Headlines

Rishab Pant :ರಿಷಬ್ ಪಂತ್ ರನ್ನ ತಂಡದಿಂದ ಕೈಬಿಟ್ಟ ಡೆಲ್ಲಿ ಕ್ಯಾಪಿಟಲ್ಸ್. ಕಾರಣ ಬಿಚ್ಚಿಟ್ಟ ಸುನಿಲ್ ಗವಾಸ್ಕರ್.

Rishab Pant

IPL 2025 ಗೋಸ್ಕರ ಫ್ರಾಂಚೈಸ್ ಗಳು ತಾವುಗಳು ರೆಟೈನ್ ಮಾಡಿಕೊಳ್ಳುವ ಆಟಗಾರರ ಲಿಸ್ಟ್ ಈಗಾಗಲೇ ಜಾರಿ ಮಾಡಿದೆ. ಆದರೆ ಡೆಲಿ ಕ್ಯಾಪಿಟಲ್ ನಿರ್ಧಾರ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ತಂಡದ ನಾಯಕ ರಿಷಬ್ ಪಂತ್ (Rishab Pant) ರನ್ನು ಉಳಿಸಿಕೊಳ್ಳದೆ ಕೈಬಿಟ್ಟಿದೆ. ಇವರು ಇನ್ನು ಐಪಿಎಲ್ ಮೆಗಾ ಆಕ್ಷನ್ (IPL Mega Auction) ಅಲ್ಲಿ ಪಾಲ್ಗೊಳ್ಳಲಿದ್ದಾರೆ. ಅನೇಕ ತಂಡಗಳು ಇವರನ್ನ ತಮ್ಮ ತಂಡಗಳಿಗೆ ಸೇರಿಸಿಕೊಳ್ಳಲು ಸಿದ್ಧವಾಗಿದೆ.

ಪಂತ್ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಾಗಲಿದ್ದಾರೆಯೇ?
ಐಪಿಎಲ್ (IPL) ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಆಟಗಾರ ಎನ್ನುವ ರೆಕಾರ್ಡ್ ಮಿಟಿಚೆಲ್ ಸ್ಟಾರ್ಕ್ (Mitchel Starc) ಹೆಸರಲ್ಲಿದೆ. ೨೦೨೪ ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Night Riders) ಬರೋಬ್ಬರಿ ೨೪.೭೫ ಕೋಟಿ ನೀಡಿ ಖರೀದಿ ಮಾಡಿತ್ತು. ಆದರೆ ಈ ಬಾರಿ ರಿಷಬ್ ಪಂತ್ (Rishab Pant) ಈ ದಾಖಲೆ ಮುರಿಯಬಲ್ಲರು ಎಂದು ಅನೇಕರು ಹೇಳುತ್ತಿದ್ದಾರೆ. ಅದೇ ರೀತಿ ಸುನಿಲ್ ಗವಾಸ್ಕರ್ ಕೂಡ ಡೆಲಿ ಪಂತ್ ರನ್ನು ಖರೀದಿ ಮಾಡಬಹುದು ಎಂದು ಹೇಳಿದ್ದಾರೆ.

Rishab Pant

ಸ್ಟಾರ್ ಸ್ಪೋರ್ಟ್ಸ್ (Star Sports) ನಲ್ಲಿ ಮಾತಾಡುತ್ತ ಐಪಿಎಲ್ ಆಕ್ಷನ್ ಡೈನಾಮಿಕ್ ಬಹಳ ವಿಭಿನ್ನ ವಾಗಿದೆ. ರಿಷಬ್ ಪಂತ್ ಹಾಗು ಡೆಲಿ ನಡುವೆ ಸಂಭಾವನೆ ಬಗ್ಗೆ ಒಮ್ಮತ ಮೂಡದೇ ಇರಬಹುದು ಅದಕ್ಕೆ ಡೆಲಿ ಕೈಬಿಟ್ಟಿರಬೇಕು. ನನ್ನ ಪ್ರಕಾರ ಡೆಲ್ಲಿ ಗೆ ಪಂತ್ ಅವಶ್ಯಕತೆ ಇದೆ. ಪಂತ್ ರನ್ನ ಕೈಬಿಡುವುದಾದರೆ ಅವರು ಇನ್ನೊಬ್ಬ ನಾಯಕನನ್ನು ಹುಡುಕಲೇಬೇಕಾದ ಅವಶ್ಯಕತೆ ಇದೆ. ಎಂದು ಗವಾಸ್ಕರ್ (Sunil Gavaskar) ಅಭಿಪ್ರಾಯಪಟ್ಟಿದ್ದಾರೆ.

ಕೆ ಎಲ್ ರಾಹುಲ್ (K L Rahul) ಮೇಲೆ ಎಲ್ಲರ ಕಣ್ಣು: 2025 ರ ಆಕ್ಷನ್ ನಲ್ಲಿ ಎಲ್ಲರ ಗಮನ ಕೆ ಎಲ್ ರಾಹುಲ್ ಮೇಲೆ ಇದೆ. ಇವರಿಗೋಸ್ಕರ ದೊಡ್ಡ ಮುಖಾಮುಖಿ ಇರಲಿದೆ. ಗವಾಸ್ಕರ್ ಪ್ರಕಾರ RCB, CSK ಹಾಗು ಸನ್ ರೈಸರ್ಸ್ ಹೈದೆರಾಬಾದ್ ತಂಡಗಳು ಹಣಾಹಣಿ ನಡೆಸಲಿದೆ. ಆದರೆ RCB ರಾಹುಲ್ ಅವರ ಹೋಂ ಟೌನ್ ಆದ್ದರಿಂದ ಅಲ್ಲಿಗೆ ಹೋಗುವ ಸಾಧ್ಯತೆ ಬಹಳ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Leave a Reply

Your email address will not be published. Required fields are marked *