ಇಷ್ಟು ದಿನ ಸೈಲೆಂಟ್ ಆಗಿ ಇದ್ದ ಅಜರುದ್ದೀನ್, ಇದ್ದಕ್ಕಿದ್ದ ಹಾಗೆ ವಿಶ್ವಕಪ್ ತಂಡ ಸರಿಯಿಲ್ಲ ಎಂದದ್ದು ಯಾಕೆ ಗೊತ್ತೇ?? ಯಾರು ಇರಬೇಕಾಗಿ ಇತ್ತಂತೆ ಗೊತ್ತೇ?

305

ಸೆಪ್ಟೆಂಬರ್ 12ರಂದು ಬಿಸಿಸಿಐ ಟಿ20 ವಿಶ್ವಕಪ್ ಗೆ 15 ಸದಸ್ಯರ ತಂಡ ಹಾಗೂ 4 ಹೆಚ್ಚುವರಿ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅನುಭವಿ ಆಟಗಾರ ಮೊಹಮ್ಮದ್ ಶಮಿ ಅವರನ್ನು ತಂಡದಲ್ಲಿ ಆಯ್ಕೆ ಮಾಡಿಕೊಳ್ಳದೆ ಅವರನ್ನು ಹೆಚ್ಚುವರಿ ಆಟಗಾರರ ಪಟ್ಟಿಯಲ್ಲಿ ಇಟ್ಟಿರುವುದು ಆಶ್ಚರ್ಯ ತಂದಿದೆ. ಇವರಷ್ಟೇ ಅಲ್ಲದೆ ಶ್ರೇಯಸ್ ಅಯ್ಯರ್ ಅವರನ್ನು ಸಹ ತಂಡದ ಹೆಚ್ಚುವರಿ ಆಟಗಾರರ ಪಟ್ಟಿಯಲ್ಲಿ ಇರಿಸಲಾಗಿದೆ. ಇದರ ಬಗ್ಗೆ ಈಗ ಅಜರುದ್ಧಿನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ತಂಡದ ಮಾಜಿ ಕ್ಯಾಪ್ಟನ್ ಅಜರುದ್ಧಿನ್ ಅವರು ಮೂರು ಬಾರಿ ವಿಶ್ವಕಪ್ ತಂಡಕ್ಕೆ ಕ್ಯಾಪ್ಟನ್ ಆಗಿದ್ದವರು, ಇದೀಗ ಅವರು ಬಿಸಿಸಿಐ ವಿಶ್ವಕಪ್ ಗೆ ಸೆಲೆಕ್ಟ್ ಮಾಡಿರುವ ತಂಡ ಸರಿ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಜರುದ್ಧಿನ್ ಅವರು ಹೇಳಿರುವ ಪ್ರಕಾರ ಮೊಹಮ್ಮದ್ ಶಮಿ ಅವರನ್ನು ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಪ್ರಮುಖ ತಂಡದಿಂದ ಹೊರಗೆ ಇಟ್ಟಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದ್ದಾರೆ. ಭಾರತ ತಂಡದಲ್ಲಿ ಒಂದು ವೇಳೆ ಆಟಗಾರರ ಸಮಸ್ಯೆ ಎದುರಾದರೆ ಮಾತ್ರ ಇವರಿಬ್ಬರಿಗೆ ಅವಕಾಶ ಸಿಗಲಿದೆ.

ಮೊಹಮ್ಮದ್ ಶಮಿ ಅವರು ಕಳೆದ ವರ್ಷ ವರ್ಲ್ಡ್ ಕಪ್ ಬಳಿಕ ಭಾರತದ ಪರವಾಗಿ ಇನ್ಯಾವುದು ಪಂದ್ಯವನ್ನಾಡಿಲ್ಲ, ಅಷ್ಟೇ ಅಲ್ಲದೆ, ಭಾರತದ ಪರವಾಗಿ ಆಡಿದ ಕಳೆದ ಪಂದ್ಯದಲ್ಲಿ ಶಮಿ ಅವರು ಒಳ್ಳೆಯ ಪ್ರದರ್ಶನ ನೀಡದ ಕಾರಣ ಅವರನ್ನು ಸೆಲೆಕ್ಟ್ ಮಾಡಿಲ್ಲ ಎನ್ನಲಾಗಿದೆ. ಆದರೆ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ಸರಣಿಯಲ್ಲಿ ಆಡುವ ಅವಕಾಶ ಮೊಹಮ್ಮದ್ ಶಮಿ ಅವರಿಗೆ ಸಿಕ್ಕಿದೆ. ಇನ್ನು ಶ್ರೇಯಸ್ ಅಯ್ಯರ್ ಅವರು ಸಹ ಹಿಂದಿನ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡುತ್ತಿದ್ದರು. ಹಾಗಾಗಿ ಅವರನ್ನು ಹೆಚ್ಚುವರಿ ಆಟಗಾರರ ಪಟ್ಟಿಯಲ್ಲಿ ಇಡಲಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.