ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿರುವ ಲೈಗರ್ ಸಿನಿಮಾ ಕುರಿತು ಕೇಳಿದಾಗ ನಟಿ ರಿಯಾಕ್ಷನ್ ಹೇಗಿತ್ತು ಗೊತ್ತೇ?? ಮೆರೆಯುತ್ತಿದ್ದವರು ಹೀಗ್ಯಾಕೆ ಆದರು

4,726

ನಟ ವಿಜಯ್ ದೇವರಕೊಂಡ ನಾಯಕನಾಗಿ, ಬಾಲಿವುಡ್ ನ ಖ್ಯಾತ ನಟಿ ಅನನ್ಯ ಪಾಂಡೆ ನಾಯಕಿಯಾಗಿ ಅಭಿನಯಿಸಿ, ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಧ್ ನಿರ್ದೇಶಿಸಿ, ನಟಿ ಚಾರ್ಮಿ ಕೌರ್ ನಿರ್ಮಾಣ ಮಾಡಿದ ಸಿನಿಮಾ ಲೈಗರ್ ಆಗಸ್ಟ್ 25ರಂದು ತೆರೆಕಂಡಿದೆ. ಸಿನಿಮಾಗೆ ಎಲ್ಲೆಡೆ ನೆಗಟಿವ್ ರಿವ್ಯೂ ಬರುತ್ತಿದ್ದು, ಈಗಾಗಲೇ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಗ್ಗಾಮುಗ್ಗಾ ಸೋಲನ್ನು ಕಂಡಿದೆ. ಲೈಗರ್ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಹಿಂದಿಯಲ್ಲಿ ಕರಣ್ ಜೋಹರ್ ಈ ಸಿನಿಮಾ ಪ್ರೆಸೆಂಟ್ ಮಾಡಿದ್ದಾರೆ.

ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ, ಹೆಚ್ಚು ಸ್ಕ್ರೀನ್ಸ್ ಗಳಲ್ಲಿ ಲೈಗರ್ ಸಿನಿಮಾ ತೆರೆಕಂಡಿತ್ತು, ಆದರೆ ಮೊದಲ ದಿನವೇ ಸಿನಿಮಾ ಬಗ್ಗೆ ಎಲ್ಲೆಡೆ ನೆಗಟಿವ್ ರಿವ್ಯೂಗಳೇ ಕೇಳಿಬರುತ್ತಿವೆ. ಹಲವು ಕಡೆಗಳಲ್ಲಿ ಶೋಗಳು ಸಹ ಕ್ಯಾನ್ಸಲ್ ಆಗಿದೆ. ಸಿನಿಮಾದ ಕಥೆ ಚೆನ್ನಾಗಿಲ್ಲ ಎನ್ನುತ್ತಿದ್ದಾರೆ ಸಿನಿಪ್ರಿಯರು. ಈ ಸಿನಿಮಾಗಾಗಿ ವಿಜಯ್ ದೇವರಕೊಂಡ, ಅನನ್ಯ ಪಾಂಡೆ ಹಾಗೂ ನಿರ್ದೇಶಕರು ಬಹಳ ಶ್ರಮಪಟ್ಟು ಸಿನಿಮಾ ಪ್ರೊಮೋಟ್ ಮಾಡಿದ್ದರು. ಆದರೆ ಸಿನಿಮಾ ಮುಗ್ಗರಿಸಿ ಬಿದ್ದಿದೆ.

ಇದೀಗ ಅನನ್ಯ ಪಾಂಡೆ ಅವರು ಏರ್ ಪೋರ್ಟ್ ನಲ್ಲಿ ನಡೆದು ಬರುವಾಗ, ಪಾಪಾರಾಜಿಗಳ ಕಣ್ಣಿಗೆ ಬಿದ್ದಿದ್ದು, ಅವರ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ, ಬಿಳಿ ಬಣ್ಣದ ಸಿಂಪಲ್ ಉಡುಗೆಯಲ್ಲಿ ಕಾಣಿಸಿಕೊಂಡರು ಅನನ್ಯ. ಆ ವೇಳೆ, ಪತ್ರಕರ್ತರು ಲೈಗರ್ ಎಂದು ಹೇಳಿದ್ದು, ಲೈಗರ್ yeah..ಎಂದು ಹೇಳುತ್ತಾ, ಹೋಗಿದ್ದಾರೆ ಅನನ್ಯ, ಸಿನಿಮಾ ಸೋತಿರುವ ಹಾಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅನನ್ಯ ನೀಡಿದ ಈ ಪ್ರತಿಕ್ರಿಯೆ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ನೀವು ಸಹ ಈ ವಿಡಿಯೋ ನೋಡಿ..

Leave A Reply

Your email address will not be published.