ನೇರವಾಗಿ ಮಾನವನ ಮೆದುಳಿಗೆ ಕೈ ಹಾಕಲು ಹೊರಟಿದ್ದಾರೆ ಎಲಾನ್ ಮುಸ್ಕ್ (Elon Musk). ಏನಿದು ಮೆದುಳಿನ ಚಿಪ್?

21 ನೇ ಶತಮಾನದಲ್ಲಿ ಪ್ರಪಂಚವು ಟೆಕ್ನಾಲಜಿ (Technology) ವಿಷಯದಲ್ಲಿ ಬಹಳ ವೇಗವಾಗಿ ಚಲಿಸುತ್ತಿದೆ. ಹಾಗೇನೇ ದಿನಕೊಂದು ಕ್ಷೇತ್ರದಲ್ಲಿ ಹೊಚ್ಚ ಹೊಸ ಆವಿಷ್ಕಾರ, ಅನ್ವೇಷಣೆಗಳು ನಡೆಯುತ್ತಲೇ ಇದೆ. ವೈದ್ಯಕೀಯ (Medical) ಕ್ಷೇತ್ರದಲ್ಲಿ ಈ ಟೆಕ್ನಾಲಜಿ ಗಳ ಬಳಕೆ ಇದೀಗ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಹಾಗೇನೇ ಆಪರೇಷನ್ ಮಾಡುವ ವೈದ್ಯರ ಬದಲು ಇದೀಗ ಮಷೀನ್ ಗಳೇ ಬಂದು ಬಿಟ್ಟಿದೆ. ಹೆಲ್ತ್ ಮಾನಿಟರ್ APP ಹಾಗು ವಾಚ್ ಗಳು ಇಂದು ಟ್ರೆಂಡಿಂಗ್ ನಲ್ಲಿದೆ.

google image

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲಿಗೆ ಬರುವ ಹೆಸರೇ ಎಲಾನ್ ಮುಸ್ಕ್ (Elon Musk). ಈ ವ್ಯಕ್ತಿ ಕೈ ಹಾಕದ ಕ್ಷೇತ್ರಗಳೇ ಇಲ್ಲ. ಸ್ಪೇಸ್ x (Space X) ಮೂಲಕ ಅಂತರಿಕ್ಷಕ್ಕೆ ಉಪಗ್ರಹ, ವಿದ್ಯುತ್ ಚಾಲಿತ ಕಾರ್ ಟೆಸ್ಲಾ (Tesla) ಹಾಗೇನೇ ಇದೀಗ ಖರೀದಿಸಿದ ಟ್ವಿಟ್ಟರ್ (twitter). ಇವೆಲ್ಲದರಲ್ಲಿ ಇವರು ಬಂಡವಾಳ ಹೂಡಿದ್ದಾರೆ. ಹಾಗೇನೇ ಇವರು ನ್ಯೂರೋ ಲಿಂಕ್ ಎನ್ನುವ ಕಂಪನಿ ಮೂಲಕ ಹೊಸ ಆವಿಷ್ಕಾರದ ಬಗ್ಗೆ ಹೇಳಿದ್ದಾರೆ. ಅದು ಮತ್ತೇನಲ್ಲ ಮೆದುಳಿಗೆ ಒಂದು ಚಿಪ್ ಅಳವಡಿಕೆ ಮಾಡುವುದು.

ಈ ಚಿಪ್ ಅಳವಡಿಕೆ ಪರೀಕ್ಷೆ ಎಲಾನ್ ಮುಸ್ಕ್ (Elon Musk) ಶೀಘ್ರದಲ್ಲೇ ನಡೆಸಲಿದ್ದಾರೆ. ಹಾಗೇನೇ ಇದು ಯಶಸ್ವಿ ಆದರೆ ಇದನ್ನು ಮೊದಲು ಇವರೇ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಈ ಚಿಪ್ ಮನುಷ್ಯ ಹಾಗು ಅವನ್ ಭಾವನೆ ಗಳು ಕಂಪ್ಯೂಟರ್ ಜೊತೆ ಲಿಂಕ್ ಮಾಡುತ್ತದೆ. ಇದರಿಂದ ಮಾನವ ನೇರವಾಗಿ ಕೀಬೋರ್ಡ್ ಆಗಲಿ ಬೇರೆ ಉಪಕರಣ ಬಳಸದೆ ಕಂಪ್ಯೂಟರ್ ಜೊತೆ ಸಂವಹನ ನಡೆಸಬಹುದು ಎಂದು ತಿಳಿದು ಬಂದಿದೆ. ಈಗಾಗಲೇ ಪ್ರಾಣಿಗಳಿಗೆ ಈ ಚಿಪ್ ಅಳವಡಿಸಿ ಪರೀಕ್ಷೆ ನಡೆಸಲಾಗಿದೆ. ಇನ್ನು FDA ಅನುಮತಿ ಸಿಕ್ಕಿದರೆ ಮುಂದೆ ಮನುಷ್ಯರಿಗೆ ಈ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ ಮುಸ್ಕ್.

chip to brainelon muskneuro linkteslatwitter
Comments (0)
Add Comment