ಈ ಕಾವಿ ಬಣ್ಣದ Ola ಸ್ಕೂಟರ್ ಹೋಳಿ ಹಬ್ಬದ ದಿನ ಮಾತ್ರ ಲಭ್ಯ. ಎಷ್ಟು ಬೆಲೆ? ಖರೀದಿಸಬೇಕಾರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ.
ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಗಗನಕ್ಕೆ ಏರುತ್ತಿರುವಾಗಲೇ ಈ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆ ಬರುತ್ತಿದೆ. ಅದೇ ರೀತಿ ಭಾರತ ಸರಕಾರ ಕೂಡ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಅನೇಕ ರಾಜ್ಯಗಳಲ್ಲಿ ಈ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಲು ಸಬ್ಸಿಡಿ ಕೂಡ ನೀಡುತ್ತಿದೆ. ಅಂದ ಹಾಗೆ OLA ಕೂಡ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಟ್ಟು ದೊಡ್ಡ ಸುದ್ದಿ ಮಾಡಿತ್ತು. ಅದೇ ರೀತಿ ಅದರ ಸೇಲ್ ಕೂಡ ಉತ್ತಮ ಮಟ್ಟದಲ್ಲಿತ್ತು. ಇದೀಗ ಹೋಳಿ ಹಬ್ಬಕ್ಕೆ ola ಕಂಪನಿ ಇನ್ನೊಂದು ಸುದ್ದಿ ನೀಡಿದೆ ಅದೇ ಹೊಸ ಕಲರ್ ನ ಸ್ಕೂಟರ್ ಬಿಡುಗಡೆ ಮಾಡಿದ್ದೂ ಇದು ಕೇವಲ ಹೋಳಿ ದಿನ ಅಂದರೆ ೧೭ ಹಾಗು ೧೮ ರಂದು ಮಾತ್ರ ಜನರ ಖರೀದಿಗೆ ಅವಕಾಶ ಇದ್ದು ಬೇರೆ ಯಾವ ದಿನ ಕೂಡ ಇಲ್ಲ ಎಂದು ಆಫರ್ ನೀಡಿದೆ.
OIa orcher ಅಂದರೆ ಗೋಪಿ ಬಣ್ಣ ಅಥವಾ ಕವಿ ಬಣ್ಣದ ವಿಶೇಷ ಸ್ಕೂಟರ್ ಬಿಡುಗಡೆ ಮಾಡಲಿದೆ. ಈಗಾಗಲೇ OLA S1 ಪ್ರೊ ನಲ್ಲಿ ೧೦ ಬಣ್ಣಗಳ ಸ್ಕೂಟರ್ ಲಭ್ಯವಿದೆ. ಹಾಗೇನೇ ಇದು ಎಲ್ಲ ಸಮಯದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಆದರೆ ಈ ಗೋಪಿ ಬಣ್ಣದ ಸ್ಕೂಟರ್ ಮಾತ್ರ ಲಿಮಿಟೆಡ್ ಆಫರ್ ಆಗಿದ್ದು ಕೇವಲ ೧೭ ಹಾಗು ೧೮ ತಾರೀಕಿನಂದು ಮಾತ್ರ ಲಭ್ಯವಿದೆ. ಅದೇ ಅಲ್ಲದೆ Ola ಫ್ಯೂಚರ್ ಫ್ಯಾಕ್ಟರಿ ಇಂದ S1 ಪ್ರೊ ಗಾಗಿ ಹೊಸ ಆರ್ಡರ್ ಏಪ್ರಿಲ್ ೨೦೨೨ ರಿಂದ ಪ್ರಾರಂಭವಾಗುತ್ತದೆ ಎಂದು ಕೂಡ OLA ಕಂಪನಿ CEO ಘೋಷಣೆ ಮಾಡಿದ್ದಾರೆ.
ಈಗಾಗಲೇ ಲಭ್ಯವಿರುವ S1 ಪ್ರೊ ಸ್ಕೂಟರ್ ೧೦ ಬಣ್ಣದಲ್ಲಿದೆ ಖರೀದಿ ಮಾಡಬಹುದು. ಹೋಳಿ ದಿನ ಸ್ಪೆಷಲ್ ಆಗಿ ಮಾರಾಟವಾಗಲಿರುವ ಸ್ಕೂಟರ್ ಬೆಲೆ ಸುಮಾರು ೧,೧೦,೦೦೦ ದಿಂದ ೧,೩೦,೦೦೦ ರಾದ ವರೆಗೆ ಇರಬಹುದು. ಮಹಾರಾಷ್ಟ್ರದಲ್ಲಿ S1 ಪ್ರೊ ಬೆಲೆ ೧,೨೪,೯೯೯ ರುಪಾಯಿಗೆ ಸಿಗುತ್ತಿದೆ. ಉತ್ತಮ ವಿನ್ಯಾಸ, ಡಿಸೈನ್, ಹಾಗು ಉತ್ತಮ ಕ್ಷಮತೆ ಒಂದಿಗೆ ola ಎಲೆಕ್ಟ್ರಿಕ್ ವೆಹಿಕಲ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ವಿಶ್ವದ ಅತಿ ದೊಡ್ಡ ಮತ್ತು ಅತ್ಯಾಧುನಿಕ 2W ಕಾರ್ಖಾನೆಯಾಗಿದೆ.