Chandana News

Kannada Trending News

Chandana News

Kannada Trending News

Business

Credit Card Limit : ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಬ್ಯಾಂಕ್ ಕಡಿಮೆ ಮಾಡಿದೆಯಾ ಕೂಡಲೇ ಈ ಕೆಲಸ ಮಾಡಿ.

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ (Credit Card) ಎಲ್ಲರ ಬಳಿ ಇದ್ದೆ ಇರುತ್ತದೆ. ಕೆಲವರ ಬಳಿ ಒಂದು ಅಲ್ಲದೆ ಮೂರೂ ನಾಲ್ಕು ಕಾರ್ಡ್ ಕೂಡ ಇರುತ್ತದೆ. ಒಬ್ಬೊಬ್ಬರ ಕಾರ್ಡ್ ಮಿತಿ ಅಂದರೆ ಕ್ರೆಡಿಟ್ ಲಿಮಿಟ್ ಬೇರೆ ಬೇರೆ ಇರುತ್ತದೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಜನರು ಖರೀದಿ ಹಾಗು ಇನ್ನಿತರ ವಿಷಯಗಳಿಗೆ ಕಾರ್ಡ್ ಅನ್ನು ಬಳಸುತ್ತಾರೆ. ಆದಾಗ್ಯೂ ಕೆಲವೊಮ್ಮೆ ಬ್ಯಾಂಕ್ ಗಳು ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು (Credit card limit) ಕಡಿಮೆ ಮಾಡುತ್ತದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಮೇಲ್ ಗೆ ಮೆಸೇಜ್ ಬರುತ್ತದೆ ಇದರ ಬಗ್ಗೆ. ಬ್ಯಾಂಕ್ ಏಕಾಏಕಿ ಹೀಗೆ ಮಾಡಿದ್ದೂ ಯಾಕೆ? ಇದರ ಬಗೆ ಕಾರಣ ತಿಳಿದರೆ ನಿಮಗೂ ಆಶ್ಚರ್ಯ ಆಗುತ್ತದೆ.

1. ಗ್ರಾಹಕರು ಕಾರ್ಡ್ ಮೊತ್ತ ಮರುಪಾವತಿ ಮಾಡುವಾಗ ವಿಳಂಬ ಮಾಡಿದರೆ ಮಾತ್ರ ಬ್ಯಾಂಕ್ ಕ್ರೆಡಿಟ್ ಲಿಮಿಟ್ ಕಡಿಮೆ ಮಾಡುತ್ತದೆ. ಬ್ಯಾಂಕ್ ಇಂತಹ ಗ್ರಾಹಕರನ್ನು ರಿಸ್ಕಿ ಎಂದು ಭಾವಿಸುತ್ತದೆ. ಬಾಕಿ ಮೊತ್ತವನ್ನು ಪಾವತಿಸಲು ನಿಮ್ಮ ಬಳಿ ಹಣವಿಲ್ಲ ಎಂದು ಭಾವಿಸುತ್ತದೆ. ಇದೆ ಕಾರಣಕ್ಕೆ ಕ್ರೆಡಿಟ್ ಲಿಮಿಟ್ ಅನ್ನು ಕಡಿಮೆ ಗೊಳಿಸುವ ಸಾಧ್ಯತೆ ಇದೆ.

ಟ್ರಾನ್ಸ್ ಯೂನಿಯನ್ ಸಿಬಿಲ್ ಸಂಸ್ಥೆಯ ಡೇಟಾ ಪ್ರಕಾರ ಕ್ರೆಡಿಟ್ ಕಾರ್ಡ್ ಬಾಕಿ ಮೊತ್ತ ಪಾವತಿ ಮಾಡದೇ ಇದ್ದವರ ಸಂಖ್ಯೆ ಮಾರ್ಚ್ 2023 ರಲ್ಲಿ 1.6 ರಿಂದ ಜೂನ್ 2024 ಗೆ 1.8 ಪ್ರತಿಶತ ಹೆಚ್ಚಾಗಿದೆ. ಈ ಹೆಚ್ಚಳ ಬಯ್ ನೌ ಪೆ ಲೇಟರ್ ನಂತಹ ಆಫರ್ ಗಳಿಂದ ಜನರು emi ಕಂತುಗಳನ್ನು ಆರಿಸಿಕೊಂಡಿದ್ದರಿಂದಲೂ ಆಗಿರುತ್ತದೆ. ಕ್ರೆಡಿಟ್ ಕಾರ್ಡ್ ಬಾಕಿ ಮೊತ್ತ ಜೂನ್ 2024 ರ ವೇಳೆಗೆ ಸುಮಾರು 2.6 ಟ್ರಿಲಿಯನ್ ಗೆ ಏರಿಕೆಯಾಗಿದೆ. ಜನರು ಬಾಕಿ ಪಾವತಿಸಲು ವಿಫಲ ಆಗುತ್ತಿದ್ದರೆ ಎನ್ನುವುದು ಇದರಿಂದ ಒಂದು ಚಿಕ್ಕ ಸುಳಿವು ಸಿಗುವುದಂತೂ ಖಚಿತ.

ನಿಮ್ಮ ಕ್ರೆಡಿಟ್ ಸ್ಕೋರ್ (Credit score) ಉತ್ತಮವಾಗಿದ್ದರೆ ಮಾತ್ರ ಬ್ಯಾಂಕ್ ಗಳು ಅಥವಾ ಇತರ ಫೈನಾನ್ಸಿಯಲ್ ಇನ್ಸ್ಟಿಟ್ಯೂಷನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು (Credit card limit) ಹೆಚ್ಚಿಸುತ್ತದೆ. ಸಾಲ ಮರುಪಾವತಿ ಮಾಡುವುದು ಪದೇ ಪದೇ ತಡವಾದರೆ ಮಾತ್ರ ನಿಮ್ಮ ಕ್ರೆಡಿಟ್ ಲಿಮಿಟ್ ಅನ್ನು ಬ್ಯಾಂಕ್ ಗಳು ಕಡಿಮೆ ಮಾಡುತ್ತದೆ. ಅದೇ ರೀತಿ ನಿಮ್ಮ ಕ್ರೆಡಿಟ್ ಕಾರ್ಡ್ ನ ಕೇವಲ 30% ಮಾತ್ರ ಬಳಸಿ. ಅದಕ್ಕಿಂತ 70% ಮಿತಿ ತಲುಪಿದರೆ ನೀವು ಅಪಾಯಕಾರಿ ವಲಯವನ್ನು ತಲುಪಿದ್ದೀರಿ ಎಂದರ್ಥ. ಬಳಕೆಯ (Card Utilization) ಅನುಪಾತ ಎಷ್ಟು ಕಡಿಮೆ ಇರುತ್ತದೆಯೋ ಅಷ್ಟು ಉತ್ತಮ.

ಕಾರ್ಡ್ ಮಿತಿ ಕಡಿಮೆ ಆದಾಗ ಇದನ್ನು ಮಾಡಿ.

ಅದಲ್ಲದೆ ನಿಮ್ಮ ಬಳಿ ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಇದ್ದಾರೆ ಹಾಗೇನೇ ಒಂದಕ್ಕಿಂತ ಜಾಸ್ತಿ ಕ್ರೆಡಿಟ್ ಕಾರ್ಡ್ ಅನ್ನು ಒಮ್ಮೆಲೇ ಬಳಸಿದಾಗ ಬ್ಯಾಂಕ್ ನಿಮ್ಮನ್ನು ಅಪಾಯಕಾರಿ ಬಳಕೆ ದಾರ ಎಂದು ಪರಿಗಣಿಸುತ್ತದೆ. ನೀವು ಸಾಲಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೀರಾ ಎಂದು ಬ್ಯಾಂಕ್ ಗಳು ಪರಿಗಣಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್ ಗಳು ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನ ಕಡಿಮೆ ಮಾಡುತ್ತವೆ.

credit card limit

ಕ್ರೆಡಿಟ್ ಕಾರ್ಡ್ ಮಿತಿ ಕಡಿಮೆ ಆದರೆ ಗಾಭರಿಯಾಗುವಂತಹ ವಿಷಯ ಏನು ಇಲ್ಲ. ನೀವು ಮೊದಲು ಗ್ರಾಹಕರ ಸೇವೆಗೆ (Customer service) ಕರೆ ಮಾಡಿ ನೀವು ಬಾಕಿ ಪಾವತಿ ಮಾಡಲು ತಡೆ ಏಕೆ ಆಯಿತು ಎನ್ನುವ ಸರಿಯಾದ ಕಾರಣ ನೀಡಬೇಕಾಗುತ್ತದೆ. ನೀವು ಬಯಸಿದರೆ ಕಾರ್ಡ್ ಮಿತಿಯನ್ನು ಮತ್ತೊಮ್ಮೆ ಹೆಚ್ಚಳ ಮಾಡುವುದಕ್ಕೆ ಬ್ಯಾಂಕ್ ಗಳಿಗೆ ಮನವಿ ಸಲ್ಲಿಸಬಹುದು. ಹಾಗೇನೇ ಕಾರ್ಡ್ ಮಿತಿ ಕಡಿಮೆ ಮಾಡಬಹುದಾದ ತಪ್ಪುಗಳನ್ನ ಸಹ ಮಾಡದಂತೆ ಗಮನ ಹರಿಸಿ.

Leave a Reply

Your email address will not be published. Required fields are marked *