ಈ ಒಂದು ಊರಲ್ಲಿ ಯಾವ ಮನೆಗಳಿಗೂ ಬಾಗಿಲು ಇಲ್ಲ. ಈ ಊರಿನಲ್ಲಿ ಒಂದು ಪೊಲೀಸ್ ಸ್ಟೇಷನ್ ಕೂಡ ಇಲ್ಲ, ಯಾವುದು ಆ ಊರು?
ಬದಲಾಗುತ್ತಿರುವ ಜಗತ್ತಿನಲ್ಲಿ ಐಷಾರಾಮಿ ಜೀವನದ ಕಡೆಗೆ ಒಗ್ಗುತ್ತಿರುವ ಜನರೇ ಹೆಚ್ಚು. ತಮಗೆ ಬೇಕು ಬೇಕಾದದ್ದು ಮಾಡಿಕೊಂಡು ಬದುಕುವ ಇವರು ಎಲ್ಲವನ್ನೂ ಮನೆಯಲ್ಲಿ ಕೂಡಿಟ್ಟು ಬೀಗ ಹಾಕಿಕೊಂಡು ತಿರುಗುತ್ತಾರೆ. ವೃದ್ಧಾಪ್ಯದಲ್ಲಿ ಅವರಿಗೆ ತಿನ್ನಲು ಸಿಗುತ್ತದೋ ಇಲ್ಲವೋ ಆದರೂ ಮಾಡಬೇಕು ಎಂಬ ಹಂಬಲ. ಆದರೆ ಭಾರತದ ಈ ಒಂದು ಪ್ರದೇಶದಲ್ಲಿ ಮನೆಯಲ್ಲಿ ಕೂಡಿಟ್ಟು ಬೀಗ ಹಾಕುವುದು ಇರಲಿ ಇಲ್ಲಿ ಮನೆಗಳಿಗೆ ಬಾಗಿಲೇ ಇಲ್ಲ, ಅದಲ್ಲದೆ ಇಲ್ಲಿ ಯಾವುದೇ ಪೊಲೀಸ್ ಸ್ಟೇಷನ್ ಕೂಡ ಇಲ್ಲ.
ವಿಚಿತ್ರ ಎನಿಸಿದರೂ ಸತ್ಯ ಸಂಗತಿ. ಇಷ್ಟೊಂದು ಅನಾಚಾರಗಳು ನಡೆಯುವುದು ನಾವು ದಿನ ನಿತ್ಯಲು ನೋಡುತ್ತೇವೆ. ಹೀಗಿರುವಾಗಲೂ ಪೊಲೀಸ್ ಠಾಣೆ ಇಲ್ಲ ಎಂದಾಗ ವಿಚಿತ್ರ ಎನಿಸುತ್ತದೆ. ಯಾವುದು ಆ ಪ್ರದೇಶ ಬನ್ನಿ ತಿಳಿಯೋಣ. ಈ ಪ್ರದೇಶವನ್ನು ಶನಿ ಶಿಂಗಣಾಪುರ ಎಂದು ಕರೆಯುತ್ತಾರೆ. ಇದು ಮಹಾರಾಷ್ಟ್ರದಲ್ಲಿ ಕಂಡು ಬರುತ್ತದೆ. ಈ ಶಿಂಗಣಾಪುರ ಪ್ರದೇಶದಲ್ಲಿನ ಯಾವ ಮನೆಗಳಿಗೂ ಬಾಗಿಲೇ ಇಟ್ಟಿಲ್ಲ. ಕೇಳುವಾಗ ವಿಚಿತ್ರ ಎನಿಸುತ್ತದೆ. ಆದರೆ ಇದು ಸತ್ಯ ಸಂಗತಿ ಇಲ್ಲಿ ಯಾರ ಮನೆಗೂ ಬಾಗಿಲುಗಳು ಇಲ್ಲ. ಮತ್ತು ಇಲ್ಲಿ ಯಾವುದೇ ರೀತಿಯ ಕಳ್ಳತನ ಪ್ರಕರಣ ನಡೆಯುವುದಿಲ್ಲ.
ಎಲ್ಲಾ ಜನರು ಅಲ್ಲಿನ ದೇವರಿಗೆ ಹೆದರುತ್ತಾರೆ. ಅಲ್ಲಿ ಯಾರಾದರೂ ಅನಾಚಾರ ಎಸಗಿದರೆ ಅವರು ದೇವರ ಕೋಪಕ್ಕೆ ಪಾತ್ರ ರಾಗಬೇಕು ಎಂಬ ಭಯ ಎಲ್ಲರಲ್ಲೂ ಇದೆ. ಇದೆ ಕಾರಣಕ್ಕೆ ಯಾರು ಕೂಡ ಇಲ್ಲಿ ಮನೆಗೆ ಬಾಗಿಲು ಇಟ್ಟಿಲ್ಲ. ಅಷ್ಟೇ ಅಲ್ಲದೆ ಈ ಪ್ರದೇಶದಲ್ಲಿ ಯಾವುದೇ ಪೊಲೀಸ್ ಸ್ಟೇಷನ್ ಗಳು ಕೂಡ ಇಲ್ಲ. ಪೊಲೀಸ್ ಬೇಕಾದುದು ಕ್ರೈಂ ನಡೆದಾಗ ಮಾತ್ರ . ಕ್ರೈಂ ಆಗದೆ ಯಾವ ಪೊಲೀಸ್ ಅವರಿಗೂ ಕೆಲಸ ಇರುವುದಿಲ್ಲ. ಆದರಿಂದ ಇಲ್ಲಿ ಯಾವುದೇ ಪೊಲೀಸ್ ಠಾಣೆ ನಿರ್ಮಿಸುವ ಸಂದರ್ಭ ಬಂದಿಲ್ಲ ಎನ್ನುತ್ತಾರೆ ಹಿರಿಯರು.