ಆರ್ಥಿಕವಾಗಿ ಬಿದ್ದ ಟರ್ಕಿ. ಬಹುತೇಕ ಎಲ್ಲಾ ಆರ್ಥಿಕ ಚಟುವಟಿಕೆ ಬಂದ್. ಕಾರಣವೇನು ಗೊತ್ತೆ?

900

ಟರ್ಕಿ ಚೀನಾ ಹಾಗು ಪಾಕಿಸ್ತಾನದ ಅತ್ಯಂತ ಪ್ರಿಯ ಮಿತ್ರ. ಭಾರತದ ವಿರುದ್ದ ಯಾವಾಗಲೂ ಹೇಳಿಕೆ ಕೊಡುತ್ತಿದ್ದ ದೇಶ. ಪಾಕಿಸ್ತಾನ ಕ್ಕೆ ಬೇಕಾದ ಆರ್ಥಿಕ ಹಾಗೂ ಮಿಲಿಟರಿ ಸಹಾಯ ನೀಡುತ್ತಿದ್ದ ದೇಶ ಇಂದು ಆರ್ಥಿಕವಾಗಿ ಬೀಳುತ್ತಿದೆ. ದೈನಂದಿನ ಅವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆ ದೇಶದ ರೂಪಾಯಿ ಮೌಲ್ಯ ಡಾಲರ್ ಎದುರು ಪತರಗುಟ್ಟುತ್ತಿದೆ. ಸಜ್ಜನರ ಸಂಗ ಹೆಜ್ಜೇನು ಸವಿದಂತೆ ದುರ್ಜನರ ಸಂಗ ಹಜ್ಜೇನು ಕಡಿದಂತೆ ಎನ್ನುವ ಮಾತು ಟರ್ಕಿಗೆ ಬಹಳ ಒಪ್ಪುತ್ತದೆ. ಪಾಕಿಸ್ತಾನ ಹಾಗು ಚೀನಾದಂತಹ ದೇಶಗಳ ಸಹವಾಸ ಮಾಡಿ ತನ್ನ ಆರ್ಥಿಕತೆ ಗೆ ಬಹುದೊಡ್ಡ ಪೆಟ್ಟು ಪಡೆದಿದೆ.

ಇದೇ ಟರ್ಕಿ ಕೆಲ ವರ್ಷಗಳ ಹಿಂದೆ ಬಹಳ ಶಕ್ತಿಶಾಲಿ ಇಸ್ಲಾಮಿಕ್ ದೇಶವಾಗಿತ್ತು. ಸಮುದ್ರದಲ್ಲಿ ತನ್ನದೇ ಪಾರುಪತ್ಯ ಸ್ಥಾಪಿಸಲು ಹೊರಟಿತ್ತು. ಎಲ್ಲಾ ಇಸ್ಲಾಮಿಕ್ ದೇಶಗಳ ನಾಯಕನಾಗಲು ಹಗಲು ಕನಸು ಕಾಣುತಿತ್ತು. ಅಲ್ಲದೇ ಯಾವುದೇ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಏನೇ ಆಗಲಿ ಅದನ್ನು ದೊಡ್ಡದು ಮಾಡಿ ಅದರಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿತ್ತು. ಇಂತಹ ದೇಶ ಇಂದು ಆರ್ಥಿಕವಾಗಿ ದಿವಾಳಿಯಾಗುವತ್ತ ಹೊರಟಿದೆ.

ಏನಾಗುತ್ತಿದೆ ಟರ್ಕಿಯಲ್ಲಿ? ಕಳೆದ ತಿಂಗಳು ಟರ್ಕಿ ದೇಶದ ಕರೆನ್ಸಿ ಅಂದರೆ ಅಲ್ಲಿನ ಲೀರಾ(ಅಲ್ಲಿನ ರೂಪಾಯಿ ಹೆಸರು) ಇದ್ದಕ್ಕಿದ್ದಂತೆ ಡಾಲರ್ ಎದುರು‌ ಸುಮಾರು ೧೫% ಮೌಲ್ಯ ಕಳೆದುಕೊಂಡಿತ್ತು. ಅದೇ ರೀತಿ ಜನವರಿಯಿಂದ ಒಟ್ಟು ೫೫% ಲೀರಾ ಮೌಲ್ಯ ಡಾಲರ್ ಎದುರು ಬಿದ್ದಿದೆ. ಇಷ್ಟೇ ಅಲ್ಲದೇ ಅಲ್ಲಿನ ಹಣದುಬ್ಬರ ಸುಮಾರು ೨೧% ಏರಿಕೆಯಾಗಿದೆ. ಅಂದರೆ ದೈನಂದಿನ ಅತ್ಯಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಷ್ಟೇ ಅಲ್ಲದೇ ಟರ್ಕಿಯಲ್ಲಿ ದೈನಂದಿನ ಶೇರು ಮಾರುಕಟ್ಟೆ ವ್ಯವಹಾರ ಕೂಡಾ ರದ್ದು ಮಾಡಿದೆ. ಇದಕ್ಕೆಲ್ಲಾ ಕಾರಣ ಆರ್ಥಿಕತೆ ಪುನಶ್ಚೇತನಕ್ಕೆ ಅನೇಕ ಬಾರಿ ಬಡ್ಡಿ ದರ ಏರಿಳಿತ ಅಂತ ಹೇಳುತ್ತಿದ್ದಾರೆ ತಜ್ಞರು.

ನಮ್ಮ ದೇಶಕ್ಕೆ ಇದು ಒಂತರಾ ಒಳ್ಳೆ ಸುದ್ದಿಯೇ. ಕಾರಣ ಇದು ಚೀನಾ ಹಾಗು ಪಾಕಿಸ್ತಾನದ ದೊಡ್ಡ ಸ್ನೇಹಿತ ಎಂದರು ತಪ್ಪಾಗಲಾರದು. ಅಲ್ಲದೇ ಪಾಕಿಸ್ತಾನಕ್ಕೆ ಬೇಕಾದ ಧನ ಸಹಾಯವಾಗಿರಲಿ‌ ಹಾಗು ಯಾವುದೇ ಮಿಲಿಟರಿ‌ ಸಹಾಯವಾಗಿರಲಿ ಪೂರೈಸುವಲ್ಲಿ ಚೀನಾ ಬಿಟ್ಟರೆ ಟರ್ಕಿಯೇ ಮುಂದಿರುವುದು. ಅಲ್ಲದೇ ಪಾಕಿಸ್ತಾನದ ಮಾತು‌ ಕೇಳಿ ಭಾರತ ಕಾಶ್ಮೀರದ ಆರ್ಟಿಕಲ್ ೩೫೦ ತೆಗೆದ್ದದ್ದಕ್ಕೂ ಖ್ಯಾತೆ ತೆಗೆದಿತ್ತು. ಪ್ರಾನ್ಸ್ ನಲ್ಲಿ ನಡೆದ ಕೋ-ಮುಗ-ಲಬೆ ಗೂ ಟರ್ಕಿ ಬೆಂಕಿಗೆ ತುಪ್ಪ ಹಚ್ಚಿತ್ತು.

Leave A Reply

Your email address will not be published.