ಕರೆಂಟ್ ಬಿಲ್ ಚಿಂತೆ ಇಲ್ಲ. ಮಾರುಕಟ್ಟೆಗೆ ಬಂದಿದೆ ಸೋಲಾರ್ AC. ಇದರ ವಿಶೇಷತೆ ಏನು? ಇದರ ಬೆಲೆ ಎಷ್ಟು?
ಇಂದಿನ ದಿನಗಳಲ್ಲಿ ಒಂದೊಂದು ಹೊಸ ಹೊಸ ಆವಿಷ್ಕಾರಗಳು ಬೇರೆ ಬೇರೆ ಕಂಪನಿ ಗಳಿಂದ ಬರುತ್ತಲೇ ಇವೆ. ಇದನ್ನು ಮಾರುಕಟ್ಟೆಯಲ್ಲಿ ಬಿಡುತ್ತಲೇ ಇದ್ದಾರೆ. ಮುಖ್ಯವಾಗಿ ಈ ಇಲೆಕ್ಟ್ರಾನಿಕ್ ವಸ್ತುಗಳಾದ ಫ್ಯಾನ್, ಏರ್ ಕಂಡೀಶನ್, ಫ್ರಿಡ್ಜ್, ಟಿವಿ ಹಾಗು ವಾಷಿಂಗ್ ಮಷೀನ್ ಗಳಲ್ಲಿ. ಜನರು ಕೂಡ ಹೊಸ ಹೊಸ ಆವಿಷ್ಕಾರಕ್ಕೆ ಮರುಳಾಗಿ ಇದನ್ನ ಖರೀದಿ ಮಾಡುತ್ತಾರೆ. ಕೆಲವು ಉತ್ತಮ ಕಂಪನಿಗಳ ವಸ್ತುಗಳು ಉತ್ತಮವಾಗಿ ಬಹಳ ವರ್ಷ ಬಾಳಿಕೆ ಬರುತ್ತವೆ, ಇನ್ನು ಕೆಲವು ಬೇಗನೆ ಹಾಳಾಗುತ್ತದೆ.
ನಾವು ಏರ್ ಕಂಡೀಶನ್ ಅಂದರೆ AC ಬಗ್ಗೆ ಮಾತಾಡಿದರೆ ಇಂದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ. ಇಂದು ಇದು ಬೇಕೇ ಬೇಕು ಅನ್ನುವ ಸ್ಥಿತಿ ಬಂದೊದಗಿದೆ. ಇದು ಕೊಂಡುಕೊಳ್ಳುವುದು ಸುಲಭ ಆದರೆ ಅದನ್ನು ಖರೀದಿ ಮಾಡಿದ ನಂತರ ಕರೆಂಟ್ ಬಿಲ್ ಬರುವಾಗ ಯಾಕೆ ಖರೀದಿ ಮಾಡಿದೆ ಎನ್ನುವ ಚಿಂತೆ. ಇದೆ ಚಿಂತೆ ದೂರ ಮಾಡಲು ನಾವು ನಿಮಗೆ ಇಂದು ಸೋಲಾರ್ ಮೂಲಕ ಉಪಯೋಗಿಸಬಲ್ಲ AC ಬಗ್ಗೆ ಹೇಳಲಿದ್ದೇವೆ.
ಇಂದು ಮಾರುಕಟ್ಟೆಯಲ್ಲಿ ೧ ಟನ್, ೧.೫ ಟನ್ ಹಾಗು ೨ ಟನ್ ವರೆಗಿನ ಕ್ಯಾಪಾಸಿಟಿ ಯಾ AC ನಮಗೆ ದೊರಕುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಈ AC ಗಳನ್ನೂ ಕೊಂಡುಕೊಳ್ಳಬಹುದು. ವಿದ್ಯುತ್ ಬಿಲ್ ಉಳಿಸುವ ಬಗ್ಗೆ ಹೇಳುವುದಾದರೆ ಈ ಸೋಲಾರ್ ac ಸ್ಪ್ಲಿಟ್ ಅಥವಾ ವಿಂಡೋ ac ಗಳಿಗಿಂತ ೯೦% ಕಡಿಮೆ ವಿದ್ಯುತ್ ಬಳಕೆ ಮಾಡುತ್ತದೆ. ನಾರ್ಮಲ್ AC ಪ್ರತಿ ದಿನಕ್ಕೆ ೨೦ ಯೂನಿಟ್(೧೫-೨೦ ಗಂಟೆ ಬಳಸಿದರೆ) ಹಾಗು ತಿಂಗಳಿಗೆ ೬೦೦ ಯೂನಿಟ್ ಬಳಕೆ ಮಾಡುತ್ತದೆ.
ಅಂದರೆ ತಿಂಗಳಿಗೆ ಈ AC ಬಿಲ್ ಸುಮಾರು ೩೦೦೦-೪೦೦೦ ರೂಪಾಯಿಗಳವರೆಗೆ ಇರಲಿದೆ. ಅದೇ ಸೋಲಾರ್ AC ಬಗ್ಗೆ ಹೇಳುವುದಾದರೆ ನೀವು ಶೆಕೆ ಹಾಗು ಖರ್ಚು ಎರಡರ ಚಿಂತೆ ಕೂಡ ಬಿಡಬಹುದಾಗಿದೆ. ನೀವು ಇದರ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ವಿದ್ಯುತ್ ಬಿಲ್ ಚಿಂತೆಯೇ ಇರುವುದಿಲ್ಲ. ಅಂದರೆ ಒಂದು ಸರಿ ಇನ್ವೆಸ್ಟಮೆಂಟ್ ಹಾಕಿ ಜೀವನ ಪೂರ್ತಿ ವಿದ್ಯುತ್ ಬಿಲ್ ಕಟ್ಟುವ ಬಗ್ಗೆ ಚಿಂತೆನೆ ಮಾಡಬೇಕೆಂದಿಲ್ಲ. ಇಂದು ಅನೇಕ ಕಂಪನಿಗಳು ಈ ಸೋಲಾರ್ AC ಉತ್ಪಾದಿಸುತ್ತಿದೆ. ಎಲ್ಲ ಕಂಪನಿ ಗಳ ac ಬೆಲೆ ಕೂಡ ಸಾಮಾನ್ಯವಾಗಿ ಒಂದೇ ಇರುತ್ತದೆ.

ಸೋಲಾರ್ ಅಲ್ಲದ AC ಹಾಗು ಸೋಲಾರ್ AC ಪಾರ್ಟ್ಸ್ ಕೂಡ ಒಂದೇ ರೀತಿ ಇರುತ್ತದೆ. ಆದರೆ ಸೋಲಾರ್ AC ಬ್ಯಾಟರಿ ಹಾಗು ಸೋಲಾರ್ ಪನ್ನೆಲ್ ಬೇರೆ ಬೇರೆ ಆಗಿರುತ್ತದೆ. ಈ ಸೋಲಾರ್ ಎಸಿ ಸಾಮಾನ್ಯ ಎಸಿ ಗಿಂತ ಸ್ವಲ್ಪ ದುಬಾರಿ ಆಗಿರುತ್ತದೆ. ಆದರೆ ಒಂದು ಬರಿ ಹಣ ಹಾಕಿದರೆ ಕರೆಂಟ್ ಬಿಲ್ಲ ೩೦೦೦-೪೦೦೦ ಬರುವುದು ತಪ್ಪುತ್ತದೆ. ಸೋಲಾರ್ ಎಸಿ ಬೆಲೆ ಬಗ್ಗೆ ಹೇಳುವುದಾದರೆ ೧ ಟನ್ (೧೫೦೦ ವಾಟ್ ಸೋಲಾರ್ ಪ್ಲೇಟ್) ನ ಬೆಲೆ ೯೭,೦೦೦ ರೂಪಾಯಿಗಳು. ೧.೫ ಟನ್ ಎಸಿ ಗೆ ೧.೩೯ ಲಕ್ಷ ಹಾಗು ೨ ಟನ್ ಎಸಿ ಗೆ ೧.೭೯ ಲಕ್ಷ ರೂಪಾಯಿಗಳ ವರೆಗೆ ಇರುತ್ತದೆ. ಇದು ಸ್ವಲ್ಪ ದುಬಾರಿ ಅಂತ ಕಾಣಿಸಿದರು ಕೂಡ ನಿಮಗೆ ವಿದ್ಯುತ್ ಬಿಲ್ ಪಾವತಿ ಮಾಡುವ ತಲೆ ಬಿಸಿ ಇರಲ್ಲ.