ಬಿಜೆಪಿ ರಾಜ್ಯಾಧ್ಯಕ್ಷರ ಅಸಮಾಧಾನ ತೋರಿದ ಬಿಜೆಪಿ ಕಾರ್ಯಕರ್ತರು? ಯಾಕೆ ಏನಿದು ವಿಷಯ?

ಬಿಜೆಪಿ ಪಕ್ಷ ಎಂದರೆ ಹಾಗೆ ನೋಡಿ ಅದು ಹಿಂದುತ್ವದ ಹಿನ್ನಲೆಯಿಂದ ಬಂದಿರುವಂತದು. ಬಿಜೆಪಿ ಒಂದು ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಬೆಳೆಯ ಬೇಕಾದರೆ ಅದು ಕೇವಲ ಬಿಜೆಪಿ ಇಂದ ಮಾತ್ರ ಸಾಧ್ಯ ಆಗಿಲ್ಲ, ಬದಲಾಗಿ ಅದಕ್ಕೆ ಸಹಸ್ರ ಸಂಖ್ಯೆಯ ಸಂಘಟನೆಯ ಕಾರ್ಯ ಕರ್ತರ ಬೆಂಬಲ ಇದೆ. ಹೌದು ಆ ಸಂಘಟನೆ ಮತ್ಯಾವುದೋ ಅಲ್ಲ RSS ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಈ ಸಂಘ ಶಕ್ತಿಯೊಂದು ಇಲ್ಲದಿದ್ದರೆ ಬಿಜೆಪಿ ಇಂದು ಇತಿಹಾಸದ ಪುಟ ಸೇರಿರುವ ಪಕ್ಷ ಆಗುತ್ತಿತ್ತು ಎಂದರೂ ಸುಳ್ಳಲ್ಲ. ಆದರೆ ಹಿಂದುತ್ವದ ಹೆಸರಿನಲ್ಲಿ ಅತೀ ದೊಡ್ಡ ಪಕ್ಷವಾಗಿ ಬೆಳೆದು ನಿಂತ ಬಿಜೆಪಿ ಈಗ ಅಧಿಕಾರ ಸಿಕ್ಕಾಗ ಯಾಕೋ ಮಂಕಾಗಿದೆ. ಚುನಾವಣಾ ಪೂರ್ವದಲ್ಲಿ ಇದ್ದ ಆ ಖದರ್ ಈಗ ಮಾಯವಾಗಿದೆ.

pc – swarajymarg

ಪ್ರತಿಯೊಂದು ವಿಚಾರದಲ್ಲಿ ಹಿಂದುತ್ವ ಹಿಂದುತ್ವ ಎಂದು ಹೇಳುತ್ತಿದ್ದ ಪಕ್ಷ ಈಗ ಯಾಕೋ ಹಿಂದುತ್ವವನ್ನು ಮರೆತು ಬಂಧುತ್ವವನ್ನು ಅಪ್ಪಿಕೊಂಡ ಹಾಗೆ ಭಾಸವಾಗುತ್ತಿದೆ. ಪಕ್ಷದ ಕಾರ್ಯಕರ್ತರೆ ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳ ಮರೆತು ಬೇರೆಡೆಗೆ ಆಡಳಿತ ಚಕ್ರ ತಿರುಗಿಸಿದ ಹಾಗೆ ಎಲ್ಲರಿಗೂ ಆಗುತ್ತಿದೆ. ಬಿಜೆಪಿ ಅನ್ನು ಗೆಲ್ಲಿಸಿದ ಒಂದೇ ಉದ್ದೇಶ ಎಂದರೆ ಅದು ಹಿಂದುತ್ವದ ಪರವಾಗಿ ನಿಲ್ಲುವ ಪಕ್ಷ ಎಂಬ ಕಾರಣಕ್ಕೆ ಹೊರತು ಮತ್ತೇನು ಅಲ್ಲ. ಕ್ಷೇತ್ರದ ಶಾಸಕರ ಮೇಲೆ ಅಸಮಾಧಾನ ಇದ್ದರೂ ಮೋದಿ ಶಾ ಯೋಗಿಜಿ ಅಂತ ನಾಯಕರ ಮುಖ ಕಂಡು ವೋಟ್ ಹಾಕಿದವರು ಅದೆಷ್ಟೋ ಜನ. ಆದರೆ ಈಗ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧವೇ ಅಸಮಾಧಾನ ಹೊರ ಹಾಕುತ್ತಿದ್ದಾರೆ ಜನರು.

ಹೌದು ಇತ್ತೀಚೆಗೆ ನಡೆದ ಕೆಲವೊಂದು ಘಟನೆಗಳ ಹಿನ್ನಲೆಯಲ್ಲಿ ಈ ಅಸಮಾಧಾನ ವ್ಯಕ್ತ ಆಗಿದೆ. ಕರಾವಳಿ ಭಾಗದ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಶಾಸಕರು ಇದ್ದು ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ ಆದರೂ ಇಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಬದಲಾಗಿ ಅವರ ವಿರುದ್ಧವೇ ಪಿತೂರಿ ನಡೆಯುತ್ತಿದೆ. ಹಿಂದುತ್ವದ ಹೆಸರು ಹೇಳಿ ಚುನಾವಣಾ ಗೆದ್ದ ಎಲ್ಲರೂ ಸುಮ್ಮನಿರುವುದು ಆಶ್ಚರ್ಯ. ಚುನಾವಣಾ ಪೂರ್ವದಲ್ಲಿ ಇದ್ದ ಹಿಂದುತ್ವದ ಅಲೆ ಎಲ್ಲಿ ಮಾಯವಾಗಿದೆ ಎಂದು ಕೇಳುವ ಪರಿಸ್ಥಿತಿ ಬಂದೊದಗಿದೆ. ಅದೇನೇ ಇರಲಿ ತಮ್ಮ ತಪ್ಪನ್ನು ಅರಿತು ಇನ್ನಾದರೂ ಸರಿ ದಾರಿಯಲ್ಲಿ ನಡೆದರೆ ಮುಂದಿನ ಚುನಾವಣೆಯಲ್ಲಿ ಗೆದ್ದು ಬರಬಹುದು. ಜನ ತಮ್ಮ ತಾಳ್ಮೆ ಕಳೆದು ಕೊಂಡರೆ ಈ ಬಾರಿ ಮೋದಿಯ ಮಾತನ್ನು ಕೇಳದೇ NOTA ಒತ್ತಿದರು ಅಚ್ಚರಿ ಇಲ್ಲ.

Comments (0)
Add Comment