಕೆಟ್ ಗೆ 162 ರನ್ ಗಳ ಅತ್ಯುತ್ತಮ ಜೊತೆಯಾಟ ನೀಡಿದ್ದರು. ಶೆಫಾಲಿ 10 ಬೌಂಡರಿ ಹಾಗು 4 ಸಿಕ್ಸ್ ಸಿಡಿಸುವ ಮೂಲಕ 84 ರನ್ ಗಳನ್ನೂ ಗಳಿಸಿದರೆ, ನಾಯಕಿ ಮೆಗ್ 14 ಬೌಂಡರಿ ನೆರವಿನಿಂದ 72 ರನ್ ಗಳನ್ನೂ ಕಲೆ ಹಾಕಿದ್ದರು.

ಆರ್ ಸಿ ಬಿ ಪರ ಆರಂಭಿಕವಾಗಿ ಸ್ಮೃತಿ ಮಂದಾನಾ ಹಾಗು ಸೋಫಿ ಡಿವೈನ್ ಉತ್ತಮವಾಗಿ ಆಡಿದರು ಕೂಡ ಇವರ ಪೆವಿಲಿಯನ್ ಹೋಗುತ್ತಲೇ ಎಲ್ಲ ವಿಕೆಟ್ ಗಳು ಉದುರುತ್ತ ಹೋಯಿತು. ದೆಹಲಿ ಪರ ತಾರಾ ನಾರ್ರಿಸ್ ಅದ್ಬುತ ಬೌಲಿಂಗ್ ಮಾಡುವ ಮೂಲಕ 5 ವಿಕೆಟ್ ಪಡೆದರು. ಇದರ ಮೂಲಕ ಬೆಂಗಳೂರು 163 ರನ್ ಗೆ ತನ್ನ ಹೋರಾಟ ನಿಲ್ಲಿಸಿ 60 ರನ್ ಗಳ ಸೋಲನ್ನು ಒಪ್ಪಿಕೊಂಡಿದೆ. ಹಾಗೇನೇ ಮಂದಾನಾ ಬ್ಯಾಟಿಂಗ್ ಪಿಚ್ ಅಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ಬದಲು ಬೌಲಿಂಗ್ ಆಯ್ಕೆ ಮಾಡಿದ್ದೂ ಸೋಲಿಗೆ ಬಹು ಮುಖ್ಯ ಕಾರಣ ಎನ್ನಲಾಗುತ್ತಿದೆ.

bengalurudelhi capitalIPLRCBwpl
Comments (0)
Add Comment