ಕೊಹ್ಲಿ ನಾಯಕತ್ವದಲ್ಲಿ ಏಷ್ಯಾ ಕಪ್ ಸೋತಾಗ ಕೊಹ್ಲಿ ಕಾರಣ ಎಂದಿದ್ದರು, ಆದರೆ ಈಗ?? ಆಕಾಶ ಚೋಪ್ರಾ ಖಡಕ್ ಆಗಿ ಹೇಳಿದ್ದೇನು ಗೊತ್ತೇ??
ಕಳೆದ ವರ್ಷ ಯುಎಇ ನಲ್ಲಿ ನಡೆದ ಐಸಿಸಿ ಟಿ20 ವರ್ಲ್ಡ್ ಕಪ್ ನಲ್ಲಿ ಭಾರತ ತಂಡ ಸೋಲು ಕಂಡಿತ್ತು, ಪಾಕಿಸ್ತಾನ್ ಹಾಗೂ ನ್ಯೂಜಿಲೆಂಡ್ ತಂಡದ ವಿರುದ್ಧ ಸೋತ ಭಾರತ ತಂಡ, ಸೊಪ್ಪರ್ 12 ಹಂತದಲ್ಲಿ ವಿಶ್ವಕಪ್ ಇಂದ ಹೊರಬಂದಿತ್ತು. ಆ ಸಮಯದಲ್ಲಿ ವಿರಾಟ್ ಕೋಹ್ಲಿ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಲಾಯಿತು. ವಿರಾಟ್ ಕೋಹ್ಲಿ ಅವರನ್ನೇ ಸೋಲಿಗೆ ಪರೋಕ್ಷ ಕಾರಣವನ್ನಾಗಿ ಮಾಡಲಾಯಿತು. ಕಳೆದ ವರ್ಷ ವಿಶ್ವಕಪ್ ಸೋಲಿನ ಬಳಿಕ ವಿರಾಟ್ ಕೋಹ್ಲಿ ಅವರು ಕ್ಯಾಪ್ಟನ್ಸಿಯಿಂದ ಹೊರಬಂದರು. ನಂತರ ರೋಹಿತ್ ಶರ್ಮಾ ಅವರು ಕ್ಯಾಪ್ಟನ್ಸಿ ವಹಿಸಿಕೊಂಡರು.
ಆದರೆ ಈಗ ಏಷ್ಯಾಕಪ್ ಪಂದ್ಯದಲ್ಲಿ ಭಾರತ ತಂಡ ಸೋತಿದ್ದು, ಕಳೆದ ವರ್ಷ ವಿರಾಟ್ ಕೋಹ್ಲಿ ಅವರನ್ನು ಹೊಣೆ ಮಾಡಿದ್ದರ ಬಗ್ಗೆ ಆಕಾಶ್ ಚೋಪ್ರಾ ಅವರು ಮಾತನಾಡಿದ್ದು. ಖಡಕ್ ಉತ್ತರ ನೀಡಿದ್ದಾರೆ, “ಕಳೆದ ಬಾರಿ ವಿಶ್ವಕಪ್ ಸೋತಾಗ, ವಿರಾಟ್ ಕೋಹ್ಲಿ ಅವರ ಕ್ಯಾಪ್ಟನ್ಸಿ ಕಾರಣ ನೀಡಿ, ಅವರು ಕ್ಯಾಪ್ಟನಿಯಿಂದ ಹೊರಬರಬೇಕು ಎಂದು ಹಲವರು ಹೇಳಿದ್ದರು. ಈಗ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಏಷ್ಯಾಕಪ್ ಸೋತಿದೆ. ಇಲ್ಲಿ ಕ್ಯಾಪ್ಟನ್ಸಿ ಕಾರಣವಲ್ಲ. ತಂಡದ ಆಯ್ಕೆಯಲ್ಲಿ ಸಮಸ್ಯೆ ಇದೆ..” ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಭಾರತ ತಂಡ ಆಯ್ಕೆಯ ವಿಧಾನದಲ್ಲೇ ಕೊರತೆ ಇದೆ. ಇಲ್ಲಿ ವಿರೋಧ ಮಾಡುವುದನ್ನು ಬಿಟ್ಟು ಬದಲಾವಣೆ ಮಾಡಬೇಕು.

ಶ್ರೀಲಂಕಾ ಮತ್ತು ಪಾಕಿಸ್ತಾನ್ ತಂಡ ಒಂದು ಬದಲಾವಣೆ ಮಾಡಿ, ಫೈನಲ್ಸ್ ನಲ್ಲಿ ಉಳಿದುಕೊಂಡಿದ್ದಾರೆ.. ಎಂದು ಕೂಡ ಆಕಾಶ್ ಚೋಪ್ರಾ ಹೇಳಿದ್ದಾರೆ. ಕೆ.ಎಲ್.ರಾಹುಲ್ ಅವರು ಇಂಜುರಿಗೆ ಒಳಗಾದಾಗ, ಅವರ ಬದಲಾಗಿ ಓಪನರ್ ಸ್ಥಾನಕ್ಕೆ ಬೇರೆ ಆಟಗಾರರನ್ನು ಆಡಿಸಿ ಪ್ರಯೋಗ ಮಾಡಲಾಗಿತ್ತು. ದಿನೇಶ್ ಕಾರ್ತಿಕ್ ಅವರನ್ನು ಫಿನಿಷರ್ ಆಗಿ ಬೆಳೆಸಿದ ಬಳಿಕ ಅವರನ್ನು ಸಹ ಹೆಚ್ಚಾಗಿ ಬೆಳೆಸಿಕೊಳ್ಳಲಿಲ್ಲ. ರವೀಂದ್ರ ಜಡೇಜಾ ಅವರ ಬದಲಾಗಿ ದೀಪಕ್ ಹೂಡಾ ಅವರನ್ನು ಆಲ್ ರೌಂಡರ್ ಆಗಿ ಆಯ್ಕೆ ಮಾಡಿ, ಅವರಿಗೆ ಬೌಲಿಂಗ್ ಮಾಡುವ ಅವಕಾಶ ಕೊಡಲಿಲ್ಲ. ದೀಪಕ್ ಹೂಡಾ ಅವರು ಐರ್ಲೆಂಡ್ ವಿರುದ್ಧ ಸೆಂಚುರಿ ಭಾರಿಸಿದ ಬಳಿಕ, ಅವರ ಕ್ರಮಾಂಕವನ್ನು ಕಡಿಮೆ ಮಾಡಲಾಯಿತು. ಈ ಎಲ್ಲಾ ಸಮಸ್ಯೆಗಳನ್ನು ಭಾರತ ಸರಿ ಮಾಡಿಕೊಳ್ಳಬೇಕು.