ಕೊನೆವರೆಗೂ ಪಂದ್ಯ ಗೆಲ್ಲುವ ಆಸೆ ಜೀವಂತವಿಟ್ಟ ದೀಪಕ್ ಚಾಹರ್ ಪ್ರದರ್ಶನಕ್ಕೆ ಕೋಚ್ ರಾಹುಲ್ ದ್ರಾವಿಡ್ ಫುಲ್ ಕುಶ್. ಚಹಾರ್ ಗೆ ಒಲಿದು ಬರುತ್ತಾ ಅದೃಷ್ಟ?
ಭಾನುವಾರ ಕೇಪ್ ಟೌನ್ ಅಲ್ಲಿ ನಡೆದ ಕೊನೆಯ ಸೌತ್ ಆಫ್ರಿಕಾ ಜೊತೆಗಿನ ಪಂದ್ಯದಲ್ಲಿ ಭಾರತ ಸೋಲುವ ಮೂಲಕ ಭಾರತೀಯ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ಆದರೂ ಎಲ್ಲೆಡೆ ಭಾರತದ ಬೌಲರ್ ದೀಪಕ್ ಚಹಾರ್ ಕೊನೆವರೆಗೂ ಮೈದಾನದಲ್ಲಿ ದಿಟ್ಟವಾಗಿ ನಿಂತು ಬ್ಯಾಟ್ ಬಿಸಿ ಭಾರತದ ಗೆಲುವಿನ ಆಸೆ ಜೀವಂತವಾಗಿರಿಸಿದ್ದರು. ೩೪ ಎಸೆತಗಳಲ್ಲಿ ೫೪ ರನ್ ಮಾಡುವ ಮೂಲಕ ಭಾರತ ಗೆಲುವಿನ ಸನಿಹಕ್ಕೆ ಬರಲು ತಮ್ಮ ಯೋಗದನವನ್ನು ಇತ್ತರು. ಆದರೆ ೪೮ ನೇ ಓವರ್ ನಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತ ೪ ರನ್ ಗಳ ಸೋಲನ್ನು ಅನುಭವಿಸಬೇಕಾಯಿತು.
ಚಹಾರ್ ಪ್ರದರ್ಶನ ಬಗ್ಗೆ ತಂಡದ ಮುಖ್ಯ ತರಬೇತುಗಾರರಾದ ರಾಹುಲ್ ದ್ರಾವಿಡ್ ಫುಲ್ ಕುಶ್ ಆಗಿದ್ದಾರೆ. ಪಂದ್ಯದ ಬಳಿಕ ಮಾತಾಡುತ್ತ “ಚಹಾರ್ ಲಭ್ಯವಾಗಿದ್ದು ಭಾರತ ತಂಡಕ್ಕೆ ಉತ್ತಮವಾಗಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ಅಲ್ಲದೆ ಮುಂದಿನ ಸರಣಿಗಳಲ್ಲಿ ಚಹಾರ್ ಅವರಿಗೆ ಉತ್ತಮ ಅವಕಾಶ ಸಿಗಲಿದೆ ಎಂದು ಕೂಡ ಹೇಳಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಚಹಾರ್ ಹಾಗು ಶಾರ್ದುಲ್ ಠಾಕೂರ್ ನಂತಹ ಆಟಗಾರರು ಬ್ಯಾಟ್ ನಿಂದಲೂ ಸೋಲುವ ಪಂದ್ಯವನ್ನು ಗೆಲ್ಲಿಸುವ ಶಕ್ತಿ ಹೊಂದಿದ್ದಾರೆ. ಇವರು ಈ ಸಣ್ಣ ಸಹಾಯಗಳು ಕೂಡ ಭಾರತ ತಂಡದಲ್ಲಿ ದೊಡ್ಡ ಪಾತ್ರ ವಹಿಸಲಿದೆ.
ದ್ರಾವಿಡ್ ಅವರ ಪ್ರಕಾರ ಚಹಾರ್ ಅವರು ಶ್ರೀಲಂಕಾ ಹಾಗು ಇಲ್ಲಿ ನೀಡಿದ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಅವರು ಬ್ಯಾಟ್ ಅಲ್ಲಿ ಕೂಡ ಮಿಂಚಬಲ್ಲರು ಎನ್ನುವುದು ಈ ಪಂದ್ಯಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಚಹಾರ್ ಇಂಡಿಯಾ ಎ ತಂಡದಲ್ಲಿ ಆಡುವುದನ್ನು ನಾನು ನೋಡಿದ್ದೇನೆ. ಇದು ಮುಂದೆ ನಮಗೆ ಉತ್ತಮ ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಎಂದು ಕೋಚ್ ಹೇಳಿದ್ದಾರೆ. ಈ ಹೇಳಿಕೆ ಇಂದ ದೀಪಕ್ ಚಹಾರ್ ಅವರಿಗೆ ಮುಂದೆ ಉತ್ತಮ ಅವಕಾಶ ಸಿಗುವುದು ಖಚಿತವಾಗಿದೆ. ಇಂತಹ ಉತ್ತಮ ಪ್ರದರ್ಶನ ಎಲ್ಲರಿಂದಲೂ ಮುಂದಿನ ಸರಣಿಯಲ್ಲಿ ನೋಡಲು ದ್ರಾವಿಡ್ ಹಾಗು ದೇಶದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.