ಬೈಡೆನ್ ಅಲ್ಲ ಬೊರ್ರಿಸ್ ಜೋನ್ಸನ್ ಕೂಡ ಅಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನಂಬರ್ ೧. ಜಾಗತಿಕ ಅನುಮೋದನೆ ರೇಟಿಂಗ್ ಎಷ್ಟಿದೆ ಇಲ್ಲಿದೆ ನೋಡಿ.

ಕೊರೊನ ಸಂಧರ್ಭದಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಹಾಗೆ ಉಳಿದಿದೆ. ಅಮೇರಿಕಾದ ಡೇಟಾ ಇಂಟೆಲಿಜೆನ್ಸಿ ಸಂಸ್ಥೆ ಮಾರ್ನಿಂಗ್ ಕಾನ್ಸುಲ್ಟ್ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಅಗ್ರಸ್ಥಾನ ಪಡೆದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಗ್ಲೋಬಲ್ ಅಪ್ರೂವಲ್ ರೇಟಿಂಗ್ ಅಲ್ಲಿ ೬೬% ಪಡೆದು ನಂಬರ್ ೧ ನಾಯಕನಾಗಿ ಹೊರಹೊಮ್ಮಿದ್ದಾರೆ. ಕೊರೊನ ಸಮಯದಲ್ಲೂ ಮೋದಿ ಅಮೇರಿಕ, ಬ್ರಿಟನ್, ಕೆನಡಾ, ಬ್ರೆಜಿಲ್, ರಷ್ಯಾ, ಫ್ರಾನ್ಸ್ ನಾಯಕರನ್ನು ಸೇರಿ ಒಟ್ಟು ೧೩ ದೇಶಗಳ ನಾಯಕರನ್ನು ಹಿಂದಿಕ್ಕಿ ಆಗ್ರಾ ಸ್ಥಾನ ಪಡೆದಿದ್ದಾರೆ. ಅಮೇರಿಕ ಡೇಟಾ ಏಜನ್ಸಿ ಮುಕಾಂತರ ನಡೆಸಿದ ಸಮೀಕ್ಷೆಯಲ್ಲಿ ಕೋರನ ಎರಡನೇ ಅಲೆಯ ನಂತರ ಜನರ ಅಭಿಪ್ರಾಯ ನಾಯಕರ ಮೇಲೆ ಎಷ್ಟು ಕಮ್ಮಿ ಆಗಿದೆ ಅಥವಾ ಜಾಸ್ತಿ ಆಗಿದೆ ಎಂದು ನೋಡಲು ನಡೆಸಿದ ಸಮೀಕ್ಷೆಯಲ್ಲಿ ಸ್ವಲ್ಪ ಮಟ್ಟದ ಅಪ್ರೂವಲ್ ರೇಟಿಂಗ್ ಕಡಿಮೆ ಆಗಿದೆ ಆದರೂ ಮೋದಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರ ನಂತರ ಇಟಲಿ ಪ್ರಧಾನಿ ಮಾರಿಯೋ ದ್ರಾಘಿ ನಂತರದ ಸ್ಥಾನದಲ್ಲಿದ್ದಾರೆ. ಮೂರನೇ ಸಂಖ್ಯೆ ಮೆಕ್ಸಿಕನ್ ಅಧ್ಯಕ್ಷ ಲೋಪೆಜ್ ಒಬ್ರಡಾರ್, ಅವರು ಶೇಕಡಾ 63 ರಷ್ಟು ರೇಟಿಂಗ್ ಹೊಂದಿದ್ದಾರೆ.


ಮಾರ್ನಿಂಗ್ ಕನ್ಸಲ್ಟ್ ನಿಯಮಿತವಾಗಿ ವಿಶ್ವ ನಾಯಕರ ಅನುಮೋದನೆ ರೇಟಿಂಗ್‌ಗಳನ್ನು ಪತ್ತೆ ಮಾಡುತ್ತದೆ. ಇದರ ಪ್ರಕಾರ ಪ್ರಧಾನಿ ಮೋದಿಯ ನಂತರ ಪ್ರಧಾನಿ ಮಾರಿಯೋ ಡ್ರಾಗಿ (65%) ಎರಡನೇ ಸ್ಥಾನ ಪಡೆದರೆ, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (63%), ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ (54%) ನಂತರದ ಸ್ಥಾನದಲ್ಲಿದ್ದಾರೆ. ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ (53%), ಯುಎಸ್ ಅಧ್ಯಕ್ಷ ಜೋ ಬಿಡನ್ (53%), ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (48%), ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ (44%), ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ (37%), ಪೆಡ್ರೊ ಸ್ಯಾಂಚೆ (36%), ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ (35%), ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ (35%) ಮತ್ತು ಜಪಾನಿನ ಪ್ರಧಾನಿ ಯೋಶಿಹೈಡ್ ಸುಗಾ (29%) ಸ್ಥಾನ ಕ್ರಮವಾಗಿ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಒಟ್ಟು ೨೧೨೬ ವಯಸ್ಕ ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ, ಇವರಲ್ಲಿ ಶೇಕಡಾ ೬೬ ಮಂದಿ ಮೋದಿಗೆ ಅನುಮೋಧನೆ ನೀಡಿದರೆ ೨೮% ಜನ ಮೋದಿಯವರನ್ನು ನಿರಾಕರಿಸಿದ್ದಾರೆ. ಈ ಟ್ರಾಕರ್ ಜೂನ್ ೧೭ ರಂದು ನವೀಕರಿಸಲಾಗಿದೆ, ಬೇರೆ ಬೇರೆ ದೇಶಗಳಲ್ಲಿ ವಿಭಿನ್ನ ಮಾದರಿಯಲ್ಲಿ ಈ ಸಮೀಕ್ಷೆ ನಡೆಸಲಾಗಿದೆ ಎಂದು ಏಜನ್ಸಿ ಹೇಳಿದೆ.

Comments (0)
Add Comment