ಪುರುಷರಿಗಾಗಲಿ ಅಥವಾ ಮಹಿಳೆಯರಿಗಾಗಲಿ ಜುಟ್ಟು ಉದುರುತ್ತಿದೆ ಎಂದರೆ, ಈ ಮನೆಮದ್ದು ಟ್ರೈ ಮಾಡಿ. ಕೂದಲು ಉದುರುವುದು ನಿಲ್ಲುತ್ತದೆ. ಏನು ಮಾಡಬೇಕು ಗೊತ್ತೇ??
ಇತ್ತೀಚಿನ ದಿನಗಳಲ್ಲಿ ಹೇರ್ ಫಾಲ್ ಸಮಸ್ಯೆಯಿಂದ ಹಲವು ಜನ4ಉ ಬಳಲುತ್ತಿದ್ದಾರೆ. ಕೂದಲಿಗೆ ಎಷ್ಟೇ ಆರೈಕೆ ಮಾಡಿದರು ಸಹ ಕೂದಲು ಉದುರುವ ಸಮಸ್ಯೆ ಕಡಿಮೆ ಆಗುವುದಿಲ್ಲ. ಕೆಲವರು ಎಷ್ಟೇ ಎಚ್ಚರಿಕೆ ವಹಿಸಿ ಕೂದಲಿನ ಆರೈಕೆ ಮಾಡಿದರು ಸಹ, ಕೂದಲು ಉದುರುವಿಕೆ ಕಡಿಮೆ ಆಗುವುದಿಲ್ಲ. ಕೂದಲು ಉದುರುವ ಸಮಸ್ಯೆ ಇರುವವರು, ನೈಸರ್ಗಿಕವಾಗಿ ಒಂದು ಮಾಸ್ಕ್ ತಯಾರಿಸಿ ಇದನ್ನು ಬಳಸುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆ ಆಗುತ್ತದೆ, ಈ ಸಲಹೆಯನ್ನು ವೈದ್ಯರು ಸಹ ನೀಡಿದ್ದಾರೆ. ಕೂದಲನ್ನು ರಕ್ಷಿಸಿ, ಉದುರುವಿಕೆ ಕಡಿಮೆ ಮಾಡಲು ಹೇರ್ ಮಾಸ್ಕ್ ಗಳನ್ನು ತಪ್ಪದೇ ಟ್ರೈ ಮಾಡಿ.
ಹೆಚ್ಚಿನ ಹಣ ಖರ್ಚು ಮಾಡಿ, ಕೆಮಿಕಲ್ ಇಂದ ಮಾಡಲ್ಪಟ್ಟಿರುವ ಹೇರ್ ಪ್ಯಾಕ್ ಗಳನ್ನು ಹಾಕಿಕೊಳ್ಳುವ ಬದಲು ಮನೆಯಲ್ಲೇ ಸಿಗುವ ವಸ್ತುಗಳಿಂದ ನೈಸರ್ಗಿಕವಾಗಿ ಹೇರ್ ಪ್ಯಾಕ್ ಮಾಡಿ ಅವುಗಳನ್ನು ಬಳಸುವುದು ಬಹಳ ಒಳ್ಳೆಯದು. ಅವಕಾಡೊ ಮತ್ತು ಬಾಳೆಹಣ್ಣು ಈ ಎರಡು ಕೂಡ ಪ್ರೊಟೀನ್ ಅಂಶ ಒಳಗೊಂಡಿರುವ ಹಣ್ಣುಗಳು, ಇವುಗಳಿಂದ ಕೂದಲು ಬೆಳೆಯುವ ಪೋಷಕಾಂಶ ಸಿಗುತ್ತದೆ, ಹಾಗೂ ಕೂದಲಿನ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಇದನ್ನು ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಅರ್ಧ ಅವಕಾಡೊ ಅನ್ನು ಬಾಳೆಹಣ್ಣಿನ ಜೊತೆಗೆ ನಯವಾಗಿ ಪೇಸ್ಟ್ ಮಾಡಿ, ಈ ಮಿಶ್ರಣವನ್ನು ಕೂದಲಿನ ತುದಿಯಿಂದ, ಬೇರುಗಳಿಗೆ ಹಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬೆಚ್ಚಗಿರುವ ನೀರಿನಲ್ಲಿ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆ ಆಗುತ್ತದೆ.

ಇದಷ್ಟೇ ಅಲ್ಲದೆ, ದಾಸವಾಳದ ಹೂವುಗಳು ಮತ್ತು ಎಲೆಗಳಲ್ಲಿ ಆಂಟಿ ಆಕ್ಸಿಡಂಟ್ ಅಂಶಗಳು ಇರುತ್ತದೆ, ಹಾಗೂ ದೇಹದ ಕಣಗಳ ಉತ್ಪಾದನೆಗೆ ಉತ್ತೇಜನ ನೀಡುತ್ತದೆ. ಕೂದಲು ಉದ್ದವಾಗಿ ಹಾಗೂ ದಪ್ಪವಾಗಿ ಬೆಳೆಯಲು ಸಹಾಯ ಸಹ ಮಾಡುತ್ತದೆ. ದಾಸವಾಳದ ಗಿಡದಿಂದ ಕೆಲವು ಹೂವುಗಳನ್ನು ತೆಗೆದುಕೊಂಡು ಅವುಗಳನ್ನು ನೀರಿನಲ್ಲಿ ಕುದಿಸಿ, ನಂತರ ಆ ರಸವನ್ನು ತೆಗೆದುಕೊಂಡು ನಿಮ್ಮ ಕೂದಲಿಗೆ ಹಚ್ಚಿ, 15 ನಿಮಿಷಗಳ ಕಾಲ ಬಿಟ್ಟು ನಂತರ ನಿಮ್ಮ ಕೂದಲನ್ನು ತಣ್ಣೀರಿನಲ್ಲಿ ತೊಳೆಯಿರಿ. ಕ್ಯಾಸ್ಟರ್ ಆಯಿಲ್ ಸಹ ಕೂದಲಿನ ಬೆಳವಣಿಗೆಗೆ ತುಂಬಾ ಒಳ್ಳೆಯದು, ಇದು ಕೂದಲನ್ನು ಚೆನ್ನಾಗಿ moisturize ಮಾಡುತ್ತದೆ. ಇದರಲ್ಲಿ antimicrobial ಅಂಶ ಇರುವುದರಿಂದ ಕೂದಲ ಶುಷ್ಟತೆ ಹಾಗೂ ಒಡೆಯುವಿಕೆಯಿಂದ ತಡೆಗಟ್ಟುತ್ತದೆ. ಹಾಗೂ ಜೇನುತುಪ್ಪ ಕೂದಲನ್ನು ತೇವಗೊಳಿಸುತ್ತದೆ. ಎರಡು ಸ್ಪೂನ್ ಕ್ಯಾಸ್ಟರ್ ಆಯಿಲ್ ಅನ್ನು 1 ಸ್ಪೂನ್ ಜೇನುತುಪ್ಪದ ಜೊತೆಗೆ ಬಿಸಿ ಮಾಡಿ ನೆತ್ತಿಯ ಮೇಲೆ ಹಚ್ಚಿ, ನಿಧಾನವಾಗಿ ನಿಮ್ಮ ಬೆರಳುಗಳಿಂದ ಮಸಾಜ್ ಮಾಡಿ. 30 ನಿಮಿಷಗಳ ನಂತರ ಕೂದಲನ್ನು ನಂತರ ವಾಶ್ ಮಾಡಿ.