ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ಕೂಗು. ಅಲುಗಾಡುತ್ತಿದೆ ದೀದಿ ಮುಖ್ಯಮಂತ್ರಿ ಪದವಿ. ಬಿಳಲಿದೆಯಾ ಮಮತಾ ಸರಕಾರ?

ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ಮಾಡಬೇಕೆಂದು ತೃಣಮೂಲ ಕಾಂಗ್ರೆಸ್ ಪ್ರತಿನಿಧಿಗಳು ಚುನಾವಣಾ ಆಯೋಗಕ್ಕೆ ಒ’ತ್ತಾಯ ಮಾಡಿದ್ದಾರೆ. ದೀದಿ ಪಕ್ಷದ ಮುಖಂಡರ ಪ್ರಕಾರ ಉಪ ಚುನಾವಣೆ ತಡವಾಗುತ್ತಿದೆ, ಹಿಂದಿನ ತಿಂಗಳು ಕೂಡ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೆವು ಆದರೆ ಇನ್ನು ಇದರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ದೂ’ರಿದ್ದಾರೆ. ಒಟ್ಟು ೭ ವಿಧಾನಸಭಾ ಸೀಟುಗಳ ಉಪಚುನಾವಣೆ ನಡೆಯಲಿದ್ದು ಮಮತಾ ಬ್ಯಾನೆರ್ಜಿ ಭವಾನಿಪುರ ಎನ್ನುವ ಕ್ಷೇತ್ರದಲ್ಲಿ ಸ್ಪ’ರ್ಧೆ ಮಾಡುತ್ತಾರೆ ಎನ್ನಲಾಗುತ್ತಿದೆ.

ಮಮತಾ ದೀದಿ ಕುರ್ಚಿ ಅ’ಲುಗಾಡುತ್ತಿದೆ:- ಮಮತಾ ಬ್ಯಾನರ್ಜಿ ಈಗ ವಿಧಾನಸಭೆ ಸದಸ್ಯರಾಗಿಲ್ಲ, ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪ’ರ್ದಿಸಿ ಬಿಜೆಪಿಯ ಸುವೆಂದು ಅಧಿಕಾರಿ ವಿರುದ್ಧ ಸೋ’ತಿದ್ದರು. ಆದರೂ ಮಮತಾ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡಿದ್ದಾರೆ. ದೀದಿ ಮೊದಲು ಕೂಡ ಇಂತಹ ವಿಧಾನಸಭೆ ಗೆ ಆಯ್ಕೆ ಆಗದಿದ್ದರೂ ಮುಖ್ಯಮಂತ್ರಿ ಆಗಿರುವ ಅನೇಕ ನಾಯಕರಿದ್ದಾರೆ. ಬಿಹಾರದ ನಿತೀಶ್ ಕುಮಾರ್ ೩೦ ವರ್ಷಕ್ಕೂ ಅಧಿಕ ಸಮಯ ದಿಂದ ವಿಧಾನಸಭೆ ಚುನಾವಣೆ ಸ್ಪ’ರ್ಧೆ ಮಾಡಲಿಲ್ಲ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ವಿಧಾನಸಭೆ ಚುನಾವಣೆ ಸ್ಪ’ರ್ದಿಸಲಿಲ್ಲ. ಆದರೆ ಇವರಿಬ್ಬರು ವಿಧಾನ ಪರಿಷದ್ ಸದಸ್ಯರು ಹಾಗಾಗಿ ಮುಖ್ಯಮಂತ್ರಿ ಸ್ಥಾನ ಪಡೆಯಲು ಅರ್ಹಾಗಿದ್ದರೆ.

ಮಹಾರಾಷ್ಟ್ರ ಹಾಗು ಬಿಹಾರ ದಲ್ಲಿ ವಿಧಾನಸಭೆ ಹಾಗು ವಿಧಾನಪರಿಶದ್ ಎಂದು ಎರಡು ಮನೆಗಳಿವೆ ನಮ್ಮ ರಾಜ್ಯದಲ್ಲೂ ಇದೆ, ನಮ್ಮಲ್ಲಿ ಸವದಿ ವಿಧಾನ ಪರಿಷದ್ ಮೂಲಕ ಆಯ್ಕೆ ಯಾಗಿ ಉಪ ಮುಖ್ಯ ಮಂತ್ರಿ ಆಗಿದ್ದವರು. ಆದರೆ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಮಾತ್ರ ಇದೆ ವಿಧಾನ ಪರಿಷದ್ ಇಲ್ಲ. ಹಾಗಾಗಿ ಮುಖ್ಯಮಂತ್ರಿ ಸ್ಥಾನ ಪಡೆದ ೬ ತಿಂಗಳೊಳಗೆ ವಿಧಾನಸಭೆಯ ಸದಸ್ಯರಾಗಬೇಕು. ಹಾಗೇನೇ ಯಾವುದೇ ಖಾಲಿ ಇರುವ ಸೀಟುಗಳಲ್ಲಿ ಉಪಚುನಾವಣೆ ಗೆ’ದ್ದು ವಿಧಾನಸಭೆ ಸದಸ್ಯರಾಗಬಹುದು. ಇದು ಆಗಲಿಲ್ಲ ಅಂದರೆ ಸಂವಿಧಾನದ ಅನುಚ್ಛೇದ ೧೬೪ ರ ಪ್ರಕಾರ ಸದಸ್ಯರಲ್ಲದವರು ೬ ತಿಂಗಳ ಒಳಗೆ ರಾಜೀನಾಮೆ ಸಲ್ಲಿಸಬೇಕೆಂದು. ಉಪಚುನಾವಣೆ ಯಾವಾಗ ಎಂದು ಗೊತ್ತಾದರೆ ದೀದಿ ತಮ್ಮ ಕುರ್ಚಿ ಉಳಿಸಿಕೊಳ್ಳಲಿದ್ದಾರೆ ೬ ತಿಂಗಳ ನಂತರ ಚುನಾವಣೆ ನಡೆಯದಿದ್ದರೆ ದೀದಿ ತನ್ನ ಮುಖ್ಯಮಂತ್ರಿ ಸ್ಥಾನದಿಂದ ರಾ’ಜೀನಾಮೆ ನೀಡಬೇಕಾಗುತ್ತದೆ.

mamta bannerjee
Comments (0)
Add Comment