Headlines

Maharashtra Election 2024: ಮಹಾರಾಷ್ಟ್ರ ಯಾರ ತೆಕ್ಕೆಗೆ? ಸಟ್ಟಾ ಬಜಾರ್ ಹೇಳೋದೇನು?

ಮಹಾರಾಷ್ಟ್ರ ವಿಧಾನಸಭೆಯ ೨೮೮ ಕ್ಷೇತ್ರಗಳ ವಿಧಾನಸಭಾ ಚುನಾವಣ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ ನವೆಂಬರ್ ೨೩ಕ್ಕೆ ಮಹಾರಾಷ್ಟ್ರ ದಲ್ಲಿ ಯಾರ ಮೈತ್ರಿ ಕಮಾಲ್ ಮಾಡಲಿದೆ ಎಂದು ತಿಳಿಯಲಿದೆ.

ಮತದಾನ ಎಂದರೆನೆ ಜನರಲ್ಲಿ ಏನೋ ಒಂದು ಉತ್ಸಾಹ ಆದರೆ ಮತದಾನದ ನಂತರ ನಡೆಯುವ ಮತ ಎಣಿಕೆಗೆ ಜನರಲ್ಲಿ ಇರುವ ಕೌತುಕ ಇನ್ನೂ ಹೆಚ್ಚಿರುತ್ತದೆ. ಮತದಾನದ ನಂತರ ಹಲವು ನ್ಯೂಸ್ ಚಾನಲ್ ಹಾಗು ಏಜೆನ್ಸಿಗಳು ಮತಗಟ್ಟೆ ಸಮೀಕ್ಷೆ ನಡೆಸಿದೆ. ಇವರುಗಳು ಹೇಳುವ ಸಮೀಕ್ಷೆ ಗೆ ಎಕ್ಸಿಟ್ ಪೋಲ್ ಎಂದು ಕರೆಯುತ್ತಾರೆ. ಎಲ್ಲಾ ಸಮೀಕ್ಷೆಗಳು ಬಿಜೆಪಿ ಹಾಗು ಮಿತ್ರಪಕ್ಷಗಳು ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ.

ಆದರೆ ಎಲ್ಲಾಕ್ಕಿಂತ ಮುಖ್ಯವಾಗಿ ಇದೀಗ ಜನರು ಸಟ್ಟಾ ಬಜಾರ್ ಮೇಲೆ ಹೆಚ್ಚಿನ ಕಣ್ಣಿಟ್ಟಿದ್ದಾರೆ. ಕಾರಣ ಇವರು ಇಲ್ಲಿ ತನಕ ಹೇಳಿದ ಎಲ್ಲಾ ಭವಿಷ್ಯಗಳು ನಿಜವಾಗಿದೆ. ಲೋಕಸಭೆ ಚುನಾವಣೆ‌ ಇಂದ ಹಿಡಿದು ಇತ್ತಿಚೆಗೆ ನಡೆದ ಹರಿಯಾಣ ಹಾಗು ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಕೂಡಾ ಇವರ ಸಮೀಕ್ಷೆ ಫಲಿತಾಂಶಕ್ಕೆ ಬಹಳ ಹತ್ತಿರವಾಗಿತ್ತು.

ಚುನಾವಣೆ ಮುಗಿದ ದಿನ ಮಹಾಯುತಿ ಒಕ್ಕೂಟಕ್ಕೆ ಅಧಿಕ ಹಾಗು ಅಭೂತಪೂರ್ವ ಗೆಲುವು ಸಿಗಲಿದೆ ಎಂದು ಹೇಳಿದೆ. ಸರಳ ಬಹುಮತಕ್ಕೆ ಕೇವಲ ೧೪೫ ಸೀಟುಗಳ ಅವಶ್ಯಕತೆ ಇದೆ. ಸ್ಪರ್ಧೆ ಬಹಳ ಬಿರುಸಾಗಲಿದೆ ಹಾಗೆನೆ ಸರಕಾರ ರಚನೆಗೆ ಬೇಕಾದ ಸೀಟುಗಳು ಬಿಜೆಪಿ ಮೈತ್ರಿ ಗೆ ಸಿಗಲಿದೆ‌ ಎಂದು ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್ ಹೇಳಿದೆ.

Leave a Reply

Your email address will not be published. Required fields are marked *