ಗಡ್ಡ-ಮೀಸೆ ಕೂದಲು ಬೆಳ್ಳಗಾಗುವುದನ್ನು ತಡೆಯಲು ಈ ಮನೆ ಮದ್ದು ಅವಶ್ಯಕವಾಗಿ ಬಳಸಿ. ಯಾವುದು ಈ ಮನೆಮದ್ದು?

1,699

ತಲೆಗೂದಲು ಬೆಳ್ಳಗಾಗುವುದು ಹಾಗು ಬೋಳಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅದಲ್ಲದೆ ಜನರು ತಲೆ ಕೂದಲು ಉದುರುವುದಕ್ಕೆ ಚಿಂತೆ ಗೀಡಾಗಿದ್ದರೆ. ಕೂದಲು ಉದುರುವುದನ್ನು ನಿಲ್ಲಿಸಲು ಅನೇಕ ಕೆಮಿಕಲ್ ಬಳಸುವುದನ್ನು ನಾವು ನೋಡಿರುತ್ತೇವೆ. ಶಂಪೋ, ಬೇರೆ ಬೇರೆ ಲೇಪನ ಹಚ್ಚುವುದನ್ನು ನೋಡಿರುತ್ತೇವೆ. ಈಗ ಆ ಸಮಸ್ಯೆ ಅಲ್ಲದೆ ಪುರುಷರಲ್ಲಿ ಗಡ್ಡ ಮೀಸೆ ಗಳ ಕೂದಲು ಕೂಡ ಬೆಳ್ಳಗಾಗುವ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಮನೆಮದ್ದು ಯಾವುದು ಇಲ್ಲಿದೆ ಓದಿ.

ಮೊಸರು ಮತ್ತು ತೆಂಗಿನ ಎಣ್ಣೆ – ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಇರುವಂತಹ ವಸ್ತು ಅಂದರೆ ಮೊಸರು ಹಾಗು ತೆಂಗಿನ ಎಣ್ಣೆ. ಇವೆರಡನ್ನೂ ಮಿಕ್ಸ್ ಮಾಡಿ ದಿನಕ್ಕೆ ಎರಡು ಬಾರಿ ಅಂದರೆ ಬೆಳ್ಳಿಗ್ಗೆ ಮತ್ತು ಸಂಜೆ ಹಚ್ಚಿಕೊಂಡರೆ ಸ್ವಲ್ಪ ಸಮಯದಲ್ಲೇ ಇದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ಬಹಳ ಜನರಿಗೆ ಕೆಲಸ ಕೂಡ ಆಗಿದೆ. ಗಡ್ಡ ಮೀಸೆಗೆ ಕಪ್ಪು ಬಣ್ಣ ಹಚ್ಚುವುದಕ್ಕಿಂತ ಈ ರೀತಿ ಮನೆಮದ್ದು ಮಾಡುವುದು ಉತ್ತಮ. ಹಸುವಿನ ಬೆಣ್ಣೆ ಕೂಡ ಕೂದಲು ಕಪ್ಪು ಮಾಡಲು ಸಹಾಯಕವಾಗಿರುತ್ತದೆ. ಈ ಹಸುವಿನ ಬೆಣ್ಣೆ ಇಂದ ಬೆಳ್ಳಿಗ್ಗೆ ಮತ್ತು ಸಂಜೆ ನಿಮ್ಮ ಗಡ್ಡ ಹಾಗು ಮೀಸೆಗೆ ಮಸಾಜ್ ಮಾಡಲು ಪ್ರಾರಂಭಿಸಿ ಪರಿಣಾಮ ನಿಮಗೆ ತಿಳಿಯುತ್ತದೆ.

ಇದು ಮಾತ್ರ ಅಲ್ಲದೆ ಪುದಿನ ಎಲೆಗಳಿಂದಲೂ ಕೂದಲು ಕಪ್ಪು ಮಾಡಿಕೊಳ್ಳಬಹುದು. ಪುದಿನ ಪೇಸ್ಟ್ ಹಾಗು ಎರಡು ಚಮಚ ಈರುಳ್ಳಿ ರಸ ಮಿಶ್ರಣ ಮಾಡಿ ಗಡ್ಡ ಹಾಗು ಮೀಸೆಗಳ ಬಿಳಿ ಕೂದಲಿನ ಮೇಲೆ ಹಚ್ಚುವುದರಿಂದ ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅದೇ ಅಲ್ಲದೆ ಹಸಿ ಪಪ್ಪಾಯ ಇಂದಲು ಕೆಲವು ಮದ್ದು ತಯಾರಿಸುತ್ತಾರೆ. ಬೆಟ್ಟದ ನೆಲ್ಲಿಕಾಯಿ ಇದರಿಂದಲೂ ಕೂದಲ ಬಣ್ಣ ಕಪ್ಪು ಬಣ್ಣಕ್ಕೆ ಬದಲಾಯಿಸಲು ಔಷದಿ ತಯಾರಿಸುತ್ತಾರೆ. ನೆಲ್ಲಿಕಾಯಿ ಕುಟ್ಟಿ ಪುಡಿ ಮಾಡಿ ರಾತ್ರಿ ಇಟ್ಟು ಮರುದಿನ ಗಡ್ಡ ಮೀಸೆಗೆ ಹಚ್ಚಿದರೆ ಪರಿಣಾಮ ತಿಳಿಯುತ್ತದೆ.

Leave A Reply

Your email address will not be published.