ಪ್ರೋ ಕಬಡ್ಡಿ 2022 ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ದಬಂಗ್ ಡೆಲ್ಲಿ. ಬಹುಮಾನ ರೂಪದಲ್ಲಿ ಸಿಕ್ಕ ಮೊತ್ತವೆಷ್ಟು ಗೊತ್ತೇ?
ಪ್ರೊ ಕಬಡ್ಡಿ ಎಂದರೆ ಭಾರತೀಯರು ಸದಾ ಕ್ರೇಜ್ ಹಿಡಿದು ಕಾಯ್ದು ಕುಳಿತು ಕೊಳ್ಳುತ್ತಾರೆ. ಯಾಕೆಂದರೆ ಕಬಡ್ಡಿ ಪಂದ್ಯ ಎಂದರೆ ಒಂತರಾ ಇಮೋಶನ್ ಎಂದರೂ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ನಾವು ಚಿಕ್ಕ ಮಕ್ಕಳಾಗಿದ್ದಾಗ ಆಟ ಆಡಿ ಆಡಿ ದೊಡ್ಡವರಾಗಿದ್ದರೂ ಸಹ ಆ ಆಟದ ಮೇಲಿನ ಪ್ರೀತಿ ಕಡಿಮೆ ಆದದ್ದು ಇಲ್ಲ. ಭಾರತದ ರಾಷ್ಟ್ರೀಯ ಕ್ರೀಡೆಗೆ ಈ ಒಂದು ವೇದಿಕೆ ಬೇಕಿತ್ತು, ಅದು ಸಿಕ್ಕಿದ್ದು ಬಹಳ ಸಂತಸ.
ಈ ಬಾರಿಯ ಕಬಡ್ಡಿ ಪಂದ್ಯಾಟ ಬಲು ರೋಚಕವಾಗಿ ಸಾಗಿತ್ತು. ಟೂರ್ನಮೆಂಟ್ ಉದ್ದಕ್ಕೂ ದಬಂಗ್ ಡೆಲ್ಲಿ ತನ್ನ ಪಾರುಪತ್ಯ ಸ್ಥಾಪಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಇಂದು ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡ ಪಾಟ್ನಾ ತಂಡವನ್ನು ಕೊನೆ ಗಳಿಗೆಯಲ್ಲಿ ಸೋಲಿಸುವ ಮೂಲಕ ಈ ಬಾರಿಯ ಕಿರೀಟ ತನ್ನ ಮುಡಿಗೆ ಏರಿಸಿಕೊಂಡಿತು. ಹಾಗಾದರೆ ಗೆದ್ದ ಈ ತಂಡಕ್ಕೆ ಸಿಕ್ಕ ಬಹುಮಾನ ಎಷ್ಟು ಗೊತ್ತೇ?
ಈ ಬಾರಿ ಗೆದ್ದ ಪ್ರೊ ಕಬಡ್ಡಿ 2022 ತಂಡಕ್ಕೆ 3 ಕೋಟಿ ರೂಪಾಯಿ ಮೊತ್ತ ಬಹುಮಾನ ರೂಪದಲ್ಲಿ ಸಿಕ್ಕಿದೆ. ರನ್ನರ್ ಆಫ್ ತಂಡ 1.8 ಕೋಟಿ ಪಡೆದು ಕೊಂಡರೆ. ಮೂರನೇ ಸ್ಥಾನ ಪಡೆದ ತಂಡ 1.2ಕೋಟಿ ಮತ್ತು ನಾಲ್ಕನೇ ಸ್ಥಾನ ಪಡೆದ ತಂಡ 80ಲಕ್ಷ ಬಹುಮಾನ ರೂಪದಲ್ಲಿ ಪಡೆಯುತ್ತದೆ. ಹೀಗೆ ಮುಂದುವರೆದು 5 ಮತ್ತು ಆರನೇ ಸ್ಥಾನದ ತಂಡ ತಲಾ 35 ಲಕ್ಷ ಪಡೆಯುತ್ತದೆ. ಹಾಗೆ ವೈಕ್ತಿಕ ಪ್ರಶಸ್ತಿ ನೋಡಿದರೆ ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್ 15ಲಕ್ಷ , ಬೆಸ್ಟ್ ರೈಡರ್ ಮತ್ತು ಬೆಸ್ಟ್ ಡಿಫೆಂಡರ್ 10 ಲಕ್ಷ ರೂಪಾಯಿ ಪಡೆಯುತ್ತದೆ. ಮುಂದಿನ ದಿನಗಳಲ್ಲಿ ಕಬ್ಬಡಿಗೆ ಕೂಡ ಕ್ರಿಕೆಟ್ ಮಾದರಿ ಪ್ರೋತ್ಸಾಹ ಸಿಗುವುದರಲ್ಲಿ ಅನುಮಾನವಿಲ್ಲ.