5 ವರ್ಷಗಳ ನಂತರ ಮತ್ತೆ 36 ಚೀನೀ ಮೊಬೈಲ್ ಅಪ್ಲಿಕೇಷನ್ ಭಾರತದಲ್ಲಿ ಲಭ್ಯವಾಗುತ್ತಿದೆ. ಟಿಕ್‌ಟಾಕ್(Tiktok) ಕೂಡಾ ಮರಳಲಿದೆಯಾ?
2020 ರಲ್ಲಿ ಭಾರತ ಸರಕಾರ ಟಿಕ್‌ಟಾಕ್ (Tiktok) ಒಳಗೊಂಡಂತೆ ಸುಮಾರು 200 ಕ್ಕೂ ಹೆಚ್ಚಿನ ಅಪ್ಲಿಕೇಶನ್ ಅನ್ನು ನಿಷೇದ ಮಾಡಿತ್ತು. ಇದೆಲ್ಲವೂ ಚೀನಾ ಅಪ್ಲಿಕೇಷನ್‌ಗಳು. ಇದೀಗ 36 ಅಪ್ಲಿಕೇಷನ್ ಗಳು ಮರಳಿ ಭಾರತದಲ್ಲಿ ಲಭ್ಯವಿದೆ. ಜನಪ್ರಿಯ ಅಪ್ಲಿಕೇಷನ್ ಕ್ಸೆಂಡರ್ ಸೇರಿದಂತೆ 36 ಅಪ್ಲಿಕೇಷನ್ ಇದೀಗ ಗೂಗಲ್ ಪ್ಲೇ ಸ್ಟೋರ್ ಇಂದ ಡೌನ್‌ಲೋಡ್ ಮಾಡಬಹುದು. ಈ ಅಪ್ಲಿಕೇಷನ್ ಸ್ವಲ್ಪ ಬದಲಾವಣೆಗಳೊಂದಿಗೆ ಮಾರುಕಟ್ಟೆ ಗೆ ಬಂದಿದೆ. ಬ್ರಾಂಡ್ ಹೆಸರು, ಮಾಲಿಕರು ಕೂಡಾ ಇವುಗಳದ್ದು ಬದಲಾಗಿದೆ. ಇನ್ನು ಕೆಲ ಅಪ್ಲಿಕೇಷನ್ ಭಾರತದ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಾನೂನುಬದ್ದವಾಗಿ ಮಾರುಕಟ್ಟೆ ಗೆ ಬಂದಿದೆ. ಆದರೆ ಟಿಕ್‌ಟಾಕ್ ಮರಳಿ ಬಂದಿಲ್ಲ.
ಇದೀಗ ಮರಳಿರುವ 36 ಚೀನೀ ಅಪ್ಲಿಕೇಷನ್ ನಲ್ಲಿ Xender, Mango TV, Youku, Taobao ಹಾಗು ಡೇಟಿಂಗ್ ಆಪ್ Tantan ಕೂಡಿದೆ. ಮೇಲೆ ಹೇಳಿದ ಹಾಗೆನೇ ಇಲ್ಲಿ ಕೆಲವು ಅಪ್ಲಿಕೇಷನ್ ಗಳು ಬ್ರಾಮನಡ್ ಹಾಗು ಮಾಲಿಕತ್ವದ ಬದಲಾವಣೆ ಮೇಲೆ ಹಿಂದಿರುಗಿದೆ. ಇನ್ನು ಕೆಲವು ಅಪ್ಲಿಕೇಶನ್ ಗಳು ಭಾರತದ ಕಾನೂನಿಗೆ ಬದ್ದವಾಗಿ ಬಂದಿದೆ. ಚೀನೀ ಸ್ಟ್ರೀಮಿಂಗ್ Mango TV ಯಾವುದೇ ಬದಲಾವಣೆಗಳಿಲ್ಲದೆ ನೇರವಾಗಿ ಬಂದಿದೆ. ಇನ್ನು ಯೂಟ್ಯೂಬ್ ನಂತೆ ಕಾಪಿ ಆಗಿರುವ ಚೀನಾದ ದೊಡ್ಡ ವೀಡಿಯೋ ಸ್ಟ್ರೀಮಿಂಗ್ ಅಪ್ಲಿಕೇಷನ್ ಯೂಕು ಕೂಡಾ ಲಭ್ಯವಿದೆ.

ಇನ್ನು ಬಹುದೊಡ್ಡ ಸುದ್ದಿ ಮಾಡಿದ್ದ ಪಬ್‌ಜಿ ರಿಲಯನ್ಸ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಇದರಂತೆ ಭಾರತದ ಡೇಟಾ ಭಾರತದಲ್ಲಿ ಯೇ ಉಳಿಯುವಂತೆ ನೋಡಿಕೊಳ್ಳಲಾಗಿದೆ. 2020 ರಲ್ಲಿ ನಿಷೇಧಿಸಲ್ಪಟ್ಟ PUBG ಮೊಬೈಲ್, ದಕ್ಷಿಣ ಕೊರಿಯಾದ ಕ್ರಾಪ್ಟನ್ ಕಂಪೆನಿಯ ಬ್ಯಾನರ್ ನಲ್ಲಿ ಬ್ಯಾಟಲ್‌ಗ್ರೌಂಡ್ ಮೊಬೈಲ್ ಇಂಡಿಯಾ ಹೆಸರಿನಲ್ಲಿ ೨೦೨೩ ರಲ್ಲಿ ಮರಳಿತ್ತು. ಇದೀಗ ಬಂದಿರುವ ಅಪ್ಲಿಕೇಷನ್ ನಂತರ ಬ್ಯಾನ್ ಮಾಡಿರುವ 200 ಕ್ಕೂ ಹೆಚ್ಚಿನ ಚೀನೀ ಅಪ್ಲಿಕೇಷನ್ ಗಳು ಭಾರತಕ್ಕೆ ಮರಳಬಹುದೇ ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ. ಅದರಲ್ಲೂ ಜನಪ್ರಿಯ ಟಿಕ್‌ಟಾಕ್ ಮರಳುವುದೇ ಎಂದು ಜನರು ಕಾಯುತ್ತಿದ್ದಾರೆ.