ಮುಸ್ಲಿಂ ದೇಶವಾದ ಇಂಡೋನೇಷ್ಯಾದಲ್ಲಿ ಇಂದಿಗೂ ಭಕ್ತಿಯಿಂದ ಗಣಪತಿಯನ್ನು ಪೂಜಿಸುತ್ತಾರೆ ಯಾಕೆ? ಯಾವುದು ಆ ಸ್ಥಳ ಇಲ್ಲಿ ಓದಿರಿ.
ಇಂಡೋನೇಷಿಯಾ ಎಂದರೆ ಮೊದಲಿಗೆ ನೆನಪಾಗುವುದು ಮುಸ್ಲಿಂ ರಾಷ್ಟ್ರ ಎಂದು. ಅಲ್ಲಿನ ದೇಶದ 99% ಜನ ಸಂಖ್ಯೆ ಮುಸ್ಲಿಂ ಆದರೂ ಅಲ್ಲಿ ಗಣೇಶನ ವಿಗ್ರಹ ಒಂದು ಸದಾ ಕಾಲ ಚರ್ಚೆ ಅಲ್ಲಿರುತ್ತದೆ ಮತ್ತು ಅಲ್ಲಿ ಗಣೇಶನಿಗೆ ವಿಶೇಷ ಪೂಜೆ ನಡೆಯುತ್ತದೆ. ಹೌದು ಇದು ನಂಬಲು ಅಸಾಧ್ಯ ಆದರೂ ಸತ್ಯ ಸಂಗತಿ. ಹಾಗಾದರೆ ಯಾವುದು ಆ ಪ್ರದೇಶ ಮತ್ತು ಅಲ್ಲಿ ಯಾಕೆ ಇಷ್ಟು ಭಯ ಭಕ್ತಯಿಂದ ಪೂಜೆ ನಡೆಯುತ್ತದೆ ಎಂದು ತಿಳಿಯೋಣ ಬನ್ನಿ. ಆ ಜಾಗ ಮತ್ಯಾವುದು ಅಲ್ಲ ಇಂಡೋನೇಷಿಯಾದ ಟೆಂಗರ್ ಪರ್ವತ ಶ್ರೇಣಿಯ ಮೌಂಟ್ ಬ್ರೋಮೊ. ಹೌದು ಇಲ್ಲಿನ ಈ ಪರ್ವತ ಶ್ರೇಣಿಯ ಬಗ್ಗೆ ಯಾರಾದರೂ ಕೇಳಿರಬಹುದು ಇಲ್ಲವಾದರೆ ಇಲ್ಲಿನ ವಿಶೇಷ ಏನು ಎಂಬ ಬಗ್ಗೆ ತಿಳಿಯಿರಿ.
ಈ ಪರ್ವತ ಶ್ರೇಣಿಯು ಜ್ವಾಲಾಮುಖಿಯ ಕೂಪವಾಗಿದೆ. ಹೌದು ಇಲ್ಲಿ ದೊಡ್ಡ ಒಂದು ಜ್ವಾಲಾಮುಖಿ ಬಾಯಿ ಇದ್ದು ಇಲ್ಲಿಂದ ಯಾವ ಸಮಯಕ್ಕೂ ಜ್ವಾಲಾಮುಖಿ ಪ್ರವಾಹ ಎದ್ದು ಬರಬಹುದು. ಆದರೆ ಈ ಬೆಟ್ಟದ ಮೇಲ್ಭಾಗದಲ್ಲಿ ಗಣೇಶನ ವಿಗ್ರಹ ಒಂದು ಸ್ಥಾಪಸಲ್ಪಟ್ಟಿತು ಅದು ಎಂದು ಯಾರು ಸ್ಥಾಪಿಸಿದ್ದು ಎಂಬ ಮಾಹಿತಿ ಇಲ್ಲ. ಆದರೆ ಅದಕ್ಕೆ ಸದಾ ಪೂಜೆ ಪುರಸ್ಕಾರ ನಡೆಯುತ್ತಲೇ ಇರುತ್ತದೆ. ಅಲ್ಲಿನ ಜನಗಳ ನಂಬಿಕೆ ಎಂದರೆ ಅಲ್ಲಿ ಗಣೇಶ ವಿಗ್ರಹ ಇರುವುದರಿಂದ ಯಾವುದೇ ರೀತಿಯ ಅವಿಘ್ನ ನಡೆಯುವುದಿಲ್ಲ, ಬದಲಾಗಿ ಗಣೇಶ ದೇವರು ಅಲ್ಲಿ ಎಲ್ಲವನ್ನೂ ತಿಳಿಯಾಗಿ ಇರಿಸಿದ್ದಾರೆ ಅವರೇ ಎಲ್ಲರನ್ನೂ ಕಾಪಡುತ್ತಿದ್ದರೆ ಎಂಬ ನಂಬಿಕೆ ಇಂದಿಗೂ ಇದೆ ಜನರಲ್ಲಿ.
ಅದೇನೇ ಇರಲಿ ಧರ್ಮಗಳ ಎಲ್ಲೆ ಮೀರಿ ನಂಬಿಕೆ ಒಂದು ನಿಂತಾಗ ಅಲ್ಲಿ ಮಹತ್ತರ ಶಕ್ತಿ ಒಂದು ಸದಾ ಇದ್ದೇ ಇರುತ್ತದೆ. ಯಾವುದೇ ಧರ್ಮ ಎನ್ನದೆ ಎಲ್ಲಾ ಎಲ್ಲೆಯ ಮೀರಿ ಎಲ್ಲರನ್ನೂ ಒಗ್ಗೂಡಿಸಿ ನಿಲ್ಲಿಸುತ್ತದೆ ಎಂದರೆ ಅಂತಹ ಧರ್ಮ ಶ್ರೇಷ್ಠವೇ ಸರಿ.